ಇತ್ತಿಚಿನ ದಿನಗಳಲ್ಲಿ ಫಿಟ್ನೆಸ್ ಎಂಬುದು ಎಲ್ಲರ ಜೀವನಕ್ಕೂ ಬಹಳ ಹತ್ತಿರದ ಸಬ್ಜೆಕ್ಟ್ ಆಗಿದೆ. ಎಲ್ಲರೂ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಅದರಲ್ಲೂ ಸೆಲೆಬ್ರೆಟಿಗಳಂತೂ ವರ್ಕೌಟ್ ನಿಲ್ಲಿಸುವ ಮಾತೇ ಇಲ್ಲ. ಇಂದಿನ ನಮ್ಮ ಫಿಟ್ನೆಸ್ ಕಾಲಂನಲ್ಲಿ ಧನ್ವಿರ್ ಫಿಟ್ನೆಸ್ ಗುಟ್ಟಿನ ಬಗ್ಗೆ ತಿಳಿಸಲಾಗುತ್ತಿದೆ.
ಧನ್ವೀರ್ ಬಜಾರ್ ಸಿನಿಮಾ ಮೂಲಕ ಇಂಡಸ್ಟಿಗೆ ಪದಾರ್ಪಣೆ ಮಾಡಿ, ಬಜಾರ್ ಹುಡುಗ ಎಂದೇ ಖ್ಯಾತಿ ಗಳಿಸಿದವರು. ಆಕ್ಷನ್ ಸಿನಿಮಾಗಳೆಂದರೆ ಇಷ್ಟಪಡುವ ಧನ್ವೀರ್, ಯಾವುದೇ ರೀತಿಯ ರಿಸ್ಕ್ ಇದ್ದರು ಆ ಫೈಟ್ ಮಾಡುವುದಕ್ಕೆ ಮುಂದೆ ಇರುತ್ತಾರೆ. ಈ ಆಕ್ಷನ್ ದೃಶ್ಯ ಆಗಲ್ಲ ಎಂದರೆ, ಯಾಕಾಗಲ್ಲ… ಒಮ್ಮೆ ಟ್ರೈ ಮಾಡೋಣಾ ಎಂದೇ ಮುನ್ನುಗ್ಗುತ್ತಾರೆ. ಒಂದು ದಿನವೂ ವರ್ಕೌಟ್ ಸ್ಟಾಪ್ ಮಾಡದ ಧನ್ವೀರ್ ತಮ್ಮ ಫಿಟ್ನೆಸ್ ಗುಟ್ಟನ್ನು `ಚಿತ್ತಾರ’ದೊಂದಿಗೆ ಹಂಚಿಕೊಂಡಿದ್ದಾರೆ.
`ಫಿಟ್ನೆಸ್ ಎಂಬುದು ಈಗಂತು ಬಹಳ ಮುಖ್ಯವಾಗುತ್ತೆ. ಯಾಕಂದ್ರೆ ಆರೋಗ್ಯ ಕಾಪಾಡಿಕೊಳ್ಳುವುದಕ್ಕೂ ವರ್ಕೌಟ್ ಬಹಳ ಮುಖ್ಯ. ಈಗಿನ ಫುಡ್‌ಗಳ ಜೊತೆಗೆ ಒಂದಷ್ಟು ದೇಹದಂಡನೆ ಮಾಡಿದಾಗ ಮಾತ್ರ ಮನುಷ್ಯ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಜೊತೆಗೆ ಒಂದಷ್ಟು ವರ್ಷಗಳ ಕಾಲ ಬದುಕುಳಿಯಲು ಸಾಧ್ಯವಾಗುತ್ತದೆ. ಕೊಲೆಸ್ಟ್ರಾಲ್ ಜಾಸ್ತಿಯಾದಾಗ ಒಂದಷ್ಟು ಕಾಯಿಲೆಗಳು ನಮ್ಮನ್ನು ಕಾಡುತ್ತವೆ. ಬಿಪಿ, ಶುಗರ್ ಈ ಎಲ್ಲದರಿಂದ ದೂರ ಇರಬೇಕಾಗುತ್ತದೆ. ಹೀಗಾಗಿ ಸೆಲೆಬ್ರೆಟಿ ಅಂತಾನೇ ಅಲ್ಲ, ನಾರ್ಮಲ್ ಆಗಿ ಎಲ್ಲರಿಗೂ ಫಿಟ್ನೆಸ್‌ಎಂಬುದು ಬಹಳ ಮುಖ್ಯ ಫೀಟ್ನೆಸ್ ಕಡೆಗೆ ನಾವೂ ಇನ್ನು ಹೆಚ್ಚಿನ ಗಮನ ನೀಡಬೇಕಾಗುತ್ತದೆ.
