`ತಾನಾಜೀ‘ ಸಿನಿಮಾದ ನಂತರ ನಿರ್ದೇಶಕ ಓಂ ರಾವುತ್ ಯಾವ ರೀತಿಯ ಚಿತ್ರ ಮಾಡುತ್ತಾರೆ ಅನ್ನುವ ಕುತೂಹಲವಿತ್ತು, ಈಗ `ಆದಿಪುರುಷ್‘ ಮೂಲಕ ಎದುರಾಗಿದ್ದಾರೆ. ಪ್ರಭಾಸ್ ಈ ಸಿನಿಮಾದ ಹೀರೋ ಎಂದಾಗ ಪ್ರೇಕ್ಷಕರಲ್ಲಿ ಅದಾಗಲೇ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿಯಾಗಿತ್ತು. ರಾಮಾಯಣದ ಕಥೆಯನ್ನು ಈಗಿನ ಅಧುನಿಕ ತಂತ್ರಜ್ಞಾನ ಬಳಸಿ ಹೊಸ ರೀತಿಯಲ್ಲಿ ತೋರಿಸುವ ಓಂ ರಾವುತ್ ಉದ್ದೇಶ ಹೊತ್ತ ವಿಶ್ವಾದ್ಯಂತ `ಆದಿಪುರುಷ್‘ ತೆರೆಕಂಡು, ಚಿತ್ರದ `+&-‘ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಹಾಗಿದ್ದರೆ ಅಸಲಿಗೆ ಓಂ ರಾವುತ್ ಪ್ರತಿಭೆಗೆ ಪ್ರೇಕ್ಷಕ ತಲೆತೂಗಿದ್ದಾನಾ?
ಇದನ್ನೂ ಓದಿ: `ಗರಡಿ’ ಘಮಲಿನಲ್ಲಿ ಭಟ್ಟರ ಅಮಲು!
ಈಗಾಗಲೇ ಅನೇಕ ಪುಸ್ತಕ, ಸಿನಿಮಾ, ಧಾರಾವಾಹಿ, ಯಕ್ಷಗಾನ, ತೊಗಲುಗೊಂಬೆಯಾಟ.. ಹೀಗೆ ಸಾಕಷ್ಟು ಪ್ರಕಾರಗಳಲ್ಲಿ ರಾಮಾಯಣ ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿದೆ. `ಆದಿಪುರುಷ್‘ ಸಿನಿಮಾದಲ್ಲೂ ರಾಮಾಯಣದ ಕಥೆಯನ್ನೇ ಹೇಳಲಾಗಿದೆ. ಸಿನಿಮಾ ಆರಂಭವಾಗುವ ವೇಳೆಗೆ ರಾಘವ (ಪ್ರಭಾಸ್) ತನ್ನ ತಂದೆ ದಶರಥನಿಗೆ ನೀಡಿದ ಮಾತಿನಂತೆ ಪತ್ನಿ ಜಾನಕಿ (ಕೃತಿ ಸನೋನ್) ಹಾಗೂ ಸಹೋದರ ಲಕ್ಷö್ಮಣನ (ಸನ್ನಿ ಸಿಂಗ್) ಜೊತೆಗೆ ವನವಾಸಕ್ಕೆ ತೆರಳುತ್ತಾನೆ. ನಂತರ ರಾವಣ (ಸೈಫ್ ಅಲಿ ಖಾನ್) ಸನ್ಯಾಸಿ ರೂಪದಲ್ಲಿ ಬಂದು ಜಾನಕಿಯನ್ನು ಅಪಹರಿಸುತ್ತಾನೆ. ಸೀತೆಯನ್ನು ಹುಡುಕುತ್ತ ರಾಮ ಮತ್ತು ಲಕ್ಷ್ಮಣ ಲಂಕೆಗೆ ಆಗಮಿಸುತ್ತಾರೆ. ಇವರೊಂದಿಗೆ ಹನುಮಂತ ಕೂಡ ತನ್ನ ವಾನರ ಸೇನೆಯೊಂದಿಗೆ ರಾಮನ ಜತೆಯಾಗುತ್ತಾನೆ. ನಂತರ ರಾವಣನ ಅಂತ್ಯವಾಗುತ್ತದೆ. ಸೀತೆಯ ಜತೆಗೆ ರಾಮ ಅಯೋಧ್ಯೆಗೆ ಮರಳುತ್ತಾನೆ. ಎಲ್ಲರಿಗೂ ಗೊತ್ತಿರುವ ಈ ಕಥೆಯನ್ನೇ `ಆದಿಪುರುಷ್‘ನಲ್ಲಿ ತಂತ್ರಜ್ಞಾನದ ಅಸಮಾನ್ಯ ಸಾಧ್ಯತೆಗಳನ್ನು ಬಳಸಿ ಚಿತ್ರಿಸಲಾಗಿದೆ.
