ಶಿವಕಾರ್ತಿಕೇಯನ್ ಸದ್ಯ ತಮಿಳು ಚಿತ್ರರಂಗದ ಸ್ಟಾರ್ ಹೀರೋಗಳಲ್ಲಿ ಒಬ್ಬರಾಗಿದ್ದಾರೆ. . ಸೌತ್ ಸಿನಿಮಾದ ಸ್ಟಾರ್ ಹೀರೋ ಆಗಿ ಬೆಳೆದ ಶಿವಕಾರ್ತಿಕೇಯನ್, ‘ಅಮರನ್’ ಸಿನಿಮಾದಿಂದ 300 ಕೋಟಿ ಗಳಿಕೆ ಮಾಡಿದ್ದಾರೆ. ರಾಜ್ ಕುಮಾರ್ ಪೆರಿಯಸಾಮಿ ನಿರ್ದೇಶನದ, ಶಿವಕಾರ್ತಿಕೇಯನ್, ಸಾಯಿ ಪಲ್ಲವಿ ನಟನೆಯ ‘ಅಮರನ್’ ಸಿನಿಮಾವನ್ನು ಕಮಲ್ ಹಾಸನ್ ನಿರ್ಮಿಸಿದ್ದಾರೆ.
‘ಅಮರನ್’ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಈ ಸಿನಿಮಾ ಸುಮಾರು 300 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಈ ಗೆಲುವಿನ ನಂತರ, ಶಿವಕಾರ್ತಿಕೇಯನ್ ‘ಪರಾಶಕ್ತಿ’ ಎಂಬ ಬಯೋಪಿಕ್ನಲ್ಲಿ ನಟಿಸುತ್ತಿದ್ದಾರೆ. ಶಿವಕಾರ್ತಿಕೇಯನ್ ಸಿನಿಮಾಗಳ ಜೊತೆ ಬ್ಯುಸಿಯಾಗಿದ್ದಾರೆ. ಈ ಯುವ ನಟ ತಮ್ಮ 26ನೇ ಸಿನಿಮಾವನ್ನು ಎ.ಆರ್. ಮುರುಗದಾಸ್ ನಿರ್ದೇಶನದಲ್ಲಿ ಮಾಡಲಿದ್ದಾರೆ.
ಶಿವಕಾರ್ತಿಕೇಯನ್ ಸುಮಾರು 2 ವರ್ಷಗಳಿಂದ ಸೋಶಿಯಲ್ ಮೀಡಿಯಾ ಬಳಸುವುದನ್ನು ನಿಲ್ಲಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬರುವ ಟ್ರೋಲ್ಗಳು, ಅನಗತ್ಯ ವಿಷಯಗಳನ್ನು ನೋಡಿ ಬೇಸರ ಪಡುವುದು ತಮಗೆ ಇಷ್ಟವಿಲ್ಲ ಅಂತ ಹೇಳಿದ್ದಾರೆ.
ಶಿವಕಾರ್ತಿಕೇಯನ್ ಇಂಡಸ್ಟ್ರಿಯ ಹೆಚ್ಚು ಬೇಡಿಕೆಯ ನಟನನ್ನಾಗಿ ರೂಪಿಸಿದೆ. ತ್ರಿಚ್ಚಿಯ ಹುಡುಗ ಶಿವಕಾರ್ತಿಕೇಯನ್ ಎಲ್ಲರಂತೆ ಕನಸು ಹೊತ್ತು ಬಣ್ಣದ ಲೋಕಕ್ಕೆ ಕಾಲಿಟ್ಟವರು. ಆದರೆ ಇಂತಹ ಯಶಸ್ಸನ್ನು ಮಾತ್ರ ಅವರು ಊಹಿಸಿಯೇ ಇರಲಿಲ್ಲ ಎಂಬುದಂತೂ ನಿಜ. 2007 ರಲ್ಲಿ ಟಿವಿ ಕಾರ್ಯಕ್ರಮ ನಿರೂಪಕನಾಗಿ ತಮ್ಮ ಪ್ರಯಾಣ ಆರಂಭಿಸಿದ ಶಿವಕಾರ್ತಿಕೇಯನ್, 2012 ರಲ್ಲಿ ನಟನಾಗಿ ಎಂಟ್ರಿ ಕೊಟ್ಟರು.
ತಮಿಳು ನಟ ಶಿವಕಾರ್ತಿಕೇಯನ್ ಇದೂವರೆಗೆ ಸುಮಾರು 22 ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಅವ್ರ ಕೈಯಲ್ಲಿ ಇನ್ನೂ 3 ಚಿತ್ರಗಳಿವೆ ಎಂದು ವರದಿಯಾಗಿದೆ. ಶಿವಕಾರ್ತಿಕೇಯನ್ 2025 ಮುಗಿಯೋ ವೇಳೆಗೆ 3 ಸಿನಿಮಾಗಳನ್ನು ಮುಗಿಸುವ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.