Sandalwood Leading OnlineMedia

ಹೃದಯಾಘಾತದಿಂದ ರೂಪಿಕಾ ತಂದೆ ನಿಧನ : ತಂದೆಯನ್ನು ನೆನೆದು ನಟಿ ಕಣ್ಣೀರು..!

ಬೆಂಗಳೂರು: ಹೃದಯಾಘಾತದಿಂದ ನಟಿ ರೂಪಿಕಾ ತಂದೆ ನಿಧನರಾಗಿದ್ದಾರೆ. ಬಿ ಸಿ ಕರುಣಾ ಸಾಗರ್ ಪತ್ನಿ, ಮಕ್ಕಳನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ. ಇದ್ದಕ್ಕಿದ್ದ ಹಾಗೇ ಕರುಣಾ ಸಾಗರ್ ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿದ್ದು, ಆಸ್ಪತ್ರೆಗೆ ಸೇರಿಸಿದರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕರುಣಾ ಸಾಗರ್ ಅವರಿಗೆ 70 ವರ್ಷ ವಯಸ್ಸಾಗಿತ್ತು. ಸರ್ಕಾರಿ ನೌಕರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಇದನ್ನೂ ಓದಿ  ಫ್ಯಾಮಿಲಿ ಜೊತೆ ಟೂರ್ ಹೊರಟ ಸೈಫ್ ಅಲಿ ಖಾನ್ ಏರ್ ಪೋರ್ಟ್ ನಲ್ಲೇ ಸ್ಟಾಫ್ ಜೊತೆಗೆ ಕಿತ್ತಾಟ

ನಟಿ ರೂಪಿಕಾ ಅವರ ಪ್ರತಿ ಹೆಜ್ಜೆಯಲ್ಲೂ ಅವರ ತಂದೆ ನಿಲ್ಲುತ್ತಿದ್ದರು. ಅವರ ಪ್ರತಿಯೊಂದು ಶೋಗಳನ್ನು ಹೆಮ್ಮೆಯಿಂದ ಪ್ರಚಾರ ಮಾಡುತ್ತಿದ್ದವರು. ಮಗಳು ಇನ್ನಷ್ಟು ಉತ್ತುಂಗಕ್ಕೆ ಏರಬೇಕು ಎಂದು ಬಯಸುತ್ತಿದ್ದವರು ಕರುಣಾ ಸಾಗರ್. ಹೀಗಾಗಿಯೇ ಮಕ್ಕಳ ಬೆಂಬಲಕ್ಕೆ ತನ್ನ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದರು. ಆದರೆ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಪ್ರೀತಿ ಪಾತ್ರರನ್ನು ಅಗಲಿ ಹೊರಟು ಬಿಟ್ಟಿದ್ದಾರೆ.

 

 

ಅಪ್ಪನಿಲ್ಲದ ನೋವನ್ನು ನುಂಗಿಕೊಂಡು, ದುಃಖದ ಧ್ವನಿಯಲ್ಲಿಯೇ ಮಾತನಾಡಿದ ರೂಪಿಕಾ, ಮಾಮೂಲಿಯಂತೆ ನಿಧನದ ಹಿಂದಿನ ದಿನ ನಮ್ಮೆಲ್ಲರ ಜೊತೆಗೆ ಊಟ ಮಾಡಿದ್ದರು. ಇದು ಧನುರ್ಮಾಸದ ಸಮಯ. ಪೂಜೆಗೆ ಬೇಗ ಏಳುತ್ತಿದ್ದರು. ಆದರೆ ಅಂದು ಎಷ್ಟು ಸಮಯವಾದರೂ ಏಳಲಿಲ್ಲ. ನಾವೆಲ್ಲಾ ಹೋಗಿ ನೋಡಿದಾಗ ಜೀವ ಇನ್ನು ಇತ್ತು. ನೀರು ಕುಡಿಸಿದೆವು. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದೆವು.. ಆದರೆ ಬದುಕುಳಿಯಲಿಲ್ಲ. ನಮ್ಮ ತಂದೆ ಸರಳ ವ್ಯಕ್ತಿತ್ವದವರು. ಮಿಡಲ್ ಕ್ಲಾಸ್ ಫ್ಯಾಮಿಲಿ ನಮ್ಮದು. ಆದರೆ ನಮ್ಮ ಅಪ್ಪ ಮಕ್ಕಳಿಗೆ ಯಾವತ್ತು ಕಷ್ಟ ಎಂಬುದನ್ನು ತೋರಿಸಲೇ ಇಲ್ಲ. ಈಗ ಮನೆಯಲ್ಲಿ, ಮನದಲ್ಲಿ ಅವರಿಲ್ಲದ ಜಾಗ ಖಾಲಿಯಾಗಿದೆ. ಆ ನೋವು ಅರಗಿಸಿಕೊಳ್ಳುವುದು ಕಷ್ಟ ಸಾಧ್ಯವಾಗಿದೆ ಎಂದು ತಂದೆಯ ಅಗಲಿಕೆಯ ಬಗ್ಗೆ ಮಾತನಾಡಿದ್ದಾರೆ.

Share this post:

Related Posts

To Subscribe to our News Letter.

Translate »