Left Ad
ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ದೀಪಿಕಾ ದಾಸ್ - Chittara news
# Tags

ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ದೀಪಿಕಾ ದಾಸ್

ಬೆಂಗಳೂರು: ನಾಗಿಣಿ ಧಾರವಾಹಿ, ಬಿಗ್ ಬಾಸ್ ಖ್ಯಾತಿಯ ನಟಿ ದೀಪಿಕಾ ದಾಸ್ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಮದುವೆ ಫೋಟೋಗಳನ್ನು ಶೇರ್ ಮಾಡಿದ್ದಾರೆ.ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಗಿಣಿ ಧಾರವಾಹಿ ಮೂಲಕ ಖ್ಯಾತರಾಗಿದ್ದ ದೀಪಿಕಾ ದಾಸ್ ಬಳಿಕ ಬಿಗ್ ಬಾಸ್ ಕನ್ನಡ ಶೋನಲ್ಲಿ ಭಾಗಿಯಾಗಿ ಇನ್ನಷ್ಟು ಜನಪ್ರಿಯರಾದರು. ಬಿಗ್ ಬಾಸ್ ನಲ್ಲಿದ್ದಾಗ ಶೈನ್ ಶೆಟ್ಟಿ ಜೊತೆಗಿನ ಸ್ನೇಹ ನೋಡಿ ಇಬ್ಬರೂ ನಿಜ ಜೀವನದಲ್ಲೂ ಜೋಡಿಯಾಗಿ ಎಂದು ಎಷ್ಟೋ ಅಭಿಮಾನಿಗಳು ಆಸೆಪಟ್ಟಿದ್ದರು.

ಆದರೆ ಇದೀಗ ದೀಪಿಕಾ ದಾಸ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಮದುವೆಯ ಫೋಟೋ ಶೇರ್ ಮಾಡಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಆದರೆ ತಮ್ಮ ಮದುವೆ ಯಾವಾಗ ಆಗಿದೆ, ವರ ಯಾರು ಎಂಬ ಯಾವುದೇ ವಿವರವನ್ನು ನೀಡಿಲ್ಲ. ಹೀಗಾಗಿ ಇದು ರಿಯಲ್ ಮದುವೆಯಾ, ಯಾವುದಾದರೂ ಶೂಟಿಂಗ್ ಇರಬಹುದೇ ಎಂದು ಅಭಿಮಾನಿಗಳು ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.

ಬೀಚ್ ಸೈಡ್ ನಲ್ಲಿ ಸುಂದರ ಮದುವೆ ಮಂಟಪದಲ್ಲಿ ಮದುವೆಯ ಶಾಸ್ತ್ರಗಳ ಫೋಟೋ ಪ್ರಕಟಿಸಿರುವ ದೀಪಿಕಾ ‘ಮಿಸ್ಟರ್ ಆಂಡ್ ಮಿಸೆಸ್. ಸಾಹಸಮಯ ಜಗತ್ತಿಗೆ ಸ್ವಾಗತ’ ಎಂದು ಬರೆದುಕೊಂಡಿದ್ದಾರೆ. ಇದರ ಹೊರತಾಗಿ ಯಾವುದೇ ಮಾಹಿತಿ ನೀಡಿಲ್ಲ.

Spread the love
Translate »
Right Ad