ಬಾಲಿವುಡ್ ನಟಿಯರಿಲ್ಲದೆ ಯಾವುದೇ ಪ್ರಶಸ್ತಿ ಕಂಪ್ಲಿಂಟ್ ಆಗೋದಿಲ್ಲ. ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್ರಂತಹ ತಾರೆಯರ ಡ್ರೆಸ್ಗಳ ಬೆಲೆ ಎಷ್ಟು ದುಬಾರಿಯಾಗಿದೆ ಅಂದ್ರೆ. ಇದರ ಬೆಲೆಯಲ್ಲಿ ಸಾಮಾನ್ಯ ವ್ಯಕ್ತಿ ತನಗಾಗಿ ಐಷಾರಾಮಿ ಫ್ಲಾಟ್ ಖರೀದಿಸಬಹುದು.
ಪ್ರತಿ ಪ್ರಶಸ್ತಿ ಸಮಾರಂಭದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಎಲ್ಲರ ಗಮನ ಸೆಳೆಯುತ್ತಾರೆ
ಮಾಧ್ಯಮ ವರದಿಗಳ ಪ್ರಕಾರ, ನಟಿ 2020 ರ ಗ್ರ್ಯಾಮಿ ಅವಾರ್ಡ್ಸ್ನಲ್ಲಿ ಬೆರಗುಗೊಳಿಸುವ ಗೌನ್ ಧರಿಸಿದ್ದರು, ಇದರ ಬೆಲೆ ಸುಮಾರು 70 ಲಕ್ಷ ರೂಪಾಯಿ ಎಂದು ಹೇಳಲಾಗಿದೆ.
ರೋಸ್ ಕಲರ್ ಗೌನ್ನಲ್ಲಿ ನಟಿ ದೀಪಿಕಾ ಪಡುಕೋಣೆ ಬ್ಯೂಟಿಫುಲ್ ಆಗಿ ಕಾಣುತ್ತಿದ್ದಾರೆ. ಈ ಗೌನ್ 50 ಲಕ್ಷಕ್ಕೂ ಹೆಚ್ಚು ವೆಚ್ಚವಾಗಿದೆ ಎಂದು ಹೇಳಲಾಗುತ್ತದೆ.
ಊರ್ವಶಿ ರೌಟೇಲಾ ಫ್ಯಾಶನ್ ಐಕಾನ್ ಆಗಿದ್ದಾರೆ. ನೇಹಾ ಕಕ್ಕರ್ ಅವರ ಮದುವೆಯಲ್ಲಿ ಅವರು ಧರಿಸಿದ್ದ ಊರ್ವಶಿ ತೊಟ್ಟಿದ್ದ ಲೆಹೆಂಗಾಗೆ ಸುಮಾರು 55 ಲಕ್ಷ ರೂ. ಹಣ ನೀಡಿದ್ರು. ಆಗಾಗ ದುಬಾರಿ ಬಟ್ಟೆ ಧರಿಸಿ ಮಿಂಚುತ್ತಿರುತ್ತಾರೆ.
ಪ್ರಶಸ್ತಿ ಸಮಾರಂಭವೊಂದರಲ್ಲಿ ನಟಿ ಆಲಿಯಾ ಭಟ್ 23 ಲಕ್ಷ ರೂಪಾಯಿ ಮೌಲ್ಯದ ಗೌನ್ ಧರಿಸಿ ಕಾಣಿಸಿಕೊಂಡಿದ್ದರು.
ನಟಿ ಕರೀನಾ ಕಪೂರ್ ಕೂಡ ದುಬಾರಿ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಮಾಧ್ಯಮ ವರದಿಗಳ ಪ್ರಕಾರ, ಸೋಹಾ ಅವರ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ನಟಿ 5.4 ಲಕ್ಷ ರೂಪಾಯಿ ಮೌಲ್ಯದ ಡ್ರೆಸ್ ಧರಿಸಿದ್ದರು.
ಸೋನಂ ಕಪೂರ್ ಕೂಡ ತನ್ನ ಫ್ಯಾಷನ್ಗೆ ಫೇಮಸ್. ಒಮ್ಮೆ ಅವರು ಬ್ಲ್ಯಾಕ್ ಕಲರ್ ಸೂಟ್ನಲ್ಲಿ ಕಾಣಿಸಿಕೊಂಡಿದ್ದು, ಇದರ ಬೆಲೆ4.5 ಲಕ್ಷ ರೂ. ಇತ್ತು.
ಸಮಾರಂಭವೊಂದರಲ್ಲಿ ಐಶ್ವರ್ಯಾ ರೈ ಎಲ್ಲೋ ಗೌನ್ ಧರಿಸಿದ್ದು, ಇದರ ಬೆಲೆ 3.4 ಲಕ್ಷ ರೂಪಾಯಿ ಇತ್ತು ಐಶ್ವರ್ಯಾ ರೈ ಧರಿಸುವ ಬಟ್ಟೆಗಳೆಲ್ಲಾ ಸಿಕ್ಕಾಪಟ್ಟೆ ದುಬಾರಿಯಾಗಿದೆ.
ಹೊಸ ವರ್ಷದ ಸಂದರ್ಭದಲ್ಲಿ ಅನುಷ್ಕಾ ಶರ್ಮಾ ಥಾಯ್ ಸ್ಲಿಟ್ ಗೌನ್ ಧರಿಸಿದ್ದು, ಇದರ ಬೆಲೆ ಸುಮಾರು 2.5 ಲಕ್ಷ ರೂಪಾಯಿ ಇದೆ. ವಿರಾಟ್ ಜೊತೆಗಿನ ನಟಿಯ ಫೋಟೋ ವೈರಲ್ ಆಗಿತ್ತು.
ರಾಣಾ ದಗ್ಗುಬಾಟಿ ಅವರ ಮೆಹಂದಿ ಸಮಾರಂಭದಲ್ಲಿ ಸಮಂತಾ ರೂತ್ ಪ್ರಭು ಧರಿಸಿದ್ದ ಡ್ರೆಸ್ ಬೆಲೆ 1.5 ಲಕ್ಷಕ್ಕೂ ಹೆಚ್ಚಾಗಿತ್ತು. ಸಮಂತಾ ಕೂಡ ಕಾಸ್ಟಿ ಡ್ರೆಸ್ಗಳನ್ನೇ ಹಾಕಿಕೊಂಡು ಸಮಾರಂಭಗಳಿಗೆ ಭೇಟಿ ನೀಡುತ್ತಾರೆ.