Siddarth-Aditi: ತಮಿಳಿನ ಜನಪ್ರಿಯ ನಟ ಸಿದ್ಧಾರ್ಥ್ ಹಾಗೂ ಹೈದರಾಬಾದ್ ಮೂಲದ ನಟಿ ಅದಿತಿ ರಾವ್ ಹೈದರಿ ಗುಟ್ಟಾಗಿ ದೇವಾಲಯದಲ್ಲಿ ವಿವಾಹವಾಗಿದ್ದಾರೆ. ಈ ಇಬ್ಬರಿಗೂ ಇದು ಎರಡನೇ ಮದುವೆ.
ಕಳೆದ ಕೆಲ ವರ್ಷಗಳಿಂದ ಒಟ್ಟಿಗೆ ತಿರುಗಾಡುತ್ತಿದ್ದ ನಟ ಸಿದ್ಧಾರ್ಥ್ (Siddharth) ಹಾಗೂ ಅದಿತಿ ರಾವ್ ಹೈದರಿ (Aditi Rao Hydari) ಅವರುಗಳು ಗುಟ್ಟಾಗಿ ದೇವಾಲಯದಲ್ಲಿ ವಿವಾಹವಾಗಿದ್ದಾರೆ. ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ಕಳೆದ ಕೆಲವು ವರ್ಷಗಳಿಂದಲೂ ಪ್ರೀತಿಯಲ್ಲಿದ್ದರು. ಈ ಜೋಡಿ ಲಿವ್ ಇನ್ ರಿಲೇಷನ್ಶೀಪ್ನಲ್ಲಿದೆ, ಆದಷ್ಟು ಬೇಗ ವಿವಾಹವಾಗಲಿದೆ ಎನ್ನಲಾಗಿತ್ತು. ಅದರಂತೆ ಇದೀಗ ತೆಲಂಗಾಣದ ದೇವಾಲಯವೊಂದರಲ್ಲಿ ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ಅವರುಗಳು ಗುಟ್ಟಾಗಿ ಮದುವೆಯಾಗಲಿದ್ದಾರೆ.
ತೆಲಂಗಾಣದ ವಾನಪರ್ತಿ ಜಿಲ್ಲೆಯ ಶ್ರೀರಂಗಾಪುರದಲ್ಲಿನ ರಂಗನಾಯಕ ಸ್ವಾಮಿ ದೇವಾಲಯದಲ್ಲಿ ಬುಧವಾರ ಮುಂಜಾನೆ ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ಅತ್ಯಂತ ಸರಳವಾಗಿ ವಿವಾಹವಾಗಿದ್ದಾರೆ. ಕೆಲವೇ ಕೆಲವು ಆಪ್ತರು, ಕುಟುಂಬ ಸದಸ್ಯರು ಮಾತ್ರವೇ ಈ ವೇಳೆ ಹಾಜರಿದ್ದರು ಎನ್ನಲಾಗುತ್ತಿದೆ. ತಮ್ಮ ಮದುವೆ ಕಾರ್ಯಕ್ರಮವನ್ನು ಈ ಜೋಡಿ ಬಹಳ ಗುಟ್ಟಾಗಿ ಇರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಹ ಈ ಬಗ್ಗೆ ಯಾವುದೇ ಮಾಹಿತಿಯನ್ನು ಈ ಜೋಡಿ ಹಂಚಿಕೊಂಡಿಲ್ಲ.
