Sandalwood Leading OnlineMedia

ತೀವ್ರ ಬಿಗಡಾಯಿಸಿರುವ ನಟಿ ಲೀಲಾವತಿ ಆರೋಗ್ಯ: ಶಿವಣ್ಣ, ಡಿಕೆಶಿ ಭೇಟಿ

ತೀವ್ರ ಬಿಗಡಾಯಿಸಿರುವ ನಟಿ ಲೀಲಾವತಿ ಆರೋಗ್ಯ: ಶಿವಣ್ಣ, ಡಿಕೆಶಿ ಭೇಟಿ , ಹಿರಿಯ ನಟಿ ಲೀಲಾವತಿ ಆರೋಗ್ಯ ತೀವ್ರ ಬಿಗಡಾಯಿಸುತ್ತಿದೆ. ಇಂದು ಶಿವರಾಜ್ ಕುಮಾರ್ ದಂಪತಿ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಲೀಲಾವತಿ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಇದನ್ನೂ ಓದಿ ಡಾ.ವಿಷ್ಣುವರ್ಧನ್‌ ಅವರ ಪುಣ್ಯಭೂಮಿಗಾಗಿ ಡಿಸೆಂಬರ್‌ 17 ರಂದು ಬೃಹತ್‌ ಪ್ರತಿಭಟನೆ.

ಮೊನ್ನೆಯಷ್ಟೇ ನಟ ದರ್ಶನ್, ಅಭಿಷೇಕ್ ಅಂಬರೀಶ್ ಲೀಲಾವತಿಯವರನ್ನು ಭೇಟಿ ಮಾಡಿದ್ದರು. ಇಂದು ಮತ್ತಷ್ಟು ಗಣ್ಯರು ಆಗಮಿಸಿ ಅವರ ಆರೋಗ್ಯ ವಿಚಾರಿಸಿದ್ದಾರೆ.

ಇಂದು ಲೀಲಾವತಿ ಅವರು ಕಟ್ಟಿಸಿದ ಪಶು ಆಸ್ಪತ್ರೆ ಉದ್ಘಾಟನೆಯಾಗಿದೆ. ಆ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಬೇಕಿತ್ತು. ಆದರೆ ಅನಾರೋಗ್ಯದಿಂದಾಗಿ ಸಾಧ‍್ಯವಾಗುತ್ತಿಲ್ಲ ಎಂದು ಪುತ್ರ ವಿನೋದ್ ರಾಜ್ ಕಣ್ಣೀರು ಹಾಕಿದ್ದಾರೆ. ಇಂದು ಡಿಕೆ ಶಿವಕುಮಾರ್ ಆಸ್ಪತ್ರೆ ಉದ್ಘಾಟಿಸಿದ್ದು, ಶಿವಣ್ಣ ದಂಪತಿ ಕೂಡಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬಳಿಕ ಇಬ್ಬರೂ ಲೀಲಾವತಿ ನಿವಾಸಕ್ಕೆ ಆಗಮಿಸಿ ಅವರನ್ನು ಭೇಟಿ ಮಾಡಿದ್ದಾರೆ.

ಕಳೆದ ಕೆಲವು ದಿನಗಳಿಂದ ವಯೋಸಹಜ ಖಾಯಿಲೆಗಳಿಂದಾಗಿ ಲೀಲಾವತಿ ಹಾಸಿಗೆ ಹಿಡಿದಿದ್ದಾರೆ. ದಿನೇ ದಿನೇ ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದೆ. ಮಾತನಾಡಲೂ ಕಷ್ಟವೆಂಬ ಪರಿಸ್ಥಿತಿಯಿದೆ. ಹೀಗಾಗಿ ಚಿತ್ರರಂಗದ ಗಣ್ಯರು, ಆಪ್ತರು ಭೇಟಿ ನೀಡುತ್ತಿದ್ದಾರೆ. ಅವರಿಗೆ ಈಗ 86 ವರ್ಷ ವಯಸ್ಸು.

Share this post:

Translate »