ರುಚಿ ರುಚಿಯಾದ ಆಹಾರ ನಮ್ಮ ಕಣ್ಣ ಮುಂದೆ ಇದ್ದರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಮನಸ್ಸು ಬೇಕು ಬೇಕು ಎನಿಸುತ್ತದೆ, ನಾಲಿಗೆ ರುಚಿಯನ್ನು ಸವಿಯಲು ಸಿದ್ದವಾಗಿರುತ್ತದೆ.
ಅಂತ ಸಮಯದಲ್ಲಿ ಡಯೆಟ್ ಅದು ಇದು ಅಂತೆಲ್ಲಾ ಖಂಡಿತಾ ತಲೆಗೆ ಬರುವುದೇ ಇಲ್ಲ. ಒಂದು ರೌಂಡ್ ದಪ್ಪ ಆದ ಮೇಲೆ ಮತ್ತೆ ಸಣ್ಣ ಆಗುವ ಯೋಚನೆ ಮಾಡ್ತೀವಿ. ವರ್ಕೌಟ್ ಮಾಡ್ತೀವಿ. ಆದರೆ ನಟ-ನಟಿಯರು ಅದೇಗೆ ಯಾವಾಗಲೂ ಫಿಟ್ ಅಂಡ್ ಫೈನ್ ಆಗಿರುತ್ತಾರೆ, ಯಾಕೆ ಫಿಟ್ನೆಸ್ ಅಂತ ಇವ್ರೆಲ್ಲಾ ಏನು ತಿನ್ನುವುದಕ್ಕೆ ಹೋಗುವುದಿಲ್ಲವಾ ಎಂಬ ಪ್ರಶ್ನೆ ಮೂಡುತ್ತದೆ.
ಅವರು ಕೂಡ ತಮಗಿಷ್ಟದ ಆಹಾರವನ್ನು ತಿಂದು ಫಿಟ್ನೆಸ್ ಮೆಂಟೈನ್ ಮಾಡುತ್ತಾರೆ. ಆ ಬಗ್ಗೆ ನಟಿ ತಪಸ್ವಿ ಪೂಣಚ್ಚ ತಮ್ಮ ಆಹಾರ ದಿನಚರಿ ಬಗ್ಗೆ `ಚಿತ್ತಾರ’ದೊಂದಿಗೆ ಹಂಚಿಕೊಂಡಿದ್ದಾರೆ.
ಇದನ್ನು ಓದು: ವಸಂತ್ ಆಗಿದ್ದವರು ಕುಮಾರ ಬಂಗಾರಪ್ಪ ಆಗಿ ಬದಲಾಗಿದ್ದೆಲ್ಲಿ..? ದೊಡ್ಡರಂಗೇಗೌಡರು ಹೇಳಿದ ಕಥೆ
ಮಾಡೆಲ್ ಕಮ್ ನಟಿ ತಪಸ್ವಿ ಪೂಣಚ್ಚ ಈಗಾಗಲೇ `ಹರಿಕಥೆಯಲ್ಲ ಗಿರಿಕಥೆ’ ಸಿನಿಮಾ ಮಾಡಿದ್ದಾರೆ. `ಗಜರಾಮ’ ಸಿನಿಮಾ ರಿಲೀಸ್ಗೆ ರೆಡಿಯಿದೆ. ಮೊದಲ ಸಿನಿಮಾದಲ್ಲಿಯೇ ನಟಿ ತಪಸ್ವಿ ಪೂಣಚ್ಚ ಅವರನ್ನು ಕಂಡು, ಅವರ ಫಿಟ್ನೆಸ್ಗೆ ಹಲವರು ಮಾರು ಹೋಗಿದ್ದರು. ಸ್ಪೂರ್ತಿಯಾಗಿ ಕೂಡ ತೆಗೆದುಕೊಂಡಿದ್ದರು. ಅಷ್ಟು ಬ್ಯೂಟಿಫುಲ್ ಆಗಿರುವುದಕ್ಕೆ ಅಷ್ಟೇ ಸ್ಟಿçಕ್ಟ್ ಡಯೆಟ್ ಕೂಡ ಅವರು ಫಾಲೋ ಮಾಡುತ್ತಾರೆ ಗೊತ್ತಾ..?