ಇದನ್ನೂ ಓದಿ: ಗಿನ್ನಿಸ್ ದಾಖಲೆ ಮಾಡುವತ್ತ “ದೇವರ ಆಟ ಬಲ್ಲವರಾರು”
ಎಲ್ಲರಿಗೂ ಗೊತ್ತಿರುವ ಕಥೆಗೆ ಹೊಸ ಆಯಾಮವನ್ನು ವಿಎಫ್‌ಎಕ್ಸ್ನ ಸಹಾಯದಿಂದ ನೀಡಲಾಗಿದ್ದು, ಈ ಹಿಂದಿನ ರಾಮಾಯಣ ಕುರಿತ ಸಿನಿಮಾಗಳ ಯಾವುದೇಛಾಯೆ ಇಲ್ಲದಂತೆ ಚಿತ್ರಿದಲಾಗಿದೆ. ಸಂಪೂರ್ಣ ಆಧುನಿಕ ತಂತ್ರಜ್ಞಾನದ ಮೂಲಕ ನಿರ್ದೇಶಕ ಓಂ ರಾವುತ್ ತಾನು ಬೋಲ್ಡ್&ಬ್ಯೂಟಿಫುಲ್ ಆಗಿ ಹೇಳಿದ್ದಾರೆ. ಅಚ್ಚರಿ ಹುಟ್ಟಿಸುವ ರೀತಿಯಲ್ಲಿ ವಿಎಫ್‌ಎಕ್ಸ್ ಬಳಕೆ ಮಾಡಿ, ಹೊಸ ರೂಪದಲ್ಲಿ ಕಥೆಯನ್ನು ಹೆಣೆದಿದ್ದಾರೆ. ಕೆಲವೊಂದು ಸಾಹಸ ದೃಶ್ಯಗಳು, ಪೃಕೃತಿಯ ಸೌಂದರ್ಯವನ್ನು ತೆರೆಯ ಮೇಲೆ ನೋಡಿ ಕಣ್ತುಂಬಿಕೊಳ್ಳುವುದೇ ಒಂದು ಸಂಭ್ರಮ.
