Sandalwood Leading OnlineMedia

ನಟ ದುಲ್ಕರ್ ಸಲ್ಮಾನ್ ನಾಗರೀಕ ಜವಾಬ್ದಾರಿಯನ್ನು ಕೊಂಡಾಡಿದ ನೆಟ್ಟಿಗರು

ಕೇರಳ:  ಮಾಲಿವುಡ್ ಚಿತ್ರರಂಗದ ನೆಚ್ಚಿನ ನಟ ದುಲ್ಕರ್ ಸಲ್ಮಾನ್ ಬೆಳ್ಳಿತೆರೆಯಲ್ಲಿ ಅಭಿಮಾನಿಗಳ ಹೃದಯವನ್ನು ಗಳಿಸುವುದರ ಜತೆಗೆ ತಮ್ಮ ನಾಗರೀಕ ಜವಾಬ್ದಾರಿಗಳನ್ನು ಹೇಳುವ ಮೂಲಕ ಮತ್ತೊಮ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈಚೆಗೆ ದುಲ್ಕರ್‌ ತಮ್ಮ ಎಕ್ಸ್‌ ಖಾತೆಯಲ್ಲಿ ‘ಮುಂಬರುವ ಚುನಾವಣೆಯಲ್ಲಿ ಮೊದಲ ಬಾರಿ ಚುನಾವಣೆ ಮಾಡುವವರು ಯಾವುದೇ ಕಾರಣಕ್ಕೂ ಮತದಾನ ಮಾಡುವುದನ್ನು ತಪ್ಪಿಸಬೇಡಿ ಎಂದು ಯುವಕರಿಗೆ ಹೇಳಿದ್ದಾರೆ. 

ಈ ಮೂಲಕ ಒಂದೋಳ್ಳೆ ಸಂದೇಶವನ್ನು ಹೇಳಿದ್ದಾರೆ. ತಮ್ಮ ಎಕ್ಸ್‌ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ.  “ನಮ್ಮ ದೇಶದ ಎಲ್ಲಾ ಯುವ ಮತ್ತು ಮೊದಲ ಬಾರಿಗೆ ಮತದಾರರು ಮುಂಬರುವ ಚುನಾವಣೆಗಳಲ್ಲಿ ತಮ್ಮ ಮತವನ್ನು ಚಲಾಯಿಸಿ! ಈ ವರ್ಷ, ನಿಮ್ಮ ಮೂಲಭೂತ ಪ್ರಜಾಪ್ರಭುತ್ವವನ್ನು ಬಳಸಿ. ಸರಿಯಾದ ಅಭ್ಯರ್ಥಿಗೆ ಮತ ಚಲಾಯಿಸುವ ಹಕ್ಕು ಎಂದು ಬರೆದು ಪೋಸ್ಟ್‌ ಹಂಚಿಕೊಂಡಿದ್ದಾರೆ. 
ದುಲ್ಕರ್ ಸಲ್ಮಾನ್ ಅವರ ಈ ನಡೆ ಯುವಕರಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿಸಿದೆ. ನಟನ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ದುಲ್ಕರ್ ನಟನೆಯ ಕಿಂಗ್ ಆಫ್ ಕೋಥಾ ಸಿನಿಮಾ ಮಿಶ್ರ ವಿಮರ್ಶೆಗಳು ಎದುರಿಸಿದೆ. ಈ ನಡುವೆಯು ನಾಗರಿಕ ಜವಾಬ್ದಾರಿಗಳ ಮೇಲೆ ಅವರ ಗಮನವು ಮನರಂಜನೆಯ ಕ್ಷೇತ್ರವನ್ನು ಮೀರಿ ಅವರ ಬದ್ಧತೆಯನ್ನು ತೋರಿಸುತ್ತದೆ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.

Share this post:

Related Posts

To Subscribe to our News Letter.

Translate »