ತೆಲುಗು ಸಿನಿಮಾದಲ್ಲಿ ತಮ್ಮದೇ ಒಂದು ಹವಾ ಕ್ರಿಯೆಟ್ ಮಾಡಿಕೊಂಡಿರುವ ಸಮಂತಾ ಹಲವು ವರ್ಷಗಳಿಂದ ಸಾರ್ವಜನಿಕ ಸಂಪರ್ಕದಿಂದಲೇ ದೂರವಿದ್ದರು. ಯಾವುದೇ ದೊಡ್ಡ ದೊಡ್ಡ ಇವೆಂಟ್ಗಳಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತಿರಲಿಲ್ಲ. ಕ್ಯಾಮರಾ ಕಣ್ಣುಗಳಿಂದ ಅನೇಕ ವರ್ಷಗಳ ಕಾಲ ದೂರವೇ ಇದ್ದರು. ತಾವಾಯ್ತು ಸಮ್ಮ ಸಿನಿಮಾ ಆಯ್ತು ಎಂದು ಇದ್ದುಕೊಂಡರವರು. ನಾಗಚೈತನ್ಯ ಮರು ಮದುವೆಯಾದಗಲೂ ಸಮಂತಾ ಬಗ್ಗೆ ಏನೇನೋ ಸುದ್ದಿಗಳು ಹರಿದರು ಕೂಡ ಅವರು ಎಂದಿಗೂ ರಿಯಾಕ್ಟ್ ಮಾಡಲಿಲ್ಲ. ಆದ್ರೆ ಸಮಂತಾ ಬಗ್ಗೆ ಅವರ ಅಭಿಮಾನಿಗಳಲ್ಲಿ ಒಂದು ಕುತೂಹಲ ಹಾಗೂ ಒಂದು ಆತಂಕ ಮನೆಮಾಡಿತ್ತು. ಸಮಂತಾ ಹೇಗಿದ್ದಾರೆ. ಅರೋಗ್ಯವಾಗಿದ್ದಾರಾ? ಯಾಕೆ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದರು. ಅಂತಹ ಅಭಿಮಾನಿಗಳಿಗೆ ಈಗ ಹಬ್ಬದೂಟ ಮಾಡಿದಂತಹ ಖುಷಿ ನೀಡಿದ್ದಾರೆ ಆ ನಟಿ.
ತುಂಬಾ ದಿನಗಳ ಬಳಿಕ ಕ್ಯಾಮರ ಕಣ್ಣಿಗೆ ಕಂಡಿರುವ ಸಮಂತಾ ಎಂದಿನಂತೆ ಅದೇ ಸೌಂದರ್ಯದ ಗಣಿಯಂತೆಯೇ ಇದ್ದಾರೆ. ವಿಶ್ವ ಪಿಕಲ್ ಬಾಲ್ ಲೀಗ್ನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವ ಸಮಂತಾ ಎಂದಿನಂತೆ ಚಿನುಕುರುಳಿಯಂತೆ ನಗು ನಗುತ್ತಲೇ ಇದ್ದಾರೆ. ಅದೇ ಹುರುಪು, ಅದೇ ಚೈತನ್ಯದಿಂದ ಲವಲವಿಕೆಯಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕ್ಯಾಮರಾದ ಮುಂದೆ ಮಾತನಾಡಿದ್ದಾರೆ. ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.
ಡಾರ್ಕ್ ಬ್ಲ್ಯೂ ಜಾಕೆಟ್ ಹಾಗೂ ಲೆಗ್ಗಿನ್ಸ್ ಹಾಕಿಕೊಂಡು ತಲೆಗೊಂದು ಟೋಪಿ ಹಾಕಿಕೊಂಡು ಮಿಂಚುತ್ತಿರುವ ಸಮಂತಾರನ್ನು ಕಂಡ ಅಭಿಮಾನಿಗಳು ಈ ಸೌಂದರ್ಯದ ಗಣಿ ಎಂದಿಗೂ ಬದಲಾಗದ ಗಿಣಿ ಎಂದು ಕೊಂಡಾಡುತ್ತಿದ್ದಾರೆ. ಅವರ ಹಿಂದಿನ ಸೌಂದರ್ಯ ರಾಶಿ ಮತ್ತು ಲವಲವಿಕೆಯನ್ನು ಕಂಡ ಅಭಿಮಾನಿಗಳು ಅಬ್ಬಾ.. ನಮ್ಮ ಸಮಂತಾ ಎಂದಿನಂತೆಯೇ ಇದ್ದಾರೆ. ಇಷ್ಟು ದಿನ ಹರಿದಾಡಿದ ಸುದ್ದಿಗಳೆಲ್ಲವೂ ಸತ್ತು ಹೋದವು ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಮತ್ತೊಂದು ಕಡೆ ಸಮಂತಾ ಎಂದಿನ ಬ್ಯೂಟಿಯನ್ನು ಹೊತ್ತುಕೊಂಡು ಈ ಇವೆಂಟ್ನಲ್ಲಿ ತುಂಬಾ ಚಟುವಟಿಕೆಯಿಂದ ಓಡಾಡಿಕೊಂಡಿದ್ದಾರೆ.