ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ನಿಧನ ತುಂಬಲಾರದ ನಷ್ಟವಾಗಿದೆ. ಹಲವು ಹೊಸ ಕಲಾವಿದರಿಗೆ ಅವಕಾಶ ಕೊಟ್ಟ ಸೂಪರ್ ಸ್ಟಾರ್ ಮಾಡಿದ ಕೀರ್ತಿ ಕೂಡ ದ್ವಾರಕೀಶ್ ಅವರಿಗೆ ಸಲ್ಲುತ್ತದೆ. ಹಲವು ವರ್ಷಗಳಿಂದ ದ್ವಾರಕೀಶ್ ಚಿತ್ರರಂಗದಿಂದ ದೂರ ಉಳಿದಿದ್ರು. ಯಾವುದೇ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಚಿತ್ರ ನಿರ್ಮಾಣಕ್ಕೂ ಕೈ ಹಾಕಲಿಲ್ಲ. ಸಾರ್ಥಕದ ಜೀವನ ನಡೆಸಿದ ನಟ ದ್ವಾರಕೀಶ್ ತಮ್ಮ ಸಾವು ಈ ರೀತಿಯಾಗಿಯೇ ಆಗ್ಬೇಕು ಎಂದು ಪ್ರಾರ್ಥನೆ ಮಾಡುತ್ತಿದ್ದರಂತೆ.
ಇದನ್ನೂ ಓದಿ ಕನ್ನಡ ಹಿರಿಯ ನಟ ದ್ವಾರಕೀಶ್ ನಿಧನ
“ಶಾಂತ ರೀತಿಯಲ್ಲಿ ಸಾವು ಬರಲಿ”
ಈ ಹಿಂದೆ ಸಂದರ್ಶನದಲ್ಲಿ ಮಾತಾಡಿದ್ದ ದ್ವಾರಕೀಶ್ ಅವರು ದಿನಚರಿ ಹಾಗೂ ಸಾವಿನ ಬಗ್ಗೆ ಕೂಡ ಮತಾಡಿದ್ರು. ಅವರು ಕೇಳಿಕೊಂಡಂತೆ ನಡೆದಿದೆ. ನಟನೆಯಲ್ಲಿ ನನಗೆ ಆಸಕ್ತಿ ಇಲ್ಲ, ಸಾಕಾಗಿದೆ ಎಂದಿದ್ರು. ಆದಷ್ಟು ಬೇಗ ಶಾಂತ ರೀತಿಯಲ್ಲಿ ಸಾವು ಬರಲಿ ಎಂದು ಕೇಳಿಕೊಳ್ಳೋದಾಗಿಯೂ ಹೇಳಿದ್ರು. ಕಾಯಿಲೆ ಬಿದ್ದು ನರಳಾಡುವ ಸ್ಥಿತಿ ಬೇಡ ಎಂದು ದ್ವಾರಕೀಶ್ ಸದಾ ದೇವರಲ್ಲಿ ಬೇಡಿಕೊಳ್ಳುತ್ತಿದ್ದರಂತೆ. ನಟನ ಬೇಡಿಕೆಯಂತೆ ದ್ವಾರಕೀಶ್ಗೆ ಸಾವು ಸಂಭವಿಸಿದೆ.
ಇದನ್ನೂ ಓದಿ:ದ್ವಾರಕೀಶ್ ನಿಧನಕ್ಕೆ ಸಂತಾಪ ಸೂಚಿಸಿದ ನಟ ಶಿವರಾಜ್ ಕುಮಾರ್
ನಿತ್ಯ ದಿನಚರಿ ಬೇಸರ ತಂದಿತ್ತು
ಸಿನಿಮಾ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ದ್ವಾರಕೀಶ್ ನಿತ್ಯ ಒಂದು ಸಿನಿಮಾ ನೋಡುತ್ತಿದ್ದರಂತೆ. ಇದೀನ ಸಿನಿಮಾಗಳ ಅಪ್ಡೇಟ್ ಬಗ್ಗೆ ಕೂಡ ಕೇಳಿ ತಿಳಿದುಕೊಳ್ತಿದ್ರು ಎನ್ನಲಾಗ್ತಿದೆ. ಬೆಳಗ್ಗೆ ಬೇಗ ಏಳುತ್ತಿದ್ದ ದ್ವಾರಕೀಶ್ ಅವರು ಸ್ನಾನ ಮಾಡಿ ದೇವರಿಗೆ ನಮಿಸುತ್ತಿದ್ದರು. ಸಂಜೆ ವಾಕಿಂಗ್ ಮಾಡ್ತಿದ್ರು. ಈ ದಿನಚರಿಯೂ ಅವರಿಗೆ ಬೇಸರ ತರಿಸಿತ್ತಂತೆ.
