Sandalwood Leading OnlineMedia

ರಕ್ಷಾ ಬಂಧನ 2022: ಹೇಗಿತ್ತು ನೋಡಿ ರಾಕಿ ಭಾಯ್ ರಾಖಿ ಹಬ್ಬ

ಇಂದು ರಕ್ಷಾ ಬಂಧನ, ದೇಶದಾದ್ಯಂತ ರಕ್ಷ ಬಂಧನವನ್ನು ಆಚರಿಸುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ಬರುವ ಈ ಹಬ್ಬ ಸಹೋದರ-ಸಹೋದರಿಯರಿಗೆ ಸಂಭ್ರಮ. ರಕ್ಷಬಂಧನದ ದಿನ ಸಹೋದರಿಯರು ಸಹೋದರರಿಗೆ ರಾಖಿ ಕಟ್ಟುತ್ತಾರೆ. ವಿಶೇಷವಾದ ಉಡುಗೊರೆ ನೀಡುತ್ತಾರೆ. ಸೆಲೆಬ್ರಿಟಿಗಳು ಸಹ ರಕ್ಷಬಂಧನ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ.

ಅತ್ತ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿರುವ ಯಶ್ ಅದೆಷ್ಟು ಬಿಝಿ ಇದ್ದರೂ, ರಾಖಿ ಹಬ್ಬದಂದು ತನ್ನ ತಂಗಿಯ ಮುಂದೆ ಹಾಜರಿರುತ್ತಾರೆ. ಇದಕ್ಕೆ ಸಾಕ್ಷಿಯೇ ಈ ಬಾರಿ ಕೂಡ ರಕ್ಷಾ ಬಂಧನ ದಿನದಂದು ಸಹೋದರಿ ನಂದಿನಿ ಕೈಯಿಂದ ರಾಖಿ ಕಟ್ಟಿಸಿಕೊಂಡಿರುವುದು. ಇಂದು ಬೆಳ್ಳಂಬೆಳಗ್ಗೆ ನಂದಿನಿ ಪ್ರೀತಿಯ ಸಹೋದರ ಯಶ್‌ಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ವಿದೇಶಿ ಪ್ರವಾಸದಲ್ಲಿದ್ದ ರಾಕಿ ಭಾಯ್ ರಾಖಿ ಹಬ್ಬದ ವೇಳೆಗೆ ಮನೆಗೆ ಹಿಂತಿರುಗಿದ್ದಾರೆ. ಕೆಜಿಎಫ್ ಸ್ಟಾರ್ ಯಶ್‌ಗೆ ಸಹೋದರಿ ನಂದಿನಿ ರಾಖಿ ಕಟ್ಟುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರೀತಿಯ ಸಹೋದರ ಯಶ್‌ಗೆ ಆರತಿ ಬೆಳಗಿ ತಿಲಕ ಇಟ್ಟು ರಾಖಿ ಕಟ್ಟಿದ್ದಾರೆ.

 ಸಹೋದರಿ ರಾಖಿ ಕಟ್ಟಿದ ಸುಂದರ ಫೋಟೋಗಳನ್ನು ರಾಕಿಂಗ್ ಸ್ಟಾರ್ ಯಶ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಫೋಟೋಗನ್ನು ಶೇರ್ ಮಾಡಿ ಎಲ್ಲರಿಗೂ ರಕ್ಷಾಬಂಧನದ ಶುಭಾಶಯ ತಿಳಿಸಿದ್ದಾರೆ.


‘ಒಡಹುಟ್ಟಿದವರು – ವಿಧಿಯಿಂದ ಒಟ್ಟಿಗೆ ಈ ಭೂಮಿಗೆ ಬರುತ್ತಾರೆ. ಆದರೆ ಲೈಫ್ ಟೈಮ್ ಪ್ರೀತಿ ಮತ್ತು ಬೆಂಬಲದಿಂದ ಬಂಧಿತರಾಗಿದ್ದಾರೆ. ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳು’ ಎಂದು ಹೇಳಿದ್ದಾರೆ. ಅಭಿಮಾನಿಗಳು ಸಹ ರಾಕಿಂಗ್ ಸ್ಟಾರ್ ಗೆ ವಿಶ್ ಮಾಡುತ್ತಿದ್ದಾರೆ.

 

Share this post:

Related Posts

To Subscribe to our News Letter.

Translate »