ಇದನ್ನೂ ಓದಿ: ಕರ್ನಾಟಕದಲ್ಲಿಯೂ ರಿಲೀಸ್ ಆಗಲಿದೆ ಧೋನಿ ನಿರ್ಮಾಣದ ಚೊಚ್ಚಲ ಸಿನಿಮಾ LGM
ಸೀತೆಯನ್ನು ಅಪಹರಣ ಮಾಡುವ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದ್ದು ಜಟಾಯು ಹಾಗೂ ರಾವಣನ ನಡುವಿನ ಕಾಳಗದ ದೃಶ್ಯಗಳ ಮುಂದೆ ಬಾಲಿವುಡ್ ಚಿತ್ರಗಳು ಸಪ್ಪೆ ಸಪ್ಪೆ. ರಾಮ ಮತ್ತು ರಾವಣನ ನಡುವಿನ ಕ್ಲೆöÊಮ್ಯಾಕ್ಸ್ ಅಂತೂ ಕಣ್ಣಿಗೆ ಹಬ್ಬ.. ನಡು ನಡುವೆ ೩ಡಿ ಎಫೆಕ್ಟ್ನಲ್ಲಿ ತೂರಿ ಬರುವ ಬಾಣಗಳು ಬೆಚ್ಚಿಬೀಳಿಸುತ್ತವೆ ಸಿನಿಮಾದ ಕೆಲವು ಭಾಗಗಳಲ್ಲಿ ಮೇಲುಗೈ ಸಾಧಿಸಿರುವ ವಿಎಫ್‌ಎಕ್ಸ್, ಮತ್ತೆ ಕೆಲವು ಕಡೆ ಬೇಸರ ಮೂಡಿಸುತ್ತದೆ. ಉದಾಹರಣೆಗೆ ಸೀತೆಯನ್ನು ಅಪಹರಿಸುವಾಗ ರಾಮ ಓಡುತ್ತಿರುವ ದೃಶ್ಯವನ್ನು ಕ್ಲೋಸಪ್ ತೋರಿಸುವಾಗ ಅಸಹಜ ಅನ್ನಿಸುತ್ತದೆ. ಸೈಫ್ ಅಲಿ ಖಾನ್ ಅವರ ಲುಕ್ ಮತ್ತು ಅವರ ಹತ್ತು ತಲೆಗಳನ್ನು ತೋರಿಸಲು ಬಳಸಿರುವ ವಿಎಫ್‌ಎಕ್ಸ್ ತುಂಬಾ ಡಿಫೆರೆಂಟ್ ಆಗಿದ್ದು, ನಿರ್ದೇಶಕ ಓಂ ಹತ್ತು ತಲೆಯ ಮೂಲಕ ಮನುಷ್ಯನ ದ್ವಂದ್ವ ಮನೋಸ್ಥಿತಿಯನ್ನು ಒಂದೇ ದೃಶ್ಯದಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಆರಂಭದಲ್ಲಿ ವಿಚಿತ್ರ ಪ್ರಾಣಿಗಳ ಜೊತೆಗೆ ಪ್ರಭಾಸ್ ಫೈಟ್ ಮಾಡುವ ದೃಶ್ಯ ಏಕೆ ಬರುತ್ತದೆ ಎಂಬುದಕ್ಕೆ ನಿಖರ ಕಾರಣವಿಲ್ಲದೇ ಹೋದರೂ, ನಿರ್ದೇಶಕರು ರಾಮನ ಶಕ್ತಿಯ ಅನಾವರಣಕ್ಕಾಗಿ ಈ ದೃಶ್ಯವನ್ನು ಬಳಸಿರೋದು ಚಿತ್ರವನ್ನು ಇಂಟ್ರೆಸ್ಟಿAಗ್ ಆಗಿಸಿದೆ. ಕೆಲವು ಸೀನ್‌ಗಳಲ್ಲಿ ಪ್ರಭಾಸ್ ಅವರ ಲುಕ್ ಬಗ್ಗೆಯೂ ಗಮನ ನೀಡಲಾಗಿಲ್ಲ ಎಂದನಿಸಿದರೂ, ನಿರ್ದೇಶಕ ಓಂ, ರಾಮನನ್ನು ಒಬ್ಬ ಸಾಮಾನ್ಯ ಮಾನವನಂತೇ ತೋರಿಸುವ ಉದ್ದೇಶದಿಂದ, ಸೀತೆಯನ್ನು ಅಪಹರಿಸಿದ ಸಂದರ್ಭದಲ್ಲಿ ಫುಲ್‌ಶೇವ್ ತೋರಿಸದೆ ಸಹಜವಾಗಿಯೇ ಇರಿಸಿದ್ದಾರೆ. ಸಿನಿಮಾದ ಅವಧಿ ದೀರ್ಘವಾಗಿರುವುದು ‘ಆದಿಪುರುಷ್‘ನ ಮತ್ತೊಂದು ಹಿನ್ನಡೆಯೂ ಹೌದು ಪ್ಲಸ್ ಪಾಯಿಂಟ್ ಕೂಡ ಹೌದು. ಅದು ಹೇಗೆಂದು ಸಿನಿಮಾ ನೋಡಿಯೇ ಅರ್ಥ ಮಾಡಿಕೊಳ್ಳಬೇಕು. ಇನ್ನು, ಕನ್ನಡ ಡಬ್ ವರ್ಷನ್‌ಗಿಂತ ಮೂಲ ಭಾಷೆಯಲ್ಲಿಯೇ ನೋಡಿದರೆ ಚಿತ್ರದ ಪಾತ್ರದ ಭಾವನೆಗಳು ಹೆಚ್ಚು ಕಾಡಬಹುದು. ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್ ತಮ್ಮ ಪ್ರಭೆ ಬೀರಿದ್ದು. ಅಂಡರ್ ವಾಟರ್ ಸೀನ್ ಮೂಲಕ ಎಂಟ್ರಿಕೊಟ್ಟು, ಪ್ರೇಕ್ಷಕನ ಮನಸ್ಸಿಗೂ ಸುಲಭವಾಗಿ ಎಂಟ್ರಿ ಕೊಡುತ್ತಾರೆ. ಆರಂಭದಿ0ದಲೇ ಚಿತ್ರವನ್ನು ಹೆಗಲ ಮೇಲೆ ಹೊತ್ತುಕೊಂಡು ಸಾಗುವ ಪ್ರಭಾಸ್, ನವರಸಗಳನ್ನೂ ಲೀಲಾಜಾಲವಾಗಿ ತಮ್ಮ ಪಾತ್ರದ ಮೂಲಕ ಪ್ರೇಕ್ಷಕನಿಗೆ ದಾಟಿಸುತ್ತಾರೆ. ಇನ್ನು, ಸೈಫ್ ಅಲಿ ಖಾನ್‌ನ ರಾವಣನ ಲುಕ್‌ನಿಂದ ಅವರ ಲಕ್ ಬದಲಾಗುವ ಸಾಧ್ಯತೆ ನಿಚ್ಚಳವಾಗಿದೆ. ಹನುಮಂತನ ಪಾತ್ರ ಮಾಡಿರುವ ದೇವದತ್ತ ನಾಗೆ, ಮೊದಲ ದೃಶ್ಯದಿಂದಲೇ ಇಷ್ಟವಾಗುತ್ತಾರೆ. ಜಾನಕಿ ಪಾತ್ರವನ್ನು ಕೃತಿ ಸನೋನ್ ಅತ್ಯಂತ ಮನೋಜ್ಷವಾಗಿ ನಿಭಾಯಿಸಿದ್ದಾರೆ. ಲಕ್ಷö್ಮಣನಾಗಿ ಸನ್ನಿ ಸಿಂಗ್ ಅವರ ಅಭಿನಯ ಅಷ್ಟು ಲಕ್ಷಣವಾಗಿ ಕಾಣುವುದಿಲ್ಲ.
ಇದನ್ನೂ ಓದಿ: ಹೊಸ ಬ್ಯುಸಿನೆಸ್ ಗೆ ಕಾಲಿಟ್ಟ ಅಲ್ಲು ಅರ್ಜುನ್; ಹೇಗಿದೆ ಸ್ಟೈಲೀಶ್ ಸ್ಟಾರ್ ಒಡೆತನದ AAA ಸಿನಿಮಾಸ್…?