ಇದನ್ನೂ ಓದಿ :ಪಂಚಭೂತಗಳಲ್ಲಿ ಲೀನರಾದ ದ್ವಾರಕೀಶ್
ಪತ್ನಿ ಕಳೆದುಕೊಂಡ ನೋವಿನಲ್ಲಿದ್ರು ದ್ವಾರಕೀಶ್
ಮಕ್ಕಳು, ಸೊಸೆ, ಮೊಮ್ಮಕ್ಕಳು ಯಾರೇ ಇದ್ದರೂ ನನ್ನ ವಸ್ತು ನನ್ನ ಬಳಿ ಇಲ್ಲ ಎನ್ನುವ ನೋವಿದೆ ಎಂದಿದ್ರು. ಏಕಾಂಗಿತನ ದ್ವಾರಕೀಶ್ ಅವರನ್ನು ಕಾಡಿತ್ತು. ಕೆಲ ವರ್ಷಗಳ ಹಿಂದೆ ಅವರ ಮೊದಲ ಪತ್ನಿ ಅಂಬುಜಾ ನಿಧನ ಹೊಂದಿದ್ದರು. 62 ವರ್ಷಗಳ ಕಾಲ ಜೊತೆಯಲ್ಲೇ ಇದ್ದ ಮೊದಲ ಪತ್ನಿ ಕಡೆದುಕೊಂಡ ನೋವು ಅವರನ್ನು ಬಿಟ್ಟು ಬಿಡದೆ ಕಾಡಿತ್ತು. ಮೊದಲ ಪತ್ನಿ ಅಂಬುಜಾ ನಿಧನರಾದ ದಿನವೇ ದ್ವಾರಕೀಶ್ ಸಾವನ್ನಪ್ಪಿರೋದು ನಿಜಕ್ಕೂ ಅಚ್ಚರಿಯ ವಿಚಾರವಾಗಿದೆ.
ಇದನ್ನೂ ಓದಿ :ದರ್ಶನ್, ಸುದೀಪ್, ರಜನೀಕಾಂತ್ : ಕಲಾವಿದರಿಂದ ದ್ವಾರಕೀಶ್ಗೆ ಸಂತಾಪ
ನನಗೆ ನೂರು ವರ್ಷ ಬದುಕ ಬೇಕು ಎನ್ನುವ ಆಸೆ ಇಲ್ಲ ಶಾಂತ ಸಾವು ಬೇಕು. ಆದಷ್ಟು ಬೇಗ ಪರಮಾತ್ಮನ ಸೇರಬೇಕು ಎಂದು ದ್ವಾರಕೀಶ್ ಹೇಳಿದ್ರು. ಇಲ್ಲಿ ಇದ್ದು ಏನು ಮಾಡೋದು ಇಲ್ಲಾ ಎಂದು ದ್ವಾರಕೀಶ್ ಕೇಳಿಕೊಂಡಿದ್ದರು. ದ್ವಾರಕೀಶ್ ಬಯಸಿದಂತೆ ಶಾಂತ ರೀತಿಯ ಸಾವು ಅವರದ್ದಾಗಿತ್ತು.
ಇದನ್ನೂ ಓದಿ :Dwarakish :ತುಂಬು ಕುಟುಂಬದ ದೊರೆ ದ್ವಾರಕೀಶ್!
ಏಪ್ರಿಲ್ 15ರ ರಾತ್ರಿಯಿಂದಲೇ ಅವರಿಗೆ ಅನಾರೋಗ್ಯ ಉಂಟಾಗಿತ್ತು. ಹೀಗಾಗಿ ಅವರಿಗೆ ನಿದ್ರಿಸಲು ಸಾಧ್ಯವಾಗಿಲ್ಲ. ಏಪ್ರಿಲ್ 16ರ ಬೆಳಿಗ್ಗೆ ಕಾಫಿ ಕುಡಿದು, ನನಗೆ ಸುಸ್ತಾಗ್ತಿದೆ ಸ್ವಲ್ಪ ಹೊತ್ತು ಮಲಗುತ್ತೇನೆ ಎಂದು ದ್ವಾರಕೀಶ್ ಮಲಗಿದ್ರು. 10 ಗಂಟೆಗೆ ಎಬ್ಬಿಸು ಎಂದು ಹೇಳಿ ಮಲಗಿದವರು ಮತ್ತೆ ಏಳಲೇ ಇಲ್ಲ. ಅವರಿಗೆ ಹೃದಯಾಘಾತ ಆಗಿದೆ ಎಂದು ಕುಟುಂಬಸ್ಥರು ಹೇಳಿದ್ರು. ಅವರು ಬಯಸಿದಂತೆ ಶಾಂತ ಸಾವು ಅವರದ್ದಾಗಿದೆ. ಅವರ ಸಾವು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಏಪ್ರಿಲ್ 17ರಂದು ದ್ವಾರಕೀಶ್ ಅವರ ಅಂತಿಮ ಸಂಸ್ಕಾರ ನಡೆಯಿತು. ಇಂದು ಏಪ್ರಿಲ್ 18 ಅವರ ಅಸ್ತಿಯನ್ನು ಶ್ರೀರಂಗ ಪಟ್ಟಣದಲ್ಲಿ ಕಾವೇರಿ ನದಿಗೆ ಬಿಡಲಾಗಿದೆ.