ಚಿಕ್ಕ ಪುಟ್ಟ ಕನಸುಗಳು ನನಸು ಆದಾಗ ಸಿಕ್ಕಾಪಟ್ಟೆ ಖುಷಿಯಾಗುತ್ತೆ. ಅಂತದ್ದರಲ್ಲಿ ಕಂಡಿದ್ದ ಬಹುದೊಡ್ಡ ಕನಸು ಒಂದು ನನಸಾದಾಗ ಆಗುವ ಸಂಭ್ರಮವನ್ನ ಪದಗಳಲ್ಲಿ ಹಿಡಿದಿಡುವುದು ಅಸಾಧ್ಯ. ಕನ್ನಡ ಚಿತ್ರರಂಗದ ಕಂಚಿನ ಕಂಠದ ನಾಯಕ ವಸಿಷ್ಠ ಸಿಂಹಗೆ ಸದ್ಯಕ್ಕೆ ಇಂತಹದ್ದೇ ಅನುಭವ ಆಗಿದೆ ಹೌದು.. ವಸಿಷ್ಠ ಸಿಂಹ ತಮ್ಮ ಬಹುಕಾಲದ ಕನಸನ್ನ ನನಸಾಗಿಸಿಕೊಂಡಿದ್ದಾರೆ. ಮರ್ಸಿಡಿಸ್ ಬೆಂಝ್ ನಿರ್ಮಾಣದ ಜಿಎಲ್ಇ 450ಡಿ ಕಾರನ್ನು ಖರೀದಿಸಿದ್ದಾರೆ. ತಮ್ಮ ಗೆಳತಿ.. ಹೃದಯದ ಒಡತಿ.. ಹರಿಪ್ರಿಯಾ ಅವರ ಜೊತೆ ಸಂಭ್ರಮಿಸಿದ್ದಾರೆ ವಸಿಷ್ಠ ಸಿಂಹ.
ದಾಖಲು 4926 ಎಂಎಂ ಉದ್ದಳತೆ ಮತ್ತು 2995 ಎಂಎಂ ವ್ಹೀಲ್ ಬೆಸ್ ನೊಂದಿಗೆ ವಿಶಾಲವಾದ ಕ್ಯಾಬಿನ್ ಮತ್ತು 630 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಹೊಂದಿರುವ ಜಿಎಲ್ಇ ಎಸ್ ಯುವಿ ಮಾದರಿಯು ಮರ್ಸಿಡಿಸ್ ಬೆಂಝ್ ಎಸ್ ಯುವಿ ಮಾದರಿಗಳಲ್ಲೇ ಅತಿ ಹೆಚ್ಚು ಬೇಡಿಕೆಯಲ್ಲಿರುವ ಆವೃತ್ತಿ ಅನ್ನುವುದು ವಿಶೇಷ. ಇನ್ನೂ ಹೊಸ ಕಾರಿನಲ್ಲಿ ಐಷಾರಾಮಿ ಕಾರು ಅನುಭವ ಹೆಚ್ಚಿಸಲು 12.3 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಲೆದರ್ ಆಸನಗಳು, 64 ಬಗೆಗೆ ವಿವಿಧ ಆ್ಯಂಬಿಯೆಂಟ್ ಲೈಟಿಂಗ್ಸ್, ಪನೊರಮಿಕ್ ಸನ್ ರೂಫ್ ಸೇರಿದಂತೆ ಹಲವಾರು ಸುರಕ್ಷಾ ಸೌಲಭ್ಯಗಳನ್ನು ನೀಡಲಾಗಿದೆ.
ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಟ್ರಾಫಿಕ್ ಸಿಗ್ನಲ್ ರೆಕಾಗ್ನೈಸ್, ಬ್ಲೈಂಡ್ ಸ್ಪಾಟ್ ಮಾನಿಟರ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಮತ್ತು ಅಡಾಪ್ಟಿವ್ ಹೈ ಬೀಮ್ ಅಸಿಸ್ಟ್ ಸೌಲಭ್ಯಗಳನ್ನು ಒಳಗೊಂಡಿರುವ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ನೀಡಲಾಗಿದೆ.
ಅಂದ್ಹಾಗೇ ಮರ್ಸಿಡಿಸ್ ಬೆಂಝ್ ಜಿಎಲ್ಇ 450ಡಿ ಆವೃತ್ತಿಯು ಸದ್ಯ ಬೆಂಗಳೂರಿನಲ್ಲಿ ಆನ್ ರೋಡ್ ಪ್ರಕಾರ ರೂ. 1.44 ಕೋಟಿ ಬೆಲೆ ಹೊಂದಿದ್ದು, ಇದರಲ್ಲಿ 362 ಹಾರ್ಸ್ ಪವರ್ ಮತ್ತು 750 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲ 3.0 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ.
ಇನ್ನು ಸಿಕ್ಸ್ ಸಿಲಿಂಡರ್ ವೈಶಿಷ್ಟ್ಯತೆಯೊಂದಿಗೆ 9-ಸ್ಪೀಡ್ ಟ್ರಾನಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೋಡಣೆ ಹೊಂದಿದ್ದು, ಪರ್ಫಾಮೆನ್ಸ್ ಗಾಗಿ 4 ಮ್ಯಾಟಿಕ್ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಕೂಡ ಹೊಂದಿದೆ ಈ ಕಾರು.
ಹೊಸ ಕಾರು ಖರೀದಿ ಮಾಡಿದ ವಿಡಿಯೋವನ್ನು ವಸಿಷ್ಠ ಸಿಂಹ ತಮ್ಮ ಇನ್ಸ್ಟಾಗ್ರಾಮ್ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಈ ಸ್ಟಾರ್ಜೋಡಿಯೂ ಕಾರು ಶೋ ರೂಮ್ಗೆ ಖಡಕ್ಆಗಿ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಹೊಸ ದುಬಾರಿ ಕಾರಿನ ವಿತರಣೆಯನ್ನು ಪಡೆದುಕೊಂಡಿದ್ದಾರೆ.
ಇನ್ನೂ ತಮ್ಮ ನೆಚ್ಚಿನ ನಟನ ಈ ಸಂಭ್ರಮವನ್ನ ಕಂಡು ಅಭಿಮಾನಿಗಳು ಕೂಡ ಸಂಭ್ರಮಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾಗೆ ಶುಭಾಶಯವನ್ನೂ ಕೋರುತ್ತಿದ್ದಾರೆ. ಸದ್ಯ ಸಿಂಹಪ್ರಿಯಾ ಖರೀದಿಸಿದ ಹೊಸ ಕಾರಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ಆಗುತ್ತಿದೆ.