ಇದನ್ನೂ ಓದಿ :Photos : ಒಂದು ಸಣ್ಣ ಆಸೆ ಈಡೇರಿಸಿದ ನಟಿ ಅದಿತಿ ಪ್ರಭುದೇವ;
2021ರಲ್ಲಿ ಬಿಡುಗಡೆ ಆದ ‘ಮಹಾ ಸಮುದ್ರಂ’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಇವರಿಬ್ಬರು ಪರಸ್ಪರ ಭೇಟಿಯಾಗಿದ್ದರು. ಅಲ್ಲಿಯೇ ಪ್ರೀತಿ ಬೆಳೆದು ಕಳೆದೊಂದು ವರ್ಷದಿಂದಲೂ ಈ ಜೋಡಿ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದರು. ಇದೀಗ ಇಬ್ಬರೂ ವಿವಾಹವಾಗಿದ್ದಾರೆ. 44 ವರ್ಷದ ಸಿದ್ಧಾರ್ಥ್ಗೆ ಇದು ಎರಡನೇ ಮದುವೆ. 2003 ರಲ್ಲಿಯೇ ಸಿದ್ಧಾರ್ಥ್ ತಮ್ಮ ಬಾಲ್ಯದ ಗೆಳತಿ ಮೇಘನಾ ಎಂಬುವರನ್ನು ವಿವಾಹವಾಗಿದ್ದರು.
ಅದಾದ ಬಳಿಕ 2006 ರಿಂದ ಈ ಜೋಡಿ ಪ್ರತ್ಯೇಕವಾಗಿ ಇರಲಾರಂಭಿಸಿದ್ದರು. ಕೊನೆಗೆ 2007 ರಲ್ಲಿ ಪರಸ್ಪರ ವಿಚ್ಛೇದನ ಪಡೆದುಕೊಂಡರು. ಆ ಬಳಿಕ ಸಿದ್ಧಾರ್ಥ್ ಹೆಸರು ಬಾಲಿವುಡ್ ನಟಿ ಸಾರಾ ಅಲಿ ಖಾನ್ ಜೊತೆ ಕೇಳಿ ಬಂದಿತ್ತು. ಸಮಂತಾ ಜೊತೆಗೂ ಕೆಲ ಕಾಲ ಸಿದ್ಧಾರ್ಥ್ ಹೆಸರು ಕೇಳಿ ಬಂದಿತ್ತು. ಇದೀಗ ಅಂತಿಮವಾಗಿ ಅದಿತಿ ಜೊತೆ ವಿವಾಹವಾಗಿದ್ದಾರೆ.
ನಟಿ ಅದಿತಿ ರಾವ್ ಹೈದರಿಗೂ ಸಹ ಇದು ಎರಡನೇ ಮದುವೆ. ಈಶಾನ್ ಹೈದರಿ ಹಾಗೂ ವಿದ್ಯಾ ರಾವ್ ಅವರ ಪುತ್ರಿ ಅದಿತಿ ರಾವ್ ಹೈದರಿ, ಆಮಿರ್ ಖಾನ್ರ ಮಾಜಿ ಪತ್ನಿ ಕಿರಣ್ ರಾವ್ರ ಹತ್ತಿರದ ಸಂಬಂಧಿ ಸಹ. ಅದಿತಿ ರಾವ್ ಹೈದರಿ ತಮ್ಮ 23ನೇ ವಯಸ್ಸಿನಲ್ಲಿಯೇ ನಟ, ವಕೀಲ ಸತ್ಯದೀಪ್ ಮಿಶ್ರಾ ವಿವಾಹವಾಗಿದ್ದರು. ಆದರೆ ತಮ್ಮ ಮದುವೆಯನ್ನು ಗುಟ್ಟಾಗಿರಿಸಿದ್ದರು. ಕೊನೆಗೆ 2013ರಲ್ಲಿ ಸತ್ಯದೀಪ್ ಮಿಶ್ರಾರಿಂದ ಅದಿತಿ ದೂರಾದರು.
ಇದೀಗ ಸಿದ್ಧಾರ್ಥ್ ಜೊತೆಗೆ ವಿವಾಹವಾಗಿದ್ದಾರೆ. ಇಬ್ಬರಿಗೂ ಇದು ಎರಡನೇ ಮದುವೆ. ಅದಿತಿ ರಾವ್ರ ಮೊದಲ ಪತಿ ಸತ್ಯದೀಪ್ ಮಿಶ್ರಾ, ಮೀನಾ ಗುಪ್ತಾ, ವೀವ್ ರಿಚರ್ಡ್ಸ್ ಪುತ್ರಿ ಮಸಾಬಾ ಗುಪ್ತಾರನ್ನು ವಿವಾಹವಾಗಿದ್ದಾರೆ.