ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾ ಬಿಡುಗಡೆ ಆಗ್ತಿದೆ. ಶುಕ್ರವಾರ ಸಿನಿಮಾ ತೆರೆಗಪ್ಪಳಿಸ್ತಿದ್ದು ಈಗಾಗಲೇ ದೇಶದ ಹಲವಡೆ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಕರ್ನಾಟಕದಲ್ಲಿ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಡಿಸ್ಟ್ರಿಬ್ಯೂಷನ್ ರೈಟ್ಸ್ ಕೊಂಡುಕೊಂಡಿದೆ. ದೊಡ್ಡಮಟ್ಟದಲ್ಲಿ ಈ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ. ಬೆಂಗಳೂರಿನಲ್ಲೂ ‘ಆದಿಪುರುಷ್’ ಹವಾ ಜೋರಾಗಿದೆ. ಓಂ ರಾವುತ್ ನಿರ್ದೇಶನದ ‘ಆದಿಪುರುಷ್’ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ನಾನಾ ಕಾರಣಗಳಿಂದ ಸಿನಿಮಾ ಸದ್ದು ಮಾಡ್ತಾನೇ ಬರ್ತಿದೆ. ಟೀಸರ್ ರಿಲೀಸ್ ನಂತರ ಚಿತ್ರತಂಡಕ್ಕೆ ಸಾಕಷ್ಟು ಹಿನ್ನಡೆ ಆಗಿತ್ತು. ಅದನ್ನೆಲ್ಲಾ ಮೀರಿ ಇದೀಗ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನಾಗಿ ನಟಿಸಿದ್ದರೆ ಸೀತೆಯಾಗಿ ಕೃತಿ ಸನೂನ್ ಕಾಣಿಸಿಕೊಂಡಿದ್ದಾರೆ. ರಾವಣನಾಗಿ ಸೈಫ್ ಅಲಿಖಾನ್, ಲಕ್ಷ್ಮಣನಾಗಿ ಸನ್ನಿ ಸಿಂಗ್, ಹನುಮಂತನಾಗಿ ದೇವದತ್ತ ಮಿಂಚಿದ್ದಾರೆ.
ಇದನ್ನೂ ಓದಿ: ತಮಿಳಿನ ‘ಪೋರ್ ತೋಝಿಲ್’ ಸಿನಿಮಾಗೆ ಭರಪೂರ ಮೆಚ್ಚುಗೆ
ರಾಮಾಯಣ ಕಾವ್ಯ ಆಧರಿಸಿ ಈಗಾಗಲೇ ಸಾಕಷ್ಟು ಕೃತಿಗಳು, ನಾಟಕಗಳು, ಧಾರಾವಾಹಿಗಳು, ಸಿನಿಮಾಗಳು ಬಂದೋಗಿದೆ. ಆದರೆ ಇಂದಿನ ತಂತ್ರಜ್ಞಾನ ಬಳಸಿ ಮತ್ತೊಮ್ಮೆ ಅದೇ ಕಥೆಯನ್ನು ಹೊಸ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ನಡೆದಿದೆ. 500 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಗ್ರಾಫಿಕ್ಸ್ ತಂತ್ರಜ್ಞಾನದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಭಾನುವಾರದಿಂದಲೇ ಕರ್ನಾಟಕದಲ್ಲಿ ‘ಆದಿಪುರುಷ್’ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಕೆಲವೆಡೆ ಟಿಕೆಟ್ ಬುಕ್ಕಿಂಗ್‌ಗೆ ಒಳ್ಳೆ ರೆಸ್ಪಾನ್ಸ್ ಕೂಡ ಸಿಕ್ತಿದೆ. ಕೆಲವೆಡೆ ಬೆಳ್ಳಂ ಬೆಳಗ್ಗೆ 6.30ಕ್ಕೆ ಶ್ರೀರಾಮನಾಗಿ ಪ್ರಭಾಸ್ ದರ್ಶನ ಆಗಲಿದೆ. ಸದ್ಯ ಬೆಂಗಳೂರಿನಲ್ಲಿ ತೆಲುಗು, ತಮಿಳು, ಕನ್ನಡ, ತೆಲುಗು, ಮಲಯಾಳಂ ಸೇರಿ ಒಟ್ಟು 471 ಶೋಗಳ ಬುಕ್ಕಿಂಗ್ ಓಪನ್ ಆಗಿದೆ. ತ್ರೀಡಿ ಹಾಗೂ ಟುಡಿ ವರ್ಷನ್ ಶೋಗಳ ಟಿಕೆಟ್ ಸಿಗುತ್ತಿದೆ.
ಇದನ್ನೂ ಓದಿ: ಧೂಳ್ ಎಬ್ಬಿಸುತ್ತಾ ಧೂಮಮ್…!?; ಮತ್ತೆ ಪವನ್ ಕಮಾಲ್?
ಬೆಂಗಳೂರಿನಲ್ಲಿ ಮೊದಲು ತೆಲುಗು, ಹಿಂದಿ ಶೋಗಳ ಬುಕ್ಕಿಂಗ್ ಶುರುವಾಗಿತ್ತು. ಇದಕ್ಕೆ ಕೆಲವರು ಬೇಸರ ವ್ಯಕ್ತಪಡಿಸಿದ್ದರು. ನಂತರ ಕನ್ನಡ ಶೋಗಳ ಬುಕ್ಕಿಂಗ್ ಓಪನ್ ಆಯಿತು. ಬೆಂಗಳೂರಿನಲ್ಲಿ ಸದ್ಯಕ್ಕೆ ಒಟ್ಟು 24 ಶೋಗಳ ಟಿಕೆಟ್ ಬುಕ್ಕಿಂಗ್ ನಡೀತಿದೆ. ಅದರಲ್ಲಿ ಟುಡಿ ವರ್ಷನ್ 2 ಶೋ ಸಿಕ್ಕಿದ್ರೆ 22 ತ್ರಿಡಿ ವರ್ಷನ್ ಶೋಗಳಿವೆ. ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್‌ನಲ್ಲಿ ಒಟ್ಟು 5 ಶೋಗಳು ಪ್ರದರ್ಶನವಾಗುತ್ತಿದೆ. ವೆಗಾ ಸಿಟಿ ಮಾಲ್‌ನಲ್ಲಿ ಈಗಾಗಲೇ ಒಂದು ಶೋ ಸೋಲ್ಡ್‌ಔಟ್ ಆಗಿದೆ.ಸದ್ಯದ ಮಟ್ಟಿಗೆ ತೆಲುಗು ಶೋಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಶುಕ್ರವಾರ ಸಿಕ್ಕಿರುವ 471 ಶೋಗಳಲ್ಲಿ 166 ಶೋಗಳು ಫಾಸ್ಟ್ ಫಿಲ್ಲಿಂಗ್ ಆಗ್ತಿದೆ. 53 ಹಿಂದಿ ಶೋಗಳಲ್ಲಿ 19 ಫಾಸ್ಟ್ ಫಿಲ್ಲಿಂಗ್ ಹಾದಿಯಲ್ಲಿದೆ. ಇನ್ನು ತಮಿಳು ವರ್ಷನ್‌ಗೆ 16 ಶೋ, ಮಲಯಾಳಂ ವರ್ಷನ್‌ಗೆ 2 ಶೋ ಸದ್ಯಕ್ಕೆ ಬೆಂಗಳೂರಿನಲ್ಲಿ ಸಿಕ್ಕಿದೆ.