Sandalwood Leading OnlineMedia

ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ಗೆ ʻಕಿಸ್‌ʼ ಬೆಡಗಿ : ರೊಮ್ಯಾನ್ಸ್‌ ಮಾಡ್ತಿರೋದು ಯಾರ ಜೊತೆಗೆ..?

ರಶ್ಮಿಕಾ ಅವರಂತೆಯೇ ಸ್ಯಾಂಡಲ್‌ವುಡ್‌ನಿಂದ ಕಾಣೆಯಾದ ಶ್ರೀಲೀಲಾ, ಸದ್ಯ ಪಕ್ಕದ ಆಂಧ್ರದಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಕೆಲವರು ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಅಲಿ ಖಾನ್ ಅಭಿನಯದ ಚೊಚ್ಚಲ ಚಿತ್ರಕ್ಕೆ ಶ್ರೀಲೀಲಾ ನಾಯಕಿ ಅಂದರೆ, ಇನ್ನೂ ಕೆಲವರು ವರುಣ್ ಧವನ್‌ ಗೆ ನಾಯಕಿಯಾಗುವ ಮೂಲಕ ಶ್ರೀಲೀಲಾ ಹಿಂದಿ ಉದ್ಯಮವನ್ನು ಪ್ರವೇಶ ಮಾಡಲಿದ್ದಾರೆ ಎಂದು ಹುಯಿಲೆಬ್ಬಿಸಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವುದೂ ಅಧಿಕೃತವಾಗಿಲ್ಲ. ಚಿತ್ರತಂಡಗಳಿಂದ ಅಧಿಕೃತವಾಗಿ ಘೋಷಣೆಯಾಗಿಲ್ಲ. ಚಿತ್ರ ಸೆಟ್ಟೇರಿಲ್ಲ. ಇದರ ನಡುವೆ ಈಗ ಶ್ರೀಲೀಲಾ ಕಾರ್ತಿಕ್ ಆರ್ಯನ್‌ಗೆ ನಾಯಕಿಯಾಗಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿದೆ. ಮುಂಬೈನಲ್ಲಿ ಈ ಕುರಿತು ವ್ಯಾಪಕವಾದ ಚರ್ಚೆ ಕೂಡ ನಡೆಯುತ್ತಿದೆ.

ಬಾಲಿವುಡ್‌ನ ಪ್ರಖ್ಯಾತ ನಿರ್ದೇಶಕ ಅನುರಾಗ್ ಬಸು ಸದ್ಯ ಆಶಿಕಿಯ ಮೂರನೇ ಭಾಗದ ತಯಾರಿಯನ್ನು ನಡೆಸಿದ್ದಾರೆ. ಕಾರ್ತಿಕ್ ಆರ್ಯನ್ ಈ ಚಿತ್ರದಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇನ್ನು ಹಿಂದೆ ಇದೇ ಚಿತ್ರಕ್ಕೆ ಅನಿಮಲ್‌ ಚಿತ್ರದ ನಾಯಕಿ ತೃಪ್ತಿ ದಿಮ್ರಿಯವರನ್ನು ನಾಯಕಿಯ ಪಾತ್ರಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಆ ನಂತರ ಅದೇನಾಯ್ತೋ ? ತೃಪ್ತಿ ದಿಮ್ರಿ ಈ ಚಿತ್ರದಿಂದ ಹೊರ ಬಂದರು. ತೃಪ್ತಿಯ ಜಾಗಕ್ಕೆ ಈಗ ಶ್ರೀಲೀಲಾ ಬಂದಿದ್ದಾರೆ ಎನ್ನುವುದು ಲೇಟೆಸ್ಟ್ ನ್ಯೂಸ್.

ಅಂದ್ಹಾಗೇ ಅನುರಾಗ್ ಬಸು ತಮ್ಮ ಈ ಚಿತ್ರಕ್ಕೆ ಮೊದಲು ಆಶಿಕಿ 3 ಎಂದು ಹೆಸರನ್ನಿಟ್ಟಿದ್ದರು. ಆದರೆ ಈಗ ಚಿತ್ರದ ಶೀರ್ಷಿಕೆಯನ್ನು ಬದಲಿಸುವ ಆಲೋಚನೆಯನ್ನು ಅನುರಾಗ್ ಬಸು ಮಾಡುತ್ತಿದ್ದಾರೆ. ನಿಜಕ್ಕೂ ಚಿತ್ರಕ್ಕೆ ಅನುರಾಗ್ ಬಸು ಬೇರೆ ಟೈಟಲ್ ಇಡ್ತಾರಾ ಅಥವಾ ಆಶಿಕಿ 3 ಟೈಟಲ್‌ ಜೊತೆಯಲ್ಲಿಯೇ ಮುಂದುವರೆಯುತ್ತಾರಾ ಎನ್ನುವುದಕ್ಕೆ ಉತ್ತರ ಸ್ವಲ್ಪ ದಿನಗಳಲ್ಲಿ ಸಿಗಲಿದೆ. ಮಿಕ್ಕಂತೆ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಜೊತೆ ಈ ಚಿತ್ರದಲ್ಲಿರುವ ಸ್ಟಾರ್ ಕಾಸ್ಟ್ ಬಗ್ಗೆ ಕೂಡ ಅನುರಾಗ್ ಬಸು ಮಾಹಿತಿಯನ್ನು ಹಂಚಿಕೊಂಡಿಲ್ಲ. ಮಾರ್ಚ್‌ನಿಂದ ಚಿತ್ರದ ಚಿತ್ರೀಕರಣ ಪ್ರಾರಂಭವೆನ್ನುವ ವಿಚಾರವನ್ನು ಮಾತ್ರ ಅನುರಾಗ್ ಬಸು ಹೇಳಿದ್ಧಾರೆ.

Share this post:

Translate »