ಶಿವಮೊಗ್ಗ : ವಯೋ ಸಹಜ ಕಾಯಿಲೆಯಿಂದ ಹಿರಿಯ ನಟ, ದ್ವಾರಕೀಶ್ ನಿಧನ ಹೊಂದಿದ್ದಾರೆ. ಅವರ ನಿಧನಕ್ಕೆ ಇಡೀ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ಕನ್ನಡ ಚಿತ್ರರಂಗದಲ್ಲಿ ನಟನಾಗಿ ನಗಿಸಿದವರು, ಒಳ್ಳೊಳ್ಳೆ ಸಿನಿಮಾಗಳನ್ನು ನೀಡಿದವರು. ಇದೀಗ ಅವರ ಸಾವಿನಿಂದ ಕಲಾವಿದರು ದುಃಖದಲ್ಲಿದ್ದಾರೆ. ಇನ್ನು ಶಿವಣ್ಣ ಕೂಡ ಸಂತಾಪ ಸೂಚಿಸಿದ್ದಾರೆ.
ದ್ವಾರಕೀಶ್ ಅಂಕಲ್ ನಿಧನ ಬಹಳ ನೋವಿನ ಸಂಗತಿ. ಚಿಕ್ಕ ವಯಸ್ಸಿನಿಂದಲೂ ನಾನು ನೋಡಿದ್ದೇನೆ. ಅವರ ಜೊತೆ ಒಡನಾಟ ಕೂಡ ಇತ್ತು. ನಮ್ಮ ತಂದೆ-ತಾಯಿ ಜೊತೆ ಕೂಡ ಒಡನಾಟ ಇತ್ತು.
ದೂರದ ಬೆಟ್ಟದ ಸಿನಿಮಾದಿಂದಲೂ ಸಂಪರ್ಕ ಇದೆ. ದ್ವಾರಕೀಶ್ ಅವರ ಯಾವುದೇ ಸಿನಿಮಾದಲ್ಲೂ ಅಪ್ಪಾಜಿಯವರ ಫೋಟೋ ಕಾಣುತ್ತಿತ್ತು. ಇವತ್ತು ಅವರು ಇಲ್ಲ ಅನ್ನೋದು ಬಹಳ ಕಷ್ಟಕರ ಆಗುತ್ತಿದೆ.
ಇದನ್ನೂ ಓದಿ :ʻಟಾಕ್ಸಿಕ್ʼ ಸಿನಿಮಾದಿಂದ ಹೊರ ಬಂದ ಕರೀನಾ : ಯಶ್ ಜೋಡಿಯಾಗಲಿದ್ದಾರೆ ಈ ಬಾಲಿವುಡ್ ನಟಿ
ಇದನ್ನೂ ಓದಿ :ಇನಾಮ್ದಾರ್’ ನಿರ್ದೇಶಕನ ಅಪರೂಪದ ಕಥೆ ಹೊತ್ತ ಸಿನಿಮಾ ‘ಗುಂಮ್ಟಿ’
ಅವರ ಮಕ್ಕಳು, ಅವರ ಮನೆಯವರು ನಮಗೆ ತುಂಬಾ ಬೇಕಾದವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದ ಜೊತೆಗೆ ನಾವಿದ್ದೇವೆ. ದ್ವಾರಕೀಶ್ ಪ್ರೊಡಕ್ಷನ್ ಅಂದರೆ ಆಡಂಬರದ ಪ್ರೊಡಕ್ಷನ್. ತುಂಬಾ ದೊಡ್ಡ ದೊಡ್ಡ ಸಿನಿಮಾಗಳನ್ನ ಮಾಡಿದ್ದಾರೆ. ನಾನು ಸಹ ಅವರ ಜೊತೆ ಸಿನಿಮಾ ಮಾಡಿದ್ದೇನೆ ಎಂದು ಆ ದಿನಗಳನ್ನು ನೆನೆದು ಆತ್ಮಕ್ಕೆ ಶಾಂತಿ ಕೋರಿದ್ದಾರೆ.