ಚಿತ್ರ : ಅಗ್ರಸೇನಾ
ನಿರ್ದೇಶನ : ಮುರುಗೇಶ್ ಕಣ್ಣಪ್ಪ
ನಿರ್ಮಾಪಕಿ : ಮಮತ ಜಯರಾಮ್ ರೆಡ್ಡಿ
ಸಂಗೀತ : ಎಂ.ಎಸ್. ತ್ಯಾಗರಾಜ್
ಛಾಯಾಗ್ರಹಣ : ಆರ್.ಪಿ.ರೆಡ್ಡಿ
ತಾರಾಗಣ : ಅಗಸ್ತ್ಯ ಬಳಗೆರೆ, ಅಮರ್ ವಿರಾಜ್, ರಾಮಕೃಷ್ಣ, ರಚನಾ ದಶರಥ್, ಉಗ್ರಂ ಮಂಜು, ಮೋಹನ್ ಜುನೇಜಾ, ರಾಕ್ ಲೈನ್ ಸುಧಾಕರ್, ತನಿಶಾ ರೆಡ್ಡಿ ಹಾಗೂ ಮುಂತಾದವರು…
ಇದನ್ನೂ ಓದಿ: “ಶೀಲ” ಚಿತ್ರದಲ್ಲಿ ರಾಗಿಣಿ ದ್ವಿವೇದಿ
ಸಾಮಾನ್ಯವಾಗಿ ಹಳ್ಳಿಯಲ್ಲಿ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ದಾರಿ ಸಾಕಷ್ಟಿದೆ. ಆದರೆ ಪಟ್ಟಣದಲ್ಲಿನ ರಂಗಿನ ಬದುಕಿನ ಭ್ರಮೆಯಲ್ಲಿ ತಮ್ಮ ಚಂದದ ಬದುಕಿಗೆ ತಾವೇ ಕೊಳ್ಳಿ ಇಟ್ಟುಕೊಳ್ಳುವವರು ಸಾಕಷ್ಟು ಜನರಿದ್ದಾರೆ. ಹಳ್ಳಿ ಬದುಕಿನ ನೆಮ್ಮದಿ, ಪ್ರೀತಿ ವಾತ್ಸಲ್ಯ , ತಂದೆ ಮಗನ ಸಂಬAಧ, ನಂಬಿಕೆ, ಗೌರವ, ಪಟ್ಟಣದ ಯಾಂತ್ರಿಕ ಬದುಕಿನಲ್ಲಿ ನಿರೀಕ್ಷಿಸುವುದೂ ತಪ್ಪಾಗುತ್ತದೆ. ಪಟ್ಟಣದ ಮಂದಿ ಬದುಕಿಗಾಗಿ ಮೋಸ, ವಂಚನೆ, ದ್ವೇಷ..ಹೀಗೆ `ನಾನೊಬ್ಬ ಚೆನ್ನಾಗಿದ್ದರೆ ಸಾಕು’ ಎಂಬAತೆ ಬಾಳುತ್ತಿದ್ದಾರೆ. ಹಳ್ಳಿ-ಪಟ್ಟಣ ಹೀಗೆ ಎರಡು ವೈರುಧ್ಯವಿರುವ ಸಬ್ಜೆಕ್ಟ್ ಮೂಲಕ ಮೂಲಕ `ಅಗ್ರಸೇನಾ’ ತೆರೆದುಕೊಳ್ಳುತ್ತದೆ. `ಅಗ್ರಸೇನಾ’ದ ಅಸಲಿ ಕಥೆ ಏನು? ರಾಮದೇವಪುರ ಎಂಬ ಊರಿನ ದೇವರಂತಹ ಯಜಮಾನರು ಸೂರಪ್ಪ (ರಾಮಕೃಷ್ಣ), ಇಡೀ ಹಳ್ಳಿಯ ಜನರಿಗೆಲ್ಲಾ ಅವರೇ ಸೂರು. ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದ ಹಿರಿಯ ಯಜಮಾನರ ಪುತ್ರ ಆದಿಶೇಷ (ಅಗಸ್ತ್ಯ ಬಳಗೆರೆ) ಊರ ಜನರ ರಕ್ಷಣೆಯ ಜೊತೆಗೆ ಹಳ್ಳಿಯಲ್ಲೇ ಎಲ್ಲರೂ ಬದುಕು ಕಟ್ಟಿಕೊಳ್ಳಬೇಕು ನೆಮ್ಮದಿಯಾಗಿರಬೇಕೆಂದು ನಿರ್ಧರಿಸುತ್ತಾನೆ. ಊರು ಬಿಟ್ಟು ಯಾರು ಹೊರಹೋಗದೆ ಇರುವುದಕ್ಕೂ ಒಂದು ಬಲವಾದ ಕಾರಣವಿರುತ್ತದೆ. ತಂದೆಗೆ ಕೊಟ್ಟ ಮಾತಿನಂತೆ ಹಳ್ಳಿ ಬಿಟ್ಟು ಎಂದು ಪಟ್ಟಣಕ್ಕೆ ಹೋಗಲ್ಲ ಎನ್ನುವ ಆದಿಶೇಷ ಕೂಡ ತಂದೆಯ ಮಾತಿನಂತೆ ನಡೆದುಕೊಳ್ಳುತ್ತಾನೆ. ಆದರೆ climax ಹಂತದಲ್ಲಿ ತಂದೆಗಾಗಿ ತಂದೆ ಕೊಟ್ಟ ಮಾತನ್ನು ತಾನೇ ಮುರಿಯುತ್ತಾನೆ.

