ರಾಜ್ ಬಿ ಶೆಟ್ಟಿ ಸಿನಿಮಾದ ಮೂಲಕ ಕಮ್ ಬ್ಯಾಕ್ ಮಾಡ್ತಾರ ಸ್ಯಾಂಡಲ್‌ವುಡ್ ಕ್ವೀನ್?
ಗಾಂಧಿನಗರದ ಅಂಗಳದಲ್ಲಿ ಹೊಸದೊಂದು ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ. ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (Sanalwood Queen Ramya)ಎಂಟ್ರಿಗೆ ಕೌಂಟ್‌ಡೌನ್ ಶುರುವಾಗಿದೆ. ರಮ್ಯಾ ರೀ ಎಂಟ್ರಿಗೆ ಕಾಯ್ತಿರುವ ಅಭಿಮಾನಿಗಳಿಗೆ ನಿಜಕ್ಕೂ ಇದು ಖುಷಿ ಕೊಡುವ ಸುದ್ದಿ. ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ ರಾಜ್ ಬಿ ಶೆಟ್ಟಿ (Raj B Shetty) ನಿರ್ದೇಶದ ಸಿನಿಮಾಗೆ ರಮ್ಯಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಇತ್ತೀಚೆಗಷ್ಟೇ ರಮ್ಯಾ ಮತ್ತು ರಾಜ್ ಬಿ ಶೆಟ್ಟಿ ಭೇಟಿಯಾಗಿದ್ದರು. ಈ ವೇಳೆ ಕಥೆ ಕೇಳಿರುವ ರಮ್ಯಾ, ರಾಜ್ ಬಿ ಶೆಟ್ಟಿ ಕಥೆಗೆ ಓಕೆ ಅಂದಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರವನ್ನ ರಮ್ಯಾ ಅವರೇ ನಿರ್ಮಾಣ ಮಾಡಲಿದ್ದಾರಂತೆ. ಕಥೆ ಕೇಳಿ ಥ್ರೀಲ್ ಆಗಿರುವ ರಮ್ಯಾ, ಸಿನಿಮಾ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಅಧಿಕೃತ ಮಾಹಿತಿ ಹೊರ ಬೀಳುವವರೆಗೂ ಕಾದು ನೋಡಬೇಕಿದೆ