ನಾವೆಲ್ಲಾಆಡಿಯನ್ಸ್ ನ ಎಂಟರ್‌ಟೈನ್ ಮಾಡಬೆಕು ಹೀಗಾಗಿ ಫಿಟ್ನೆಸ್ ಮೆಂಟೈನ್ ಮಾಡಬೇಕಾಗುತ್ತದೆ. ಪ್ರತಿ ಸಿನಿಮಾಗೂ ಆ ಪಾತ್ರಕ್ಕೆ ಯಾವ ಥರಕಾಣಬೇಕು ಅಂತ ಇರುತ್ತದೋ ಆ ರೀತಿ ಕಾಣುವಂತೆ ಬಾಡಿಟ್ರಾನ್ಸ್ಫಾರ್ಮೆಶನ್ ಮಾಡಿಕೊಳ್ಳುತ್ತಾ ಇರುತ್ತೀನಿ. ಈಗಿನ ಜನರೇಷನ್‌ಗೆ ಸಿಕ್ಸ್ ಪ್ಯಾಕ್, ೮ ಪ್ಯಾಕ್ ಅನ್ನೋದು ಟ್ರೆಂಡ್ ಆಗಿ ಬಿಟ್ಟಿದೆ. ಆದರೆ ಆ ರೀತಿಯ ಬಾಡಿ ಬಿಲ್ಡ್ ಮಾಡುವುದು ಎಲ್ಲರಿಗೂ ಅವಶ್ಯಕತೆ ಇರುವುದಿಲ್ಲ. ಅದು ಪ್ರೊಫೆಷನಲ್ಸ್ ಮಾಡುವುದು. ನಾವೆಲ್ಲಾ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಏನು ಬೇಕೋ ಅದನ್ನೇ ಮಾಡಬೇಕಾಗುತ್ತದೆ. ನಾವೆಲ್ಲಾ ಹೇಗೆ ಮಾಡ್ತೀವಿ ಅಂದ್ರೆ ಸಿನಿಮಾ ನೋಡಿಕೊಂಡು, ಆ ಪಾತ್ರಕ್ಕೆತಕ್ಕನಾಗಿ ಬಾಡಿ ಬಿಲ್ಡ್ ಮಾಡಿಕೊಳ್ಳುತ್ತೀವಿ. ಬರೀ ವರ್ಕೌಟ್ ಮಾಡಿದ್ರೆ ಸಾಕಾಗುವುದಿಲ್ಲ, ಅದಕ್ಕೆತಕ್ಕನಾಗಿ ಫುಡ್ ಕೂಡ ಮೆಂಟೈನ್ ಮಾಡಬೇಕಾಗುತ್ತದೆ. ನನ್ನ ವರ್ಕೌಟ್ ಕಂಪ್ಲೀಟ್ ಸಿನಿಮಾಗೆ ಬೇಕಾದ ರೀತಿಯೇ ಇರುತ್ತದೆ. ಒಂದು ಸಿನಿಮಾಗೆ ದಪ್ಪ ಆಗಬೇಕು ಎಂದರೆ ಅದಕ್ಕೆ ಊಟದ ರೀತಿ ಬೇರೆ ಇರುತ್ತದೆ. ಸಣ್ಣ ಆಗಬೇಕು ಅಂದ್ರೆ ಅದಕ್ಕೆ ಊಟದ ಸ್ಟೈಲ್ ಬೇರೆ ಇರುತ್ತದೆ. ಕೈವ ಸಿನಿಮಾ ಮಾಡುವಾಗ ನಾನು ಕಂಪ್ಲೀಟ್ ನಾನ್ ವೆಜ್ ಬಿಟ್ಟಿದ್ದೆ. ಆರು ತಿಂಗಳುಗಳ ಕಾಲ ತಿಂದಿರಲಿಲ್ಲ. ಬೆಳಗ್ಗೆ ೪ ಗಂಟೆಗೆಎದ್ದು ಎರಡು ಗಂಟೆಗಳ ಕಾಲ ವರ್ಕೌಟ್ ಮಾಡ್ತೀನಿ. ಅದಾದ ನಂತರ ಶೂಟಿಂಗ್ ಹೋಗ್ತೀನಿ. ಅಲ್ಲಿಂದ ಬಂದ ಮೇಲೂ ಒಂದು ಸ್ವಲ್ಪ ಹೊತ್ತು ವರ್ಕೌಟ್ ಮಾಡಿ, ಊಟ ಮಾಡಿ ಮಲಗಿಕೊಳ್ಳುತ್ತೀನಿ. ವರ್ಕೌಟ್ ಜೊತೆಗೆ ಅದಕ್ಕೆ ಬೇಕಾದ ಡಯೆಟ್ ಕೂಡ ಮಾಡ್ತೀನಿ. ಔಟ್ ಡೋರ್ ಶೂಟ್ ಹೋದಾಗಲೂ ನಾನು ಜಿಮ್ ಫೆಸಿಲಿಟಿ ಇರುವ ಕಡೆಯಲ್ಲಿಯೇ ಉಳಿದುಕೊಳ್ಳುತ್ತೀನಿ. ಒಂದು ದಿನ ಬಿಟ್ಟರು ಸೋಮಾರಿತನ ಬಂದು ಬಿಡುತ