ಟಾಲಿವುಡ್ ಸ್ಟಾರ್ ನಟಿ ಸಮಂತಾ ಇತ್ತೀಚೆಗೆ ನಡೆದ ವಿಶ್ವ ಪಿಕಲ್ ಬಾಲ್ ಲೀಗ್ನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಶಾಕ್ ಕೊಟ್ಟಿದ್ದರು. ಆದ್ರೆ ಇದೀಗ ಮತ್ತೊಂದು ಹೊಸ ಫೋಟೋದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ ಸ್ಯಾಮ್. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ ನಟಿ ಸಮಂತ. ನಟಿ ಸಮಂತಾ ವಿಭಿನ್ನವಾದ ಹೇರ್‌ಸ್ಟೈಲ್‌ನೊಂದಿಗೆ ಫೋಟೋಶೂಟ್ ಮಾಡಿಸಿ ಶಾಕ್ ಕೊಟ್ಟಿದ್ದಾರೆ. ಇನ್ನೂ ನಟಿಯ ದಿಢೀರ್ ಬದಲಾವಣೆಗೆ ಕಾರಣವೇನು ಅಂತ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.
ಮಯೋಸೈಟಿಸ್ ಕಾಯಿಲೆಯಿಂದ ಬಳಲುತ್ತಿದ್ದ ಸಮಂತಾ ಸಿನಿಮಾರಂಗದಿಂದ ದೂರವಾಗಿದ್ದಾರೆ. ಈಗ ಮತ್ತೆ ಸಿನಿಮಾಗಳಲ್ಲಿ ನಟಿಸಲು ಶುರುಮಾಡಿದ್ದಾರೆ. ಸಮಂತಾ ಬಾಲಿವುಡ್‌ನಲ್ಲಿ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ನಡುವೆ ನಟಿ ಸಮಂತಾ ಅಚ್ಚರಿಯ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಚಿಕ್ಕ ಕೂದಲಿನೊಂದಿಗೆ ಪುರುಷನಂತೆ ಕಾಣಿಸಿಕೊಂಡಿದ್ದಾರೆ. ಆದ್ರೆ ಈ ಹೊಸ ಲುಕ್ ಸಿನಿಮಾಗಾಗಿ ಅಲ್ಲ, ಪ್ರಸಿದ್ಧ ಹಾಲಿವುಡ್ ಪತ್ರಿಕೆಯ ಮುಖಪುಟಕ್ಕಾಗಿ ಸಮಂತಾ ಹೀಗೆ ಬದಲಾಗಿದ್ದಾರೆ ಎನ್ನಲಾಗಿದೆ. ಹಾಲಿವುಡ್‌ನಲ್ಲಿ ಅವಕಾಶಗಳನ್ನು ಪಡೆಯಲು ಹೀಗೆ ಫೋಟೋಶೂಟ್ ಮಾಡಿಸಿದ್ದಾರೆ ಎನ್ನಲಾಗಿದೆ. ಸಮಂತಾ ಅವರ ಈ ಫೋಟೋಶೂಟ್ ನೋಡಿದ ನೆಟ್ಟಿಗರು ಅವರಿಗೆ ಏನಾಯ್ತು ಎಂದು ಪ್ರಶ್ನಿಸುತ್ತಿದ್ದಾರೆ.
ಇತ್ತೀಚೆಗೆ ನಟಿ ಸಮಂತಾ ಹೆಸರು ಖ್ಯಾತ ನಿರ್ದೇಶಕ ರಾಜ್ ನಿಡಿಮೂರು ಜೊತೆ ಹಲವು ಬಾರಿ ಥಳುಕುಹಾಕಿಕೊಂಡಿದೆ. ಆದರೆ ಇದೀಗ ಖುದ್ದು ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ನಿರ್ದೇಶಕನ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಆಯೋಜನೆಗೊಂಡ ಪಿಕ್ಲೆಬಾಲ್ ಟೂರ್ನಮೆಂಟ್‌ಗೆ ಸಮಂತಾ ಹಾಜರಾಗಿದ್ದರು. ಆದರೆ ಈ ಟೂರ್ನಮೆಂಟ್‌ಗೆ ನಟಿ ಸಮಂತಾ ನಿರ್ದೇಶಕ ರಾಜ್ ನಿಡಿಮೂರು ಜೊತೆ ಆಗಮಿಸಿದ್ದರು. ನಿರ್ದೇಶಕನ ಜೊತೆ ಪಂದ್ಯಗಳನ್ನು ವೀಕ್ಷಿಸಿದ್ದರು. ಈ ಕುರಿತು ಫೋಟೋಗಳನ್ನು ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.