Sandalwood Leading OnlineMedia

Holi Festival: ಹೋಳಿ ಹಬ್ಬದಂದು ಕಲರ್ ಕಲರ್ ಹಾಡಿಗೆ ನಟಿ ಸುಧಾರಾಣಿ ಮಸ್ತ್ ಸ್ಟೆಪ್ಸ್

ಸ್ಯಾಂಡಲ್​ವುಡ್ (Sandalwood) ಹಿರಿಯ ನಟಿಯರು ಈಗ ಸೋಷಿಯಲ್ ಮೀಡಿಯಾದಲ್ಲಿ (Social Media) ಆ್ಯಕ್ಟಿವ್ ಆಗಿದ್ದಾರೆ. ಚಂದ ಚಂದದ ರೀಲ್ಸ್, ಫೊಟೋಸ್, ವಿಡಿಯೋಗಳನ್ನು (Videos) ಶೇರ್ ಮಾಡುತ್ತಿದ್ದಾರೆ. ಈ ಮೂಲಕ ಮತ್ತೆ ತಮ್ಮ ನೆಚ್ಚಿನ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಈ ನಟಿ ಸುಧಾರಾಣಿ (Sudharani) ಅವರು ಹೋಳಿ ಹಬ್ಬವನ್ನು (Holi Festival) ಆಚರಿಸಿದ್ದಾರೆ. ಈ ಸಂದರ್ಭ ನಟಿ ಬಣ್ಣಗಳಲ್ಲಿ ರಂಗಿನ ಆಟವನ್ನು ಆಡಿ ಡ್ಯಾನ್ಸ್ ಮಾಡಿ, ರೀಲ್ಸ್ ಮಾಡಿ ಫುಲ್ ಸಂತೋಷ ಪಟ್ಟಿದ್ದಾರೆ.

ಈ ಹೋಳಿ ಹಬ್ಬದ ಬಣ್ಣ ನಮ್ಮ ಜೀವನದಲ್ಲಿ ಖುಷಿ, ಆರೋಗ್ಯವನ್ನು ತರಲಿ. ಬಣ್ಣದ ಬದುಕನ್ನು ಸಂಭ್ರಮಿಸೋಣ ಎಂದು ಸುಧಾರಾಣಿ ಅವರು ತಮ್ಮ ರೀಲ್ಸ್ ವಿಡಿಯೋಗೆ ಕ್ಯಾಪ್ಶನ್ ಬರೆದಿದ್ದಾರೆ.

ನಟಿಯ ರೀಲ್ಸ್​ಗೆ 2000ಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಅವರ ಅಭಿಮಾನಿಗಳು ಎವರ್​ಗ್ರೀನ್ ನಟಿ ಎಂದು ಕಮೆಂಟ್ ಮಾಡಿ ಹೊಗಳಿದ್ದಾರೆ. ಇನ್ನೂ ಕೆಲವರು ಕಮೆಂಟ್ ಬಾಕ್ಸ್​ನಲ್ಲಿ ರೆಡ್ ಹಾರ್ಟ್ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ.

ಅಂತೂ ಸುಧಾರಾಣಿ ಅವರು ತುಂಬಾ ಸಂಭ್ರಮದಲ್ಲಿ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ನಟಿ ಬ್ಲ್ಯಾಕ್ ಪ್ಯಾಂಟ್ ಧರಿಸಿ ವೈಟ್ ಶರ್ಟ್ ಧರಿಸಿದ್ದರು. ತಲೆಗೆ ಮುಂಡಾಸು ಕಟ್ಟಿ ಕೂಲಿಂಗ್ ಗ್ಲಾಸ್ ಇಟ್ಟು ಮಾಸ್ ಲುಕ್​​ನಲ್ಲಿ ಮಿಂಚಿದ್ದಾರೆ.

ಸ್ವಸ್ಥಿಕ್ ಸಿನಿಮಾದ ಕಲರ್ ಕಲರ್ ಸಾಂಗ್

ನಟಿ ಸ್ವಸ್ಥಿಕ್ ಸಿನಿಮಾದ ಕಲರ್ ಕಲರ್ ಸಾಂಗ್​ಗೆ ಡ್ಯಾನ್ಸ್ ಮಾಡಿದ್ದಾರೆ. ಈ ಸಿನಿಮಾವನ್ನು ನಟ ಉಪೇಂದ್ರ ನಿರ್ದೇಶಿಸಿದ್ದಾರೆ. ಈ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದನ್ನು ಎಸ್​​.ಪಿ. ಬಾಲಸುಬ್ರಮಣ್ಯಂ ಹಾಡಿದ್ದಾರೆ. ಈ ಸಿನಿಮಾದಲ್ಲಿ ರಾಘವೇಂದ್ರ ರಾಜ್​ಕುಮಾರ್, ವಿಜಯಲಕ್ಷ್ಮಿ ನಟಿಸಿದ್ದಾರೆ.