ಇದನ್ನೂ ಓದಿ:ಅಪ್ಪು ಕಪ್ ಸೀಸನ್-2 ಸ್ಯಾಂಡಲ್ವುಡ್ ಬ್ಯಾಡ್ಮಿಂಟನ್ ಲೀಗ್ ಲೋಗೋ ಅನಾವರಣ ಮಾಡಿದ ಪ್ರಕಾಶ್ ಪಡುಕೋಣೆ
ಸೂರಪ್ಪನಿಗೆ ಅಸ್ತಮಾ ಹೆಚ್ಚಾಗಿ ಹೆಚ್ಚಿನ ಚಿಕಿತ್ಸೆಗಾಗಿ ಪಟ್ಟಣದ ಆಸ್ಪತ್ರೆಗೇ ಹೋಗಲೇ ಬೇಕಾಗುತ್ತದೆ. ಆದರೆ ಆದಿಶೇಷ ಹೋಗುವಂತಿಲ್ಲ. ಕಾರಣ ಆತನ ಹೆಂಡತಿ ತುಂಬು ಗರ್ಭೀಣಿ. ಹಾಗಾಗಿ ಮನೆಯ ಗುಮಾಸ್ತ ನೀಡಿದ ಸಲಹೆಯ ಮೇರೆಗೆ ಪಟ್ಟಣದಲ್ಲಿ ಬ್ರೋಕರ್ ಕೆಲಸ ಮಾಡಿಕೊಂಡಿರುವ ತನ್ನ ಮೊಮ್ಮಗ ಅಮರ್(ಅಮರ್ ವಿರಾಜ್) ನನ್ನು ಕರೆಸಿಕೊಂಡು, ತಂದೆಯನ್ನು ಪಟ್ಟಣಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಜವಾಬ್ದಾರಿಯನ್ನು ವಹಿಸುತ್ತಾನೆ. ಆದರೆ ಜನರಿಗೆ ವಂಚಿಸುವುದನ್ನೇ ತನ್ನ ಕಾಯಕ ಮಾಡಿಕೊಂಡಿದ ಅಮರ್ ಈ ವಿಷಯದಲ್ಲೂ ಹಾಗೇ ನಡೆದುಕೊಳ್ತಾನೆ. ಆದಿಶೇಷ ತಂದೆಯ ಆರೋಗ್ಯಕ್ಕೆ ಎಂದು ಕೊಟ್ಟ ಹಣದಲ್ಲಿ ಪ್ರೇಯಿಸಿ ಹಾಗೂ ಗೆಳೆಯರೊಂದಿಗೆ ಮಜಾ ಉಡಾಯಿಸುತ್ತಾನೆ. ನಮ್ಮ ಶಕ್ತಿ ಅನುಸಾರ ಬದುಕು ನಡೆಸಬೇಕು ಎನ್ನುವ ರಿಶಿಕಾ (ರಚನಾ ದಶರಥ್) ತನ್ನ ಪ್ರಿಯಕರ ಅಮರ್ ಮಾಡುತ್ತಿರುವ ಕೆಲಸ ಆಕೆಗೆ ಗೊತ್ತಿರುವುದಿಲ್ಲ , ಗೊತ್ತಾದ ಮೇಲೆ ಚೆನ್ನಾಗಿಯೇ ನಿಂದಿಸುತ್ತಾಳೆ, ಇದೇ ಸಂದರ್ಭದಲ್ಲಿ ಸಾಯುವ ಸ್ಥಿತಿಯಲ್ಲಿದ್ದ ಸೂರಪ್ಪನನ್ನು ಆಸ್ಪತ್ರೆಯಿಂದ ಯಾರೋ ಕಿಡ್ನಾಪ್ ಮಾಡಿಬಿಡುತ್ತಾರೆ.
ಇದನ್ನೂ ಓದಿ: ಯಶ್ ಮುಂದಿನ ಸಿನಿಮಾ ಶೀಘ್ರದಲ್ಲೇ ಘೋಷಣೆ : ನಂಜನಗೂಡಿನಲ್ಲಿ, ಸ್ಕ್ರಿಪ್ಟ್ ರೆಡಿ ಇದೆ ಎಂದ ರಾಕಿಂಗ್ ಸ್ಟಾರ್ ಯಶ್
ಅವರನ್ನು ನೋಡಿಕೊಳ್ಳುತ್ತಿದ್ದ ಡಾಕ್ಟರ್ ಚಿಕಿತ್ಸೆ ಫಲಕಾರಿಯಾಗಲಿಲ್ಲ ಸೂರಪ್ಪ ಸತ್ತುಹೋಗಿದ್ದಾನೆಂದು ಹೇಳಿ ಬೇರೆಯವರ ಶವವನ್ನು ಅಮರ್ ಜತೆ ಕಳಿಸಿಕೊಡುತ್ತಾರೆ. ಇತ್ತ ತಂದೆಗಾಗಿ ಎದುರು ನೋಡುತ್ತಿದ್ದ ಆದಿಶೇಷನಿಗೆ ಯಾರದೋ ಶವವನ್ನು ತಂದು ತೋರಿಸಿದ ಅಮರ್ ಮೇಲೆ ಕೋಪ ಉಕ್ಕಿ ಹರಿಯುತ್ತದೆ, ಹಿಗ್ಗಾ ಮುಗ್ಗ ಥಳಿಸಿಬಿಡುತ್ತಾನೆ. ಅಲ್ಲಿಗೆ ವಿರಾಮ! ಸೂರಪ್ಪ ಬದುಕುತ್ತಾನಾ? ಸೂರಪ್ಪನವರ ಕಿಡ್ನಾಪ್ ಸ್ಟೋರಿ ಏನು?…ಆದಿಶೇಷ ಅಪ್ಪನನ್ನು ಪತ್ತೆ ಹಚ್ಚುತ್ತಾನಾ? ಅಮರ್-ರಿಶಿಕಾ ಪ್ರೇಮ ಅಮರವಾಗುತ್ತದಾ? ಇದೆಕ್ಕೆಲ್ಲಾ ಉತ್ತರವನ್ನು ನಿರ್ದೇಶಕರು ತರೆಯ ಮೇಲೆ ಲಾಜಿಕ್ ಆಗಿ, ಕೆಲವೊಂದು ಕಡೆ ಲಾಜಿಕ್ ಇಲ್ಲೆದೆಯೂ ಕಟ್ಟಿಕೊಟ್ಟಿದ್ದಾರೆ. ತಂದೆ ಮಗನ ಬಾಂಧವ್ಯದ ಕಥೆಯನ್ನು ಮನ ಮುಟ್ಟುವಂತೆ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಮುರುಗೇಶ್ ಕಣ್ಣಪ್ಪ. ಹಳ್ಳಿಯ ಬದುಕಿನ ಚಿತ್ರಣದ ಜೊತೆಗೆ ಪಟ್ಟಣದ ಯಾಂತ್ರಿಕ ಜೀವನ, ಹಣದ ವ್ಯಾಮೋಹನದ ಬಗ್ಗೆ ಸಮರ್ಥವಾಗಿ ತೆರೆಯ ಮೇಲೆ ತಂದರೂ, ಚಿತ್ರದ ಆರ್ಟಿಸ್ಟಿಕ್ ವ್ಯಾಲ್ಯೂ ಮಿಸ್ ಆದ ಭಾಸವಾಗುತ್ತದೆ. ಚಿತ್ರಕಥೆಯಲ್ಲಿ ಕಮರ್ಶಿಯಲ್ ಅಂಶವನ್ನು ತೂರಿದ್ದರಿಂದ ಚಿತ್ರ ಕೆಲವೊಂದು ಕಡೆ ಜಾಳು ಜಾಳು ಅನ್ನಿಸುತ್ತದೆ. ಇನ್ನು, ಒಂದು ಕುಟುಂಬ ಸಮೇತ ನೋಡುವ ಸಾಂಸಾರಿಕ ಸಂಬoಧಗಳ ಚಿತ್ರವನ್ನು ನಿರ್ಮಿಸಿರುವ ಮಮತಾ ಜಯರಾಮ ರೆಡ್ಡಿಯವರು ಮೊದಲ ಚಿತ್ರದಲ್ಲೇ ಇನ್ನಷ್ಟು ಚಿತ್ರಗಳನ್ನು ನಿರ್ಮಿಸುವ ಸೂಚನೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಮನಸೂರೆಗೊಳ್ಳುತ್ತಿದೆ ‘ಪರಂವಃ’ ಚಿತ್ರದ `ನೂರಾರು ರಂಗಿರೋ..’ ಹಾಡು
