ಈ ವಾರ ತೆರೆಗೆ ಬರಲಿದೆ ಮೊಬೈಲ್ ಮುಂಚಿನ ಪ್ರೇಮಕಥೆ “ಕಾಗದ” ; ಅರುಣ್ ಕುಮಾರ್ ಆಂಜನೇಯ ಅವರ ನಿರ್ಮಾಣದಲ್ಲಿ ರಂಜಿತ್ ಅವರು ನಿರ್ದೇಶಿಸಿರುವ “ಕಾಗದ” ಚಿತ್ರ ಈ ವಾರ, ಇದೇ ಜುಲೈ 5 ರಂದು ತೆರೆಗೆ ಬರುತ್ತಿದೆ.“ಕಾಗದ” ಮೊಬೈಲ್ ಬರುವ ಮುಂಚೆ ನಡೆದ ಪ್ರೇಮಕಥೆ. 2005 ರ ಕಾಲಘಟ್ಟದ ಕಥೆಯೂ ಕೂಡ. ಹಳ್ಳಿಹಳ್ಳಿಗಳ ನಡುವಿನ ವೈಷಮ್ಯದ ನಡುವೆ ಅರಳಿದ ಪ್ರೇಮಕಥೆಯೂ ಹೌದು.
ಆದಿತ್ಯ ಎಂಬ ನೂತನ ಪ್ರತಿಭೆ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಬಾಲನಟಿಯಾಗಿ ಜನಪ್ರಿಯರಾಗಿರುವ ಅಂಕಿತ ಜಯರಾಂ “ಕಾಗದ” ಚಿತ್ರದ ನಾಯಕಿ. ನೇಹಾ ಪಾಟೀಲ್ ವಿಶೇಷಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಲ ರಾಜ್ವಾಡಿ, ನೀನಾಸಂ ಅಶ್ವಥ್, ಮಠ ಕೊಪ್ಪಳ, ಶಿವಮಂಜು ಮುಂತಾದವರು ತಾರಾಬಳಗದಲ್ಲಿದ್ದಾರೆ. ಇನ್ನು, ವಿಶೇಷ ಪಾತ್ರದಲ್ಲಿ ಖ್ಯಾತ ನಟ ಎಂ.ಕೆ.ಮಠ ನಟಿಸಿದ್ದಾರೆ. ನಾಲ್ಕು ಹಾಡುಗಳಿರುವ ಚಿತ್ರಕ್ಕೆ ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ. ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ ಹಾಗೂ ಪವನ್ ಗೌಡ ಸಂಕಲನ ಈ ಚಿತ್ರಕ್ಕಿದೆ.