ಇತ್ತೀಚೆಗಷ್ಟೇ ಫೋಟೋಶೂಟ್ ಮಾಡಿಸಿ, ಗಮನ ಸೆಳೆದಿದ್ದ ಸ್ಯಾಂಡಲ್‌ವುಡ್ ಬ್ಯೂಟಿ ಅಮೂಲ್ಯ ಈಗ ಮೊದಲ ಬಾರಿಗೆ ರೀಲ್ಸ್ ಮಾಡಿ, ಸೈ ಎನಿಸಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
https://www.instagram.com/reel/CgEua-fDA6S/
ಲಂಗ ದಾವಣಿ ತೊಟ್ಟು ನಟಿ ಅಮೂಲ್ಯ, ಶರಣ್ ಮತ್ತು ನಿಶ್ವಿಕಾ ನಾಯ್ಡು ಅಭಿನಯದ `ಗುರು ಶಿಷ್ಯರು’ ಚಿತ್ರದ ಹಾಡಿಗೆ ರೀಲ್ಸ್ ಮಾಡಿದ್ದಾರೆ. `ಆಣೆ ಮಾಡಿ ಹೇಳುತೀನಿ’ ಎನ್ನುವ ಹಾಡಿಗೆ ಮೊದಲ ಬಾರಿಗೆ ರೀಲ್ಸ್ ಮಾಡಿ ಹಂಚಿಕೊಂಡಿದ್ದಾರೆ. ನನ್ನ ಮೊದಲ ರೀಲ್ಸ್‌ಗೆ ನನಗೆ ತುಂಬಾ ಇಷ್ಟವಾದ ಹಾಡು. ನಿರ್ಮಾಪಕ ತರುಣ್ ಸುಧೀರ್ ಸೇರಿದಂತೆ, ಇಡೀ ಚಿತ್ರತಂಡಕ್ಕೆ ದೊಡ್ಡ ಯಶಸ್ಸು ಸಿಗಲಿ ಎಂದು ತಮ್ಮ ಪೋಸ್ಟ್ಗೆ ಬರೆದುಕೊಂಡಿದ್ದಾರೆ. ತಾಯಿಯಾದ ಬಳಿಕ ಅಮೂಲ್ಯ ಮತ್ತಷ್ಟು ಫಿಟ್ ಆಗಿ ಮುದ್ದಾಗಿ ಕಾಣಿಸಿಕೊಂಡಿರುವುದಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಇನ್ನು ಅಮೂಲ್ಯ ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಮೂಲ್ಯ ಗ್ಲಾಮರಸ್ ಲುಕ್ ನೋಡಿದ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