ತೆಲುಗು ಚಿತ್ರರಂಗದ ಡಾರ್ಲಿಂಗ್ ಪ್ರಭಾಸ್ ಮದುವೆ ಬಗ್ಗೆ ಆಗಾಗ ಚರ್ಚೆಗಳು ಎದ್ದೇಳುತ್ತಲೇ ಇರುತ್ತೆ. ಒಂದಿಷ್ಟು ದಿನ ಅನುಷ್ಕಾ ಶೆಟ್ಟಿ ಜೊತೆ ಮದುವೆ ಅಂತ ಗುಲ್ಲೆದ್ದಿತ್ತು. ಆದರೆ, ಇವರಿಬ್ಬರೂ ಆ ವದಂತಿಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಪ್ಯಾನ್ ಇಂಡಿಯಾ ಸ್ಟಾರ್ ಆದ್ಮೇಲಂತೂ ಪ್ರಭಾಸ್ ಮದುವೆ ಬಗ್ಗೆ ಯೋಚನೆಯೇ ಮಾಡುತ್ತಿಲ್ಲ ಅಂತ ಅಭಿಮಾನಿಗಳು ಆರೋಪ ಮಾಡಿದ್ದರು. ಆದರೆ ನನಗೆ ಪ್ರಭಾಸ್ ಅಂತಹ ಗಂಡ ಬೇಕು ಅಂತ ಆಸೆ ಪಟ್ಟ ಯುವತಿಯರನ್ನು ಲೆಕ್ಕ ಹಾಕುವುದಕ್ಕೆ ಆಗುವುದಿಲ್ಲ. ಇದೀಗ ಆ ಸಾಲಿಗೆ ಟಾಲಿವುಡ್‌ನ ಯಶಸ್ವಿ ನಾಯಕಿ ಕೂಡ ಸೇರಿಕೊಂಡಿದ್ದಾರೆ. ಅವರೇ ಮೀನಾಕ್ಷಿ ಚೌಧರಿ.
ಇತ್ತೀಚೆಗೆ ‘ಸಂಕ್ರಾಂತಿಕಿ ವಸ್ತುನ್ನಾಂ’ ಸಿನಿಮಾದ ಯಶಸ್ಸನ್ನು ಸಂಭ್ರಮಿಸಲಾಗಿತ್ತು. ಈ ವೇಳೆ ನಟಿ ಮೀನಾಕ್ಷಿ ಚೌಧರಿ ತನ್ನನ್ನು ಮದುವೆ ಆಗುವ ಪತಿ ಹೇಗಿರಬೇಕು ಅಂತ ಅನ್ನೋದನ್ನು ರಿವೀಲ್ ಮಾಡಿದ್ದಾರೆ. ನಾನು ಎತ್ತರವಾಗಿದ್ದೇನೆ. ನನ್ನ ಹೈಟ್ 5.8 ಅಡಿ ಇದೆ. ಈ ಕಾರಣಕ್ಕೆ ನನ್ನಷ್ಟು ಹೈಟ್ ಇರುವ ವ್ಯಕ್ತಿನೇ ಆಗಬೇಕು. ನನಗಿಂತ ಕುಳ್ಳಗಿದ್ದರೆ, ನನ್ನನ್ನು ಹೀಲ್ಡ್ ಶೂಗಳನ್ನು ಹಾಕದಂತೆ ತಡೆಯಬಹುದು. ಅವುಗಳನ್ನು ಧರಿಸದೆ ಇರುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ನಾನು ಮದುವೆ ಆಗುವ ಹುಡುಗ ನನ್ನಷ್ಟೇ ಎತ್ತರವಿರಬೇಕು ಎಂಬುದು ಮೊದಲ ಷರತ್ತು. ಹಾಗೇ ವಿಶೇಷವಾಗಿ ಕಾಣುವಂತಹ ಹುಡುಗಬೇಕು. ಅಂತಹಸ ಹುಡುಗ ಸಿಕ್ಕರೆ ಖಂಡಿತವಾಗಿಯೂ ಮದುವೆ ಆಗುತ್ತೇನೆ ಎಂದಿದ್ದಾರೆ.
ಪ್ರಭಾಸ್ ಅಂತಹ ಗುಣಲಕ್ಷಣಗಳನ್ನು ಹೊಂದಿರುವ ವ್ಯಕ್ತಿ ನನ್ನ ಪತಿ ಆಗಬೇಕು. ನನ್ನ ಹೈಟ್‌ಗೆ ಅವರು ಸರಿಯಾಗಿ ಹೊಂದಿಕೊಳ್ಳುತ್ತಾರೆ. ನನಗೆ ಪ್ರಭಾಸ್ ಅಂದರೂ ತುಂಬಾನೇ ಇಷ್ಟ. ಅವರ ಮೇಲೆ ಕ್ರಶ್ ಆಗಿದೆ. ಅವರು ಹೈಟ್ ಇದ್ದಾರೆ. ಸುಂದರವಾಗಿದ್ದಾರೆ. ಅಂತಹ ವ್ಯಕ್ತಿ ಸಿಕ್ಕರೆ ಖಂಡಿತವಾಗಿಯೂ ನಾನು ಅವರನ್ನೇ ಮದುವೆ ಆಗುತ್ತೇನೆ” ಎಂದು ಮೀನಾಕ್ಷಿ ಚೌಧರಿ ಹೇಳಿಕೊಂಡಿದ್ದಾರೆ.