ಭೀಮ ಚಿತ್ರವನ್ನ ರಿಯಲಿಸ್ಟಿಕ್ ಆಗಿ ಚಿತ್ರೀಕರಿಸ್ತಿರೋ ವಿಜಯ್,ಮಧ್ಯರಾತ್ರಿ ಬೆಂಗಳೂರಿನ ವಿನೋಬನಗರದ ಗಲ್ಲಿಗಳಲ್ಲಿ ಕೊನೆಯ ಸೀನ್ ಶೂಟ್ ಮಾಡೋ ಮೂಲಕ ಕುಂಬಳಕಾಯಿ ಹೊಡೆಯಲಾಗಿದೆ.ಈ ವೇಳೆ ಮಾಧ್ಯಮ ಮಿತ್ರರರನ್ನ ಕರೆದುಕೊಂಡು ಇಡೀ ಭೀಮನ ಏರಿಯಾವನ್ನ ಕಾಲ್ನಡಿಗೆಯಲ್ಲಿ ಸುತ್ತಿಸಿದ ವಿಜಯ್ ಭೀಮ ಚಿತ್ರವನ್ನ ಚಿತ್ರೀಕರಿಸಿದ ಜಾಗಗಳನ್ನ ಪರಿಚಯಿಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ಕೇಸ್: ನಾಲ್ವರನ್ನು ಬಂಧಿಸಿದ ಪೊಲೀಸರು
ಇಡೀ ಭೀಮ ಚಿತ್ರತಂಡ ಈ ಸಂದರ್ಭದಲ್ಲಿ ಭಾಗಿಯಾಗಿತ್ತು. ಆರಂಭದಿಂದಲೂ ಒಂದಲ್ಲ ಒಂದು ಕಾರಣಕ್ಕೆ ವಿಶೇಷವಾಗಿ ಸುದ್ದಿಯಾಗ್ತಿರೋ ಭೀಮ ಕೊನೆ ಸೀನ್ ಶೂಟಿಂಗ್ ವೇಳೆಯೂ ಆ ವಿಶೇಷಯನ್ನ ಕಾಪಾಡಿಕೊಂಡಿದೆ.
ಇದನ್ನೂ ಓದಿ ಸ್ವಿಜರ್ ಲ್ಯಾಂಡ್ ನಲ್ಲಿ ರಚಿತಾ ರಾಮ್ ಡ್ಯುಯೆಟ್!
ಈಗಾಗ್ಲೇ ಎರಡು ಸೂಪರ್ ಹಿಟ್‌ಹಾಡುಗಳನ್ನ ರಿಲೀಸ್ ಮಾಡಿರೋ ಭೀಮ ಸದ್ಯದಲ್ಲೇ ಚಿತ್ರದ ಮತ್ತಷ್ಟು ಮಾಹಿತಿ ಕೊಡಲಿದೆ.