Sandalwood Leading OnlineMedia

‘ಆದಿಪುರುಷ್’ ಕನ್ನಡ ಸೆಲೆಬ್ರೆಟಿ ಶೋನಲ್ಲಿ  ಯಾರೆಲ್ಲಾ ಭಾಗಿಯಾಗಲಿದ್ದಾರೆ ಗೊತ್ತಾ?

ಬಹುನಿರೀಕ್ಷಿತ ‘ಆದಿಪುರುಷ್’ ಸಿನಿಮಾ ಬಿಡುಗಡೆಗೆ 3 ದಿನ ಮಾತ್ರ ಬಾಕಿಯಿದೆ. ಕರ್ನಾಟಕದಲ್ಲೂ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಕರ್ನಾಟಕ ಥ್ರಿಯೇಟ್ರಿಕಲ್ ರೈಟ್ಸ್ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಕೊಂಡುಕೊಂಡಿದೆ. ಈಗಾಗಲೇ ಆನ್‌ಲೈನ್ ಬುಕ್ಕಿಂಗ್ ಶುರುವಾಗಿದ್ದು ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಇನ್ನು ‘ಆದಿಪುರುಷ್’ ಕನ್ನಡ ಶೋಗಳ ಬಗ್ಗೆ ಕೂಡ ವಿತರಕ ಕಾರ್ತಿಕ್ ಗೌಡ ಮಾಹಿತಿ ನೀಡಿದ್ದಾರೆ. ರಾಮಾಯಣ ಕಾವ್ಯ ಆಧರಿಸಿ ನಿರ್ಮಿಸಿರುವ ಈ ಪೌರಾಣಿಕ ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನಾಗಿ ಕಾಣಿಸಿಕೊಂಡಿದ್ದಾರೆ. ಓಂ ರಾವುತ್ ನಿರ್ದೇಶನದ ಈ ಚಿತ್ರದಲ್ಲಿ ಕೃತಿ ಸನೂನ್ ಸೀತೆಯಾಗಿ, ಸೈಫ್ ಅಲಿಖಾನ್ ರಾವಣನಾಗಿ ಸನ್ನಿ ಸಿಂಗ್ ಲಕ್ಷ್ಮಣನಾಗಿ ದೇವದತ್ತ ಹನುಮಂತನಾಗಿ ಬಣ್ಣ ಹಚ್ಚಿದ್ದಾರೆ. 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ದೊಡ್ಡದಾಗಿ ಸಿನಿಮಾ ರಿಲೀಸ್ ಆಗಲಿದೆ. ಪ್ರೇಕ್ಷಕರು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ:  ಬೆಂಗಳೂರಲ್ಲಿ ‘ಆದಿಪುರುಷ್’ ಕ್ರೇಜ್; ಒಟ್ಟು 471 ಶೋ, ಕನ್ನಡ ವರ್ಷನ್ ಬರೀ 24 ಶೋ!!

ಟೀ ಸೀರಿಸ್ ಹಾಗೂ ರೆಟ್ರೊಪ್ಲಿಸ್ ಸಂಸ್ಥೆಗಳು ಜಂಟಿಯಾಗಿ ‘ಆದಿಪುರುಷ್’ ಸಿನಿಮಾ ನಿರ್ಮಾಣ ಮಾಡಿವೆ. ಇವತ್ತಿನ ಕಾಲದ ತಂತ್ರಜ್ಞಾನ ಬಹಳ ತ್ರಿಡಿಯಲ್ಲಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಈಗಾಗಲೇ ಹಲವು ರೂಪಗಳಲ್ಲಿ ರಾಮಾಯಣ ನೋಡಿದ್ದರೂ ‘ಆದಿಪುರುಷ್’ ಸಿನಿಮಾ ಅದ್ಭುತ ಅನುಭವ ನೀಡಲಿದೆ. ಈಗಾಗಲೇ ಟ್ರೈಲರ್‌, ಸಾಂಗ್ಸ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ.ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ‘ಆದಿಪುರುಷ್’ ಕರ್ನಾಟಕ ರೈಟ್ಸ್ ಪಡೆದಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ತಯಾರಿ ನಡೀತಿದ್ದು ಭರ್ಜರಿ ಪ್ರೀಮಿಯರ್ ಶೋ ಪ್ಲಾನ್ ಮಾಡಲಾಗುತ್ತಿದೆ. ಈ ಬಗ್ಗೆ ವಿತರಕ ಕಾರ್ತಿಕ್ ಗೌಡ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಜೂನ್ 16ರಂದು ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳಿಗಾಗಿ ಮೆಗಾ ಈವೆಂಟ್ ಪ್ಲಾನ್ ಮಾಡುತ್ತಿರುವುದಾಗಿ ಹೇಳಿದ್ದಾರೆ. ನಗರದ ಒರಾಯನ್ ಮಾಲ್‌ನಲ್ಲಿ ಶೋ ಏರ್ಪಡಿಸುವ ಸಾಧ್ಯತೆಯಿದೆ.

ಇದನ್ನೂ ಓದಿ:   ಡಾ.ರಾಜ್ ಕಪ್..ದುಬೈನಲ್ಲಿ ನಡೆಯಲಿದೆ ರಾಜ್ ಕಪ್ ಸೀಸನ್-6 ಹರಾಜು ಪ್ರಕ್ರಿಯೆ

ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳ ಸೆಲೆಬ್ರೆಟಿಗಳು ಶೋಗಳು ಯಶಸ್ವಿಯಾಗಿ ನಡೀತಿದೆ. ‘777 ಚಾರ್ಲಿ’, ‘ಗಂಧದಗುಡಿ’ ಸೆಲೆಬ್ರೆಟಿ ಪ್ರೀಮಿಯರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ‘ಆದಿಪುರುಷ್’ ಸೆಲೆಬ್ರೆಟಿ ಶೋಗೆ ಕೆಆರ್‌ಜಿ ಸಂಸ್ಥೆ ಪ್ಲ್ಯಾನ್ ಮಾಡ್ತಿದೆ. ಶಿವಣ್ಣ, ಯಶ್, ಪ್ರಶಾಂತ್ ನೀಲ್, ಧನಂಜಯ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಮ್ಯಾ ಸೇರಿದಂತೆ ಸಾಕಷ್ಟು ತಾರೆಯರು ಸಿನಿಮಾ ನೋಡುವ ಸಾಧ್ಯತೆಯಿದೆ.

 

 

Share this post:

Related Posts

To Subscribe to our News Letter.

Translate »