Sandalwood Leading OnlineMedia

ಅಂಬರೀಶ್ ಅವರಿಗಿಂತ ಹೆಚ್ಚು ಪೊಲೀಸ್ ಪಾತ್ರಗಳನ್ನು ನಿರ್ವಹಿಸಿದ ನಟ ಯಾರು?

ಸ್ಯಾಂಡಲ್‌ವುಡ್‌ನಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಕೂಡ ಪೊಲೀಸ್ ರೋಲ್ ಮಾಡಿದ್ದಾರೆ. ಸುಮಾರು 70 ಚಿತ್ರಗಳಲ್ಲಿ ಅಂಬಿ ಪೊಲೀಸ್ ಆಗಿಯೇ ಅಭಿನಯಿಸಿದ್ದಾರೆ. ಅಂತಹ ಅಂಬರೀಶ್ ಸಹ ಟೈಗರ್ ಪ್ರಭಾಕರ್ ಪೊಲೀಸ್ ಪಾತ್ರವನ್ನ ಕಂಡು ತುಂಬಾನೆ ಮೆಚ್ಚಿಕೊಂಡಿದ್ದರು. ಟೈಗರ್ ಪ್ರಭಾಕರ್ ಹೈಟು-ಪರ್ಸನಾಲಿಟಿ ಕಂಡು ಬೆರಗಾಗಿದ್ದರು. ಈ ಹಳೆ ಮಾತಿನ ಇನ್ನಷ್ಟು ಇಂಟ್ರಸ್ಟಿಂಗ್ ಮ್ಯಾಟರ್ ಇಲ್ಲಿದೆ ಓದಿ.

 

ಇದನ್ನೂ ಓದಿ:ಪ್ರಕಾಶ್ ರಾಜ್ ಹುಟ್ಟುಹಬ್ಬ : ನೇರನುಡಿಯಿಂದ ಟೀಕೆಗೆ ಒಳಗಾಗುವ ನಟನ ಬಗ್ಗೆ ಇಲ್ಲಿದೆ ಮಾಹಿತಿ

ಕನ್ನಡದ ಬೆಳ್ಳಿ ಪರದೆ ಮೇಲೆ ಪೊಲೀಸ್ ಪಾತ್ರಗಳನ್ನ (Police Role) ಬರ್ತಾನೆ ಇವೆ. ಕಾಲ ಕಾಲಕ್ಕೆ ಅವುಗಳನ್ನ ಆಯಾ ಹೀರೋಗಳು ಅದ್ಭುತವಾಗಿಯೇ ನಿಭಾಯಿಸಿದ್ದಾರೆ. ಹಾಗೆ ಕನ್ನಡದಲ್ಲಿ ಅತಿ ಹೆಚ್ಚು ಪೊಲೀಸ್ ಪಾತ್ರ ನಿರ್ವಹಿಸಿದ ಕಲಾವಿದರು ಕೆಲವೇ ಕೆಲವ್ರಿದ್ದಾರೆ. ಶೂಟಿಂಗ್ ಪ್ಲೇಸ್ (Shooting Place) ಬಿಟ್ಟು ಎಂದಿನಂತೆ ಹೊರಗೆ ಬಂದ್ರೂ ಜನ ಇವರನ್ನ ಪೊಲೀಸ್ ಅಂತಲೇ ತಿಳಿಯುವಷ್ಟು ಪರಿಣಾಮಕಾರಿಯಾಗಿಯೇ ಪಾತ್ರಗಳನ್ನ ನಿರ್ವಹಿಸಿದ್ದು ಇದೆ. ದೇವರಾಜ್, ಟೈಗರ್ ಪ್ರಭಾಕರ್, (Tiger Prabhakar) ಅಂಬರೀಶ್ ಹೀಗೆ ಇನ್ನು ಕೆಲವರು ಈ ಪೊಲೀಸ್ ಪಾತ್ರಗಳನ್ನ ನಿರ್ವಹಿಸಿದ್ದಾರೆ. ಆದರೆ ನಮಗೆ ತಟ್ಟ ಅಂತ ಈಗಲೂ ನೆನಪಿಗೆ ಬರೋ ಕೆಲವು ಹೆಸರುಗಳು ನಮ್ಮ ಮನಸ್ಸಿನಲ್ಲಿ ಇನ್ನೂ ಹಾಗೆ ಇವೆ. ಆ ಒಂದು ಇಂಟ್ರಸ್ಟಿಂಗ್ ವಿಚಾರದ ಒಂದು ಸ್ಟೋರಿ ಇಲ್ಲಿದೆ ಓದಿ.