ಕಿರುತೆರೆಯಲ್ಲಿ ಮಿಂಚುತ್ತಿರುವ ಬೆಳ್ಳಿತೆರೆಯ ಸುಂದರಿ

ಸುಧಾರಾಣಿ ಈಗ ಝೀ ಕನ್ನಡದಲ್ಲಿ ಪ್ರಸಾರವಾಗುವ ಸೀರಿಯಲ್ ಶ್ರೀರಸ್ತು ಶುಭಮಸ್ತುವಿನಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ನಟಿ ಸುಧಾರಾಣಿ. ಹೀರೋ ಪಾತ್ರದಲ್ಲಿ ನಮ್ಮನೆ ಯುವರಾಣಿ ಖ್ಯಾತಿಯ ಅನಿ ಅಂದ್ರೆ ದೀಪಕ್ ಅಭಿನಯಿಸಿದ್ದಾರೆ.

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸುಧಾರಾಣಿ ಅವರು ತುಳಸಿ ಎಂಬ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಸೀರಿಯಲ್‍ನಲ್ಲಿ ಇಬ್ಬರು ಮಕ್ಕಳ ತಾಯಿ. ಕುಟುಂಬಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವವಳು ತುಳಸಿ. ಈ ಧಾರಾವಾಹಿಯಲ್ಲಿ ಅತ್ತೆಯ ಪಾತ್ರಕ್ಕೆ ಬೆನ್ನೆಲುಬಾಗಿ ನಿಲ್ಲುವವಳೇ ಸೊಸೆ. ಹೊರಜಗತ್ತಿಗೆ ತುಳಸಿಯನ್ನು ಪರಿಚಯಿಸುವವಳೇ ಆಕೆಯ ಸೊಸೆ. ಈ ಕಥೆ ವಿಭಿನ್ನವಾಗಿದೆ ಎಂದು ಸುಧಾರಾಣಿ ಅವರು ಹೇಳಿದ್ದಾರೆ.

 

ನಟಿಯ ಮೊದಲ ಸಿನಿಮಾ ಬಂದು 38 ವರ್ಷ

ಕನ್ನಡದ ಆನಂದ್ ಸಿನಿಮಾ ಬಂದು 38 ವರ್ಷ ಕಳೆದಿದೆ. ಈ 38 ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಆಗಿವೆ. ಚಿತ್ರದ ನಾಯಕ ಶಿವಣ್ಣ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಸೋಲು-ಗೆಲುವು ಎರಡನ್ನೂ ಕಂಡಿದ್ದಾರೆ. ಈ ಚಿತ್ರದ ಮೂಲಕವೇ ನಾಯಕಿಯಾಗಿದ್ದ ನಟಿ ಸುಧಾರಾಣಿ ಕೂಡ ಹಲವು ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ.

ಆದರೆ ಇದೀಗ ಸುಧಾರಾಣಿ ಅವರು ಬೆಳ್ಳಿ ಪರದೆಯಿಂದ ಪುಟ್ಟ ಪರದೆಗೆ ಬಂದಿದ್ದಾರೆ. ಶ್ರೀರಸ್ತು ಶುಭಮಸ್ತು ಸೀರಿಯಲ್‌ ನಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಹೀಗೆ ಬಣ್ಣದ ನಂಟು ಉಳಿಸಿಕೊಂಡು ನಟಿ ಸುಧಾರಾಣಿ ಮುಂದೆ ಸಾಗುತ್ತಿದ್ದಾರೆ. ಇದೀಗ ಇವರು ನಾಯಕಿಯಾಗಿ ಇಂಡಸ್ಟ್ರಿಗೆ ಬಂದು 38 ವರ್ಷ ಪೂರ್ಣಗೊಂಡಿದೆ.

 

Share this post:

Related Posts

To Subscribe to our News Letter.

Translate »