ಹೊಸ ಕಾರು ಖರೀದಿಸಿದ ನವರಸ ನಾಯಕ – ಕಷ್ಟದ ದಿನಗಳನ್ನು ನೆನೆದ ಜಗ್ಗೇಶ್
ನವರಸ ನಾಯಕ ಜಗ್ಗೇಶ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.ನಾಯಕನಾಗಿ, ಹಾಸ್ಯ ನಟನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಜಗ್ಗೇಶ್ ಹೊಸ ಬಿಎಂಡಬ್ಲ್ಯೂ ಎಕ್ಸ್ 5 ಕಾರನ್ನು ಖರೀದಿಸಿದ್ದಾರೆ.ತಮ್ಮ ಹೊಸ ಕಾರಿನ ಫೋಟೋ ಶೇರ್ ಮಾಡಿರುವ ಅವರು, ರಾಯರ ಕೃಪೆಯಿಂದ ಶುಭ ಶುಕ್ರವಾರ ಹೊಸ ಕಾರು ಮನೆಗೆ ಬಂದಿದೆ ಎಂದು ಬರೆದುಕೊಂಡಿದ್ದಾರೆ.ಈ ಸುಂದರ ವೈಟ್ ಕಾರನ್ನು ರಾಯರ ಮಠದಲ್ಲಿ ಪೂಜೆ ಮಾಡಿಸಿ ಮನೆಗೆ ತಂದಿದ್ದಾರೆ.
ಇನ್ನು ಈ ಹೊಸ ಕಾರನ್ನು ಖರೀದಿಸಿದ ದಿನ ತಮ್ಮ ಜೀವನದಲ್ಲಿ ನಡೆದ ಕೆಟ್ಟ ಹಾಗೂ ಅವಮಾನಕರ ಘಟನೆಗಳನ್ನು ನೆನೆದಿದ್ದಾರೆ. ಅಲ್ಲದೇ ಅವರು ನೆನೆದು ಬಂದ ಹಾದಿಯನ್ನು ಸಹ ನೆನೆಸಿಕೊಂಡಿದ್ದಾರೆ.
ಇನ್ನು ನನ್ನ ಆರಂಭದ ದಿನಗಳಲ್ಲಿ ಪ್ರೊಡಕ್ಷನ್ ಗಾಡಿಯಲ್ಲಿ ಸಹ ನನ್ನನ್ನ ಕೂರಲು ಬಿಡುತ್ತಿರಲಿಲ್ಲ , ಬಹಳ ಕಷ್ಟದ ದಿನಗಳನ್ನು ನೋಡಿದ್ದೇನೆ ಎಂದಿದ್ದಾರೆ.
ಅಲ್ಲದೇ, ರಾಯರ ಮಠದಲ್ಲಿ ಕಣ್ಣೀರಿಟ್ಟು ರಾಯರಿಗೆ ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದೆ. ನಾನು ಪರಿಮಳ ಎಷ್ಟೋ ದಿನ ಈ ಮಠದಲ್ಲಿ ಊಟಮಾಡಿ ಜೀವನ ನೆಡೆಸಿದ್ದೇವೆ. ನಾನು ಬೆಳೆದಿರುವುದಕ್ಕೆ ರಾಯರೇ ಕಾರಣ ಎಂದಿದ್ದಾರೆ.
ಜಗ್ಗೇಶ್ ಚಿತ್ರರಂಗದಲ್ಲಿ ಈಗಲು ಸಹ ವಿಭಿನ್ನ ಚಿತ್ರಗಳ ಮೂಲಕ ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ಹಾಗೆಯೇ ಸಾಮಾಜಿಕ ಮಾಧ್ಯಮದಲ್ಲಿ ಆಕ್ಟೀವ್ ಆಗಿರುವ ಇರುವ ಜೀವನದ ಸಂತಸದ ಕ್ಷಣ ಹಾಗೂ ನೋವಿನ ವಿಚಾರಗಳನ್ನು ಸಹ ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಳ್ಳುತ್ತಾರೆ.
ಇನ್ನು ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್, ರಂಗನಾಯಕ ಹಾಗೂ ತೋತಾಪುರಿ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದು, ಬಹಳ ನಿರೀಕ್ಷೆಯನ್ನು ಹುಟ್ಟಿಸಿದೆ.