`ಆದಿಪುರುಷ್’ ಚಿತ್ರದ ಮೂಲಕ ಹೊಸ ಜಗತ್ತನ್ನೇ ಸೃಷ್ಟಿ ಮಾಡಿರುವ ಛಾಯಾಗ್ರಾಹಕ ಕಾರ್ತಿಕ್ ಪಳನಿ, ಕಲಾ ನಿರ್ದೇಶಕ ಸಾಗರ್ ಮಲಿ ಹಾಗೂ ವಿಎಫ್‌ಎಕ್ಸ್ ತಂಡ ನಿರ್ದೇಶಕ ಓಂ ಹಿಂದಿರುವ ದೈತ್ಯ ಶಕ್ತಿಗಳು. ಅತ್ಯುತ್ತಮ ಹಿನ್ನೆಲೆ ಸಂಗೀತವನ್ನು ನೀಡಿರುವ ಸಂಚಿತ್-ಅAಕಿತ್ ಕುಸುರಿ ಕೆಲಸ ಸೂಪರ್. ಅಜಯ್- ಅತುಲ್ ಸಂಗೀತ ಸಂಯೋಜನೆಯ `ಜೈ ಶ್ರೀರಾಮ್ ಜೈ ಶ್ರೀರಾಮ್ ರಾಜರಾಮ್..’ ಹಾಡು ಚಿತ್ರಮಂದಿರದಿAದ ಹೊರ ಬಂದ ಮೇಲು ಕೇಳಿಸುತ್ತಿರುತ್ತದೆ. ಚಿತ್ರಕ್ಕೆ ನಿರ್ಮಾಪಕರು ಎಗ್ಗಿಲ್ಲದೆ ಹಣ ಸುರಿದಿದ್ದಾರೆ. ತಾಂತ್ರಿಕವಾಗಿಯೂ `ಆದಿಪುರುಷ್’ ಭಾರತೀಯ ನಿನಿಮಾ ರಂಗಕ್ಕೊAದು `ಆದಿ’ ಹಾಕಿಕೊಟ್ಟಿದೆ. ನಿರ್ದೇಶಕ ಓಂ ರಾವುತ್ ಯಾವುದೇ ರಾಜಿ ಮಾಡಿಕೊಳ್ಳದೆ ತನ್ನ ವರ್ಷನ್‌ನ ರಾಮಾಯಣದ ಕಥೆಯನ್ನು ಅಚ್ಚುಕಟ್ಟಾಗಿ ತೆರೆಮೇಲೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಇನ್ನು, ಕನ್ನಡ ವರ್ಷನ್‌ಗಾಗಿ ಧ್ವನಿ ನೋಡಿದ ರವಿಶಂಕರ್, ಸಂತೋಷ್ ಸಿಂಧೆ, ಶಿವ ತೇಜಸ್ವಿ, ಪ್ರೀತಿ ಭಟ್ ಪ್ರಯತ್ನ ಸಣ್ಣದೇನಲ್ಲ. ಸದೇ ರೀತಿ, ವಿ.ನಾಗೇಂದ್ರ ಪ್ರಸಾದ್, ಕವಿರಾಜ್, ಪ್ರಮೋದ್ ಮರವಂತೆ ಅವರ ಸಾಹಿತ್ಯ, ರಘುನಿಡುವಳ್ಳಿ ಅವರ ಸಂಭಾಷಣೆ.. ಹಾಗೂ ಇವಲ್ಲವನ್ನೂ ನಿಭಾಯಿಸಿದ ಡಬ್ಬಿಂಗ್ ಡೈರೆಕ್ಟರ್ ರಾಘವೇಂದ್ರ.ಎಮ್. ನಾಯಕ್.. ಹೀಗೆ ಎಲ್ಲರ ಶ್ರಮ ಕನ್ನಡಿಗರಿಗೊಂದು ಅನೂಹ್ಯವಾದ ಅನುಭವ ನೀಡುವಲ್ಲಿ ಸಫಲವಾಗಿದೆ. ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಿಲ್ಲನ ಅಂತೆ-ಕAತೆಗಳಿಗೆ ತಲೆಕೆಡಿಸಿಕೊಂಡು `ಆದಿಪುರುಷ್’ ಮೂಲಕ `೩ಡಿ’ಯಲ್ಲಿ ರಾಮಯಾಣವನ್ನು ನೋಡದೇ ಹೋದರೆ ಒಂದು ವಿಭಿನ್ನ ಅನುಭವನ್ನು ಖಂಡಿತಾ ಮಿಸ್ ಮಾಡ್ಕೋತೀರಿ.
by -B.NAVEEN KRISHNA PUTTUR