Sandalwood Leading OnlineMedia

ಚೆನ್ನೈ ಪ್ರವಾಹ ಪೀಡಿತರ ನೆರವಿಗೆ ನಟ ಸೂರ್ಯ ಖರ್ಚು ಮಾಡಿದ್ದೆಷ್ಟು ಗೊತ್ತಾ?

ಸೂಪರ್ ಸ್ಟಾರ್ ಎಂದರೆ ಕೇವಲ ತೆರೆ ಮೇಲೆ ವಿಜೃಂಭಿಸುವುದು ಮಾತ್ರವಲ್ಲ, ನಿಜ ಜೀವನದಲ್ಲೂ ಜನರ ಕಷ್ಟಕ್ಕೆ ನೆರವಾಗುವವರೇ ನಿಜವಾದ ಸ್ಟಾರ್ ಗಳು. ನಟ ಸೂರ್ಯ ಮತ್ತು ಅವರ ಸಹೋದರ ಈಗ ಅಂತಹದ್ದೇ ಜನ ಮೆಚ್ಚುವ ಕೆಲಸ ಮಾಡಿದ್ದಾರೆ.


ಮೈಚಾಂಗ್ ಚಂಡಮಾರುತದಿಂದಾಗಿ ಸುರಿದ ಮಳೆಯಿಂದ ಚೆನ್ನೈ ಸೇರಿದಂತೆ ಹಲೆವೆಡೆ ಪ್ರವಾಹ ಸದೃಶ ವಾತಾವರಣವಿದೆ. ಸಾರ್ವಜನಿಕರ ಆಸ್ತಿ ಪಾಸ್ತಿ ನಷ್ಟವಾಗಿದೆ. ಪ್ರವಾಹದಿಂದಾಗಿ ಮನೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.ಇಂತಹ ಪರಿಸ್ಥಿತಿಯಲ್ಲಿ ಜನರ ನೆರವಿಗೆ ಸೂರ್ಯ ಧಾವಿಸಿದ್ದಾರೆ. ತಮ್ಮ ಸಹೋದರ ಕಾರ್ತಿ ಜೊತೆಗೂಡಿ ಪ್ರವಾಹ ಪೀಡಿತರ ನೆರವಿಗೆ 10 ಲಕ್ಷ ರೂ. ನೀಡಿದ್ದಾರೆ.ಸಂತ್ರಸ್ತರ ಊಟ, ವಸತಿಗೆ ನೆರವಾಗಲು ಸೂರ್ಯ ಮತ್ತು ಕಾರ್ತಿ ಇನ್ನಷ್ಟು ಧನ ಸಹಾಯ ಮಾಡಲಿದ್ದಾರಂತೆ. ಆ ಮೂಲಕ ತಾವು ನಿಜ ಜೀವನದಲ್ಲೂ ಸ್ಟಾರ್ ಗಳು ಎಂದು ನಿರೂಪಿಸಿದ್ದಾರೆ.

Share this post:

Translate »