ನಟಿ ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕನ್ನಡ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸ್ವೀಟಿ ಮದುವೆ ಮ್ಯಾಟರ್ ಕೇಳಿ ಫ್ಯಾನ್ಸ್ ಖುಷಿಪಡುತ್ತಿದ್ದಾರೆ.
ಕನ್ನಡದ ದೊಡ್ಡ ನಿರ್ಮಾಪಕನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರಂತೆ. ಎರಡೂ ಕುಟುಂಬಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆ ನಿರ್ಮಾಪಕನಿಗೂ 42 ವರ್ಷ ಎನ್ನಲಾಗಿದೆ. ಇನ್ನೂ ನಟಿ ಮದುವೆಯಾಗುವ ವರನ ಬಗ್ಗೆ ಮಾಹಿತಿ ಹೊರಬೀಳಬೇಕಿದೆ.
ಅನುಷ್ಕಾ ಮದುವೆಗೆ ತಯಾರಿ ಶುರುವಾಗಿದೆ ಎನ್ನಲಾಗಿದೆ. ಸದ್ಯದಲ್ಲೇ ಮದುವೆ ಸುದ್ದಿ ಬಗ್ಗೆ ಅನುಷ್ಕಾ ಕುಟುಂಬ ಅಧಿಕೃತ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ. ಅಲ್ಲಿಯವರೆಗೂ ಕಾದುನೋಡಬೇಕಿದೆ.
ಇದನ್ನೂ ಓದಿ :ಪಿಂಕ್ ಸೀರೆಯಲ್ಲಿ ಮಿಂಚಿದ ಚಾರು
ಅನುಷ್ಕಾ ಶೆಟ್ಟಿ ಕನ್ನಡದ ನಟಿಯೇ ಆಗಿದ್ದರೂ, ತೆಲುಗು ಸಿನಿಮಾಗಳಿಂದ ವೃತ್ತಿ ಬದುಕನ್ನು ಆರಂಭಿಸಿದ್ದರು. ಅಕ್ಕಿನೇನಿ ನಾಗಾರ್ಜುನ ನಟಿಸಿದ್ದ ‘ಸೂಪರ್’ ಸಿನಿಮಾ ಮೂಲಕ ತೆಲುಗಿಗೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದರು. ‘ಅರುಂಧತಿ’, ‘ಬಾಹುಬಲಿ’ ಅಂತಹ ಸಿನಿಮಾ ಅನುಷ್ಕಾ ಶೆಟ್ಟಿ ವೃತ್ತಿ ಬದುಕಿಗೆ ಹೊಸ ತಿರುವನ್ನು ಕೊಟ್ಟಿತ್ತು. ಅದರಲ್ಲೂ ‘ಬಾಹುಬಲಿ’ ಸಿನಿಮಾ ಜಗತ್ತಿನಾದ್ಯಂತ ಸದ್ದು ಮಾಡಿತ್ತು