ಗೋಲ್ಡನ್ ಕ್ವೀನ್ ಅಮೂಲ್ಯ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಇಬ್ಬರು ಮುದ್ದು ಮಕ್ಕಳ ನಾಮಕರಣದ ಸಂಭ್ರಮದಲ್ಲಿದ್ದಾರೆ. ನಟಿ ಅಮೂಲ್ಯ ಜಗದೀಶ್ ಅವರ ಅವಳಿ ಮಕ್ಕಳಿಗೆ ನಾಮಕರಣಕ್ಕೆ ಇಡೀ ಸ್ಯಾಂಡಲ್ವುಡ್ ಸಾಕ್ಷಿಯಾಗಿದೆ.
ಗೋಲ್ಡನ್ ಕ್ವೀನ್ ಅಮೂಲ್ಯ ನಟನೆಯಿಂದ ದೂರ ಸರಿದು 5 ವರ್ಷಗಳಾಗುತ್ತಾ ಬಂತು. ಆದರೆ ಅವರು ಅಭಿಮಾನಿಗಳ ಮನಸ್ಸಿನಿಂದ ದೂರವಾಗಿಲ್ಲ. ಅಮೂಲ್ಯ ಕೂಡಾ ಮದುವೆಯಾದಾಗಿನಿಂದ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಫ್ಯಾನ್ಸ್ ಜೊತೆ ಸಂಪರ್ಕದಲ್ಲಿದ್ದಾರೆ. ಪತಿ ಜಗದೀಶ್ ಚಂದ್ರ ಕೂಡಾ ಅನೇಕ ವಿಚಾರಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಅಪ್ಡೇಟ್ ಮಾಡುತ್ತಿರುತ್ತಾರೆ.ಕೆಲ ತಿಂಗಳುಗಳ ಹಿಂದೆ ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅಮೂಲ್ಯ ಜಗದೀಶ್ ದಂಪತಿ ಅವಳಿ ಮಕ್ಕಳಿಗೆ (ನ.10) ನಾಮಕರಣ ಶಾಸ್ತ್ರ ಮಾಡಿದ್ದಾರೆ. ನಾಮಕರಣ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಆಗಮಿಸಿ ಶುಭಕೋರಿದ್ದಾರೆ.