`ಎಲ್ಲಾ ಸಮಯದಲ್ಲೂ ಹೆಚ್ಚು ಇಷ್ಟ ಪಟ್ಟು ತಿನ್ನುವುದು ನಾನ್ ವೆಜ್. ಚಿಕನ್, ಫಿಶ್, ಮಟನ್ ಸಾಕಷ್ಟು ತಿಂತೀನಿ.
ಒಂದು ವೇಳೆ ಅಲ್ಲಿ ನಾನ್ ವೆಜ್ ಇಲ್ಲ. ಬರೀ ವೆಜ್ ಎಂದಾಗ ಪೊಟ್ಯಾಟೋ, ಪನ್ನೀರ್, ಮಶ್ರೂಮ್, ಬೇಬಿಕಾರ್ನ್ ತೆಗೆದುಕೊಳ್ಳುತ್ತೇನೆ.
ಸಮಯ ಇತ್ತು ಅಂದರೆ ಖಂಡಿತ ನಾನೇ ಕುಕ್ ಮಾಡ್ತೀನಿ. ನಾನು ಕೂರ್ಗ್ ಆಗಿರುವುದರಿಂದ ಔಟ್ ಸೈಡ್ ಕೂರ್ಗ್ ಫುಡ್ ಚೆನ್ನಾಗಿ ಸಿಗುವುದು ಕಷ್ಟ. ಹೀಗಾಗಿ ನಾನು ಹೆಚ್ಚು ಆದ್ಯತೆ ನೀಡುವುದು ಮನೆಯ ಊಟಕ್ಕೆ. ಅಕ್ಕಿ ರೊಟ್ಟಿ ಜೊತೆಗೆ ಎಗ್, ಸೊಪ್ಪಿನ ಪಲ್ಯ ಎಲ್ಲಾ ಮಾಡ್ತೀವಿ.
ಇದನ್ನು ಓದು:ಟ್ರೋಫಿ ಗೆದ್ದ ಸ್ಮೃತಿ ಮಂದಾನ ಕೊಹ್ಲಿ ಬಗ್ಗೆ ಹೇಳಿದ್ದೇನು ?
ಇಡ್ಲಿ, ವಡೆ, ದೋಸೆ ಎಲ್ಲಾ ತಿನ್ನುವುದಿಲ್ಲ ನಾನು. ಫುಡ್ ವಿಚಾರದಲ್ಲಿ ಡಯೆಟ್ ಮಾಡ್ತೀನಿ. ಶೂಟಿಂಗ್ ಇದ್ದಾಗ ಬೆಳಗ್ಗೆನೆ ಡ್ರೆöÊ ಫ್ರೂಟ್ಸ್ ಮಿಲ್ಕ್ ಶೇಕ್ ಕುಡಿದು ಹೋಗುತ್ತೇನೆ. ರಾಗಿ ರೊಟ್ಟಿ ತಿಂತೀನಿ. ಮಧ್ಯದಲ್ಲಿ ಫ್ರೂಟ್ಸ್ ತಿಂತೀನಿ. ರಾತ್ರಿಗೆ ರವಾ ಅಥವಾ ಚಪಾತಿ ತಿಂತೀನಿ. ಫುಡ್ನಲ್ಲೂ ಅಷ್ಟೇ ಹೆಚ್ಚು ಮಸಾಲ ಎಲ್ಲಾ ಇಷ್ಟ ಆಗಲ್ಲ.
ತುಂಬಾ ಲೈಟ್ ಫುಡ್ ಇಷ್ಟಪಡುತ್ತೀನಿ. ಅಮ್ಮ ಮಾಡಿಕೊಡುವ ಅಕ್ಕಿ ರೊಟ್ಟಿ ತುಂಬಾ ಇಷ್ಟ. ಅದಕ್ಕೆ ಚಿಕನ್ ಕರಿ ಅಥವಾ ಎಗ್ ಬುರ್ಜಿ ಇದ್ದರಂತೂ ಸಖತ್ ಕಾಂಬಿನೇಷನ್’ ಎಂದು ತಮ್ಮಿಷ್ಟದ ಆಹಾರ ಹಾಗೂ ಅನುಸರಿಸುವ ಕ್ರಮದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನು ಓದು:ಟ್ರೋಫಿ ಗೆದ್ದ ಸ್ಮೃತಿ ಮಂದಾನ ಕೊಹ್ಲಿ ಬಗ್ಗೆ ಹೇಳಿದ್ದೇನು ?