ಅಂಬರೀಶ್ ಒಂದು ಮಾತು ಹೇಳಿದ್ರು…ಆ ಮಾತು ನಿಜ ನೋಡಿ!

ರೆಬಲ್ ಸ್ಟಾರ್ ಅಂಬರೀಶ್ ಕೆಲವಾರು ಚಿತ್ರಗಳಲ್ಲಿ ಪೊಲೀಸ್ ಪಾತ್ರಗಳನ್ನ ಮಾಡಿದ್ದಾರೆ. ಚಕ್ರವ್ಯೂಹ ಚಿತ್ರದಲ್ಲಿ ಅಂಬರೀಶ್ ಪೊಲೀಸ್ ಪಾತ್ರ ಮಾಡಿದ್ದರು. ಬಿಗ್ ಹಿಟ್ ಅಂತ ಸಿನಿಮಾದಲ್ಲೂ ಅಂಬರೀಶ್ ಪೊಲೀಸ್ ಪಾತ್ರವನ್ನೆ ಮಾಡಿದ್ದರು. ಹೀಗೆ ಅಂಬರೀಶ್ ಪೊಲೀಸ್ ಪಾತ್ರದ ಮೂಲಕವೇ ಜನರ ಹೃದಯ ಗೆದ್ದಿದ್ದರು.

ಇದನ್ನೂ ಓದಿ:ಕೋಟಿ ಕೋಟಿ ಒಡತಿಯಾದ್ರು ರಾಣಿ ಮುಖರ್ಜಿಗೆ ಇದೆ ಕೊರತೆ : ಗರ್ಭಪಾತ ನೆನೆದು ಕಣ್ಣೀರಿಟ್ಟ ನಟಿ

ಅಂಬರೀಶ್ ಅವರು ಪೊಲೀಸ್ ಪಾತ್ರ ಮಾಡೋದನ್ನ ಬಿಟ್ಮೇಲೆ ಕನ್ನಡದಲ್ಲಿ ಮತ್ತೊಬ್ಬ ನಾಯಕ ನಟ ಹುಟ್ಟಿಕೊಂಡರು. ಇವರ ಮೈಕಟ್ಟು ಮತ್ತು ಎತ್ತರಕ್ಕೆ ಎಲ್ಲರೂ ಮನಸೋಲೋರೇ ನೋಡಿ. ಡಾಕ್ಟರ್ ರಾಜಕುಮಾರ್ ಕೂಡ ಈ ಕಲಾವಿದನ ದೇಹದಾಡ್ಯವನ್ನ ಕಂಡು ಬೆರಗಾಗಿದ್ದರು.

ಟೈಗರ್ ಪ್ರಭಾಕರ್ ಪೊಲೀಸ್ ಪಾತ್ರದಲ್ಲಿಮಿಂಚಿಂಗ್ !

ಅಂಬರೀಶ್ ಬಳಿಕ ಟೈಗರ್ ಪ್ರಭಾಕರ್ ಹೆಚ್ಚು ಪೊಲೀಸ್ ಪಾತ್ರ ಮಾಡಿದ್ದರು. ಪೊಲೀಸ್ ಪಾತ್ರಗಳಿಗೆ ಹೇಳಿ ಮಾಡಿಸಿದಂತೇನೆ ಇದ್ದ ಟೈಗರ್ ಪ್ರಭಾಕರ್ ಸಾಕಷ್ಟು ಪೊಲೀಸ್ ಪಾತ್ರ ಮಾಡಿದ್ದರು. ಟೈಗರ್ ಪ್ರಭಾಕರ್ ದೇಹವನ್ನ ನೋಡಿಯೇ ಸ್ವತಃ ಅಂಬರೀಶ್ ಅವರೂ ಬೆರಗಾಗಿದ್ದರು ನೋಡಿ.

