ಕನ್ನಡ ಚಿತ್ರರಂಗದಲ್ಲಿ ಸದ್ಯ ಮುಂಚೂಣಿಯಲ್ಲಿರುವ ನಾಯಕಿಯರ ಪೈಕಿ ಅದಿತಿ ಪ್ರಭುದೇವ ಕೂಡ ಒಬ್ಬರು. ‘ಧೈರ್ಯಂ’, ‘ಬಜಾರ್’, ‘ಸಿಂಗ’, ‘ರಂಗನಾಯಕಿ’, ‘ಬ್ರಹ್ಮಾಚಾರಿ’, ‘ಆನ’ ಮುಂತಾದ ಚಿತ್ರಗಳಲ್ಲಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ ತನ್ನ ಸಂಗಾತಿ ಯಶಸ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಅದಿತಿ ಮತ್ತು ಯಶಸ್ ಶೇರ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇಬ್ಬರೂ ಶೇರ್ ಮಾಡಿರುವ ಪ್ರತಿಯೊಂದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಸ್ಯಾಂಡಲ್ವುಡ್ ನ ಈ ಸುಂದರಿ ಇತ್ತೀಚಿಗಷ್ಟೆ ಬಹುಕಾಲದ ಗೆಳೆಯ ಯಶಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಸದ್ಯ ಅದಿತಿ ಪ್ರಭುದೇವ ಕೈಯಲ್ಲಿ ‘ತೋತಾಪುರಿ’, ‘ಚಾಂಪಿಯನ್’, ‘ತ್ರಿಬಲ್ ರೈಡಿಂಗ್’, ‘ಅಂದೊಂದಿತ್ತು ಕಾಲ’, ‘ಮಾಫಿಯಾ’ ಸೇರಿದಂತೆ ಸಾಕಷ್ಟು ಚಿತ್ರಗಳಿವೆ. ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿಯಾಗಿ ಗುರುತಿಸಿಕೊಂಡಿರುವ ಈ ಸ್ಯಾಂಡಲ್‌ವುಡ್ ಬ್ಯೂಟಿಗೆ ಸದ್ಯ ಅನೇಕ ಸಿನಿಮಾ ಆಫರ್ ಇದ್ದು ಬ್ಯುಸಿಯಾಗಿದ್ದಾರೆ.