ಬಹುಭಾಷಾ ನಟಿ ಹಾಗೂ ಮೂಲತಃ ಕನ್ನಡತಿಯಾದ ವೇದಿಕಾ, ಸದಾ ತಮ್ಮ ಫೋಟೋ ಹಾಗೂ ವಿಡಿಯೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಹಂಚಿಕೊಂಡಿರುವ ಅವರ ಬಿಕಿನಿ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ.

ಏಜಿಯನ್ ಸಮುದ್ರ ತೀರದಲ್ಲಿ ಕಡು ನೀಲಿ ಬಿಕಿನಿ ತೊಟ್ಟು ಪೋಸ್ ನೀಡಿದ ವೇದಿಕಾ, “ಸೂರ್ಯ ನನ್ನ ಏಕೈಕ ಫಿಲ್ಟರ್” ಎಂಬ ಕ್ಯಾಪ್ಷನ್ ಬರೆದಿದ್ದಾರೆ. ಈ ಚಿತ್ರಗಳು ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಬೆಂಬಲ ಮತ್ತು ಮೆಚ್ಚುಗೆಗಳನ್ನು ಪಡೆದಿವೆ. ಕೆಲವರು “ಸೆಕ್ಸಿ & ಸ್ಟೈಲಿಶ್” ಎಂದು ಕಾಮೆಂಟ್ ಮಾಡಿದರೆ, ಇನ್ನು ಕೆಲವರು ಅವರ ಫಿಟ್‌ನೆಸ್ ಹಾಗೂ ಬೋಲ್ಡ್ ಲುಕ್ ಅನ್ನು ಹೊಗಳಿದ್ದಾರೆ.

37ರ ಹರೆಯದಲ್ಲಿಯೂ ವೇದಿಕಾ ತಮ್ಮ ಫಿಟ್‌ನೆಸ್‌ನ್ನು ಕಾಪಾಡಿಕೊಂಡು, ಗ್ಲಾಮರಸ್ ಅವತಾರದಲ್ಲಿ ಮೆರೆದಿದ್ದಾರೆ. ಮದುವೆಯಾಗದಿದ್ದರೂ ಫಿಟ್‌ನೆಸ್ ಹಾಗೂ ಸ್ಟೈಲ್ ಮೂಲಕ ಅಭಿಮಾನಿಗಳಿಗೆ ಪ್ರೇರಣೆ ನೀಡುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಆಗಾಗ ಬಿಕಿನಿ ಫೋಟೋಗಳನ್ನು ಹಂಚಿಕೊಳ್ಳುವುದು ಅವರ ಹೊಸದಲ್ಲ.

2006ರಲ್ಲಿ ತಮಿಳು ಸಿನಿಮಾದ ಮೂಲಕ ಎಂಟ್ರಿ ಕೊಟ್ಟ ವೇದಿಕಾ, ಬಳಿಕ ಕನ್ನಡಕ್ಕೆ ಬಂದು ಗಣೇಶ್ ಜೊತೆ ‘ಸಂಗಮ’ ಚಿತ್ರದಲ್ಲಿ ನಟಿಸಿದರು. ‘ಶಿವಲಿಂಗ’, ‘ಗೌಡ್ರು ಹೋಟೆಲ್’, ‘ಗಣ’ ಮುಂತಾದ ಚಿತ್ರಗಳಲ್ಲಿ ಅವರು ಪ್ರೇಕ್ಷಕರ ಮನಸೆಳೆದಿದ್ದಾರೆ. ಈ ವರ್ಷ ಬಿಡುಗಡೆಯಾದ ಅವರ ಎರಡು ಸಿನಿಮಾಗಳು – ಕನ್ನಡದ ‘ಗಣ’ ಹಾಗೂ ತಮಿಳಿನ ‘ಗಜಾನ’.

ಇತ್ತೀಚಿನ ಬಿಕಿನಿ ಫೋಟೋಗಳೊಂದಿಗೆ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣರಾಗಿರುವ ವೇದಿಕಾ, ತಮ್ಮ ಬೋಲ್ಡ್ ಅಂಡ್ ಬ್ಯೂಟಿಫುಲ್ ಲುಕ್‌ನಿಂದ ಅಭಿಮಾನಿಗಳನ್ನು ಮೆಚ್ಚಿಸುತ್ತಿದ್ದಾರೆ.