ಅಷ್ಟು ಒಳ್ಳೆ ಹೈಟ್ ಇರೋ ಪ್ರಭಾಕರ್ ಅಂಬರೀಶ್ ನಂತರ ಅತಿ ಹೆಚ್ಚು ಪೊಲೀಸ್ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದರು. ಅಂಬರೀಶ್ ಹೆಚ್ಚು ಕಡಿಮೆ ಒಂದ್ 70 ಚಿತ್ರಗಳಲ್ಲಿ ಪೊಲೀಸ್ ಪಾತ್ರ ಮಾಡಿದ್ದರು. ಟೈಗರ್ ಪ್ರಭಾಕರ್ ಅದಕ್ಕೂ ಹೆಚ್ಚು ಸಂಖ್ಯೆಯಲ್ಲಿಯೇ ಪೊಲೀಸ್ ಪಾತ್ರ ಮಾಡಿದ್ದರು ಅನಿಸುತ್ತದೆ.

ಇದನ್ನೂ ಓದಿ :RCB ಮ್ಯಾಚ್ ನಲ್ಲಿ ಅನುಷ್ಕಾ ಶರ್ಮಾ ಕಾಣಿಸಿಕೊಳ್ಳುತ್ತಾರಾ..?

ಪೊಲೀಸ್ ರೀತಿನೇ ಕಂಡಿದ್ದರು ಕನ್ನಡದ ಈ ಕಲಾವಿದರು!

ದೇವರಾಜ್ ಅವರು ವಿಲನ್ ಪಾತ್ರದ ಮೂಲಕವೇ ಕನ್ನಡ ಇಂಡಸ್ಟರಿಗೆ ಕಾಲಿಟ್ಟದ್ದರು. ಆದರೆ ಮುಂದೆ ಹೀರೋ ಕೂಡ ಆದ್ರು. ಆ ಮೇಲೆ ಅತಿ ಹೆಚ್ಚು ಹೆಚ್ಚು ಪೊಲೀಸ್ ಪಾತ್ರಗಳನ್ನೆ ಮಾಡಿದ್ದರು. ದೇವರಾಜ್ ಎಂದಿನಂತೆ ಹೊರಗಡೆ ಹೋದ್ರೆ, ಪೊಲೀಸ್‌ ಅಂತ ತಿಳಿದು ಅನೇಕ ಪೊಲೀಸರು ಸೆಲ್ಯೂಟ್ ಹೊಡೆದದ್ದು ಇದೆ.

ಶಂಕರ್ ನಾಗ್ ಕೂಡ ಪೊಲೀಸ್ ಪಾತ್ರ ಮಾಡಿದ್ದಾರೆ. ಸಾಂಗ್ಲಿಯಾನ ಸಿನಿಮಾದಲ್ಲಿ ಶಂಕರ್ ನಾಗ್ ಎಲ್ಲರ ದಿಲ್ ಕದ್ದರು. ಜನ ಇವರ ಪೊಲೀಸ್ ಪಾತ್ರಗಳನ್ನೂ ಕೂಡ ಒಪ್ಪಿಕೊಂಡಿದ್ದರು. ಕಿಚ್ಚ ಸುದೀಪ್ ಕೂಡ ಪೊಲೀಸ್ ಪಾತ್ರಗಳಲ್ಲಿ ಮಿಂಚಿದ್ದಾರೆ. ಕೆಂಪೇಗೌಡ ಸಿನಿಮಾದಲ್ಲಿ ಕಿಚ್ಚನ ಖದರ್ ಬೇರೆ ಇದೆ. ಇದನ್ನ ಕೂಡ ಜನ ಒಪ್ಪಿಕೊಂಡರು.

ಹೀಗೆ ಕನ್ನಡದಲ್ಲಿ ಪೊಲೀಸ್ ಪಾತ್ರಗಳಲ್ಲಿ ಕಾಣಿಸಿಕೊಂಡ ನಟರಲ್ಲಿ ಸಾಯಿ ಕುಮಾರ್ ಟಾಪ್ ಅಲ್ಲಿಯೇ ಇದ್ದಾರೆ ಅಂದ್ರೆ ತಪ್ಪಾಗೋದಿಲ್ಲ. ಅಷ್ಟು ಚಿತ್ರಗಳಲ್ಲಿ ಪೊಲೀಸ್ ರೋಲ್ ಮಾಡಿ ಎಲ್ಲರೂ ಮೆಚ್ಚುವಂತೇನೆ ಅಭಿನಯಿಸಿದದರು. ಈಗಲೂ ಪೊಲೀಸ್ ಅಂತ ಬಂದ್ರೆ ಸಾಯಿಕುಮಾರ್ ನೆನಪಿಗೆ ಬರುತ್ತಾರೆ ಅಂತಲೇ ಹೇಳಬಹುದು.

 

 

Share this post:

Related Posts

To Subscribe to our News Letter.

Translate »