ಚಿತ್ರದ ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡಿರುವ ಎಂ.ಎಸ್. ತ್ಯಾಗರಾಜ್ ರವರ ಕೆಲಸ ನಟರ ಸಾಧಾರಣ ಅಭಿನಯವನ್ನೂ ಅಸಾಧಾರಣ ಮಾಡಿದೆ. ಇನ್ನು ಆರ್.ಪಿ.ರೆಡ್ಡಿ ಅವರ ಕ್ಯಾಮೆರಾ ಕೆಲಸ ನಿರ್ದೇಶಕರು ಕನಸಿಗೆ ಒತ್ತಾಸೆಯಾಗಿದೆ. ಊರ ಮುಖಂಡರ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಮಕೃಷ್ಣ ತಮ್ಮ ಪಾತ್ರ ಘೋಷಣೆಯನ್ನು ಅದ್ಭುತವಾಗಿ ನಿರ್ವಹಿಸಿ `ಶವಕ್ಕೆ ಜೀವ ತುಂಬಿದ್ದಾರೆ’! ಅವರ ಮಗನಾಗಿ ಅಭಿನಯಿಸಿರುವ ಅಗಸ್ತ್ಯ ಬಳಗೆರೆ ನೋಡಲು ಕಟ್ಟುಮಸ್ತಿನ ಪ್ರತಿಭೆಯಾಗಿ ಕಂಡರೂ ನಟನೆಯಲ್ಲಿ ಇನ್ನಷ್ಟು ಮಾಗಬೇಕಿದೆ, ಸಾಹಸದ ಸನ್ನಿವೇಶಗಳನ್ನು ಖದರ್ ಆಗಿ ಎದುರಿದರಷ್ಟೇ ಸಾಲದು. ಇನ್ನು ನಾಯಕನಾಗಿ ಅಮರ್ ವಿರಾಜ್ ಅಭಿನಯ ಯಾಂತ್ರಿಕವಾಗಿದೆ, ಪ್ರೇಕ್ಷಕನಿಗೆ ಕನೆಕ್ಟ್ ಆಗುವುದು ಕಷ್ಟ-ಕಷ್ಟ. ನಾಯಕಿಯಾಗಿ ರಚನಾ ದಶರಥ್ ಇನ್ನಷ್ಟು ಹೋಮ್ ಮಾಡಿದ್ದರೆ ಪಾತ್ರ ಇನ್ನಷ್ಟು ಅದ್ಭುತವಾಗಿ ಮೂಡಿಬರುತ್ತಿತ್ತು. ಇನ್ನು, ಒಂದೇ ಒಂದು ಸೀನ್‌ನಲ್ಲಿ ಬಂದುಹೋಗುವ ರಂಗಭೂಮಿ ನಟ ವೆಂಕಟ್‌ರಾಜ್ (ಅಯ್ಯಪ್ಪ ಮಾಲೆ ಧಾರಿ) ಮನಸ್ಸಲ್ಲಿ ಉಳಿಯುತ್ತಾರೆ, ಚಿತ್ರತಂಡ ಇವರನ್ನು ಇನ್ನಷ್ಟು ಬಳಸಿಕೊಳ್ಳಬಹುದಿತ್ತೇನೋ. ಒಟ್ಟಿನಲ್ಲಿ, ಅದ್ದೂರಿಯಾಗಿ ಮೂಡಿ ಬಂದಿರುವ ಈ ಅಗ್ರಸೇನಾ ಸ್ವಲ್ಲದರಲ್ಲೇ `ಅಗ್ರಪಂಕ್ತಿ’ಯಲ್ಲಿ ನಿಲ್ಲಬಹುದಾದ ಚಿತ್ರದಿಂದ ವಂಚಿತವಾಯ್ತಾ?, ಕುಟುಂಬ ಸಮೇತರಾಗಿ ನೋಡುವಂತಹ ಅಪರೂಪದ ಕಥೆ ಹೊತ್ತ ಚಿತ್ರವನ್ನು ಕಣ್ತುಂಬಿಸಿಕೊಳ್ಳಬಹುದು.
-by B.NAVEEN KRISHNA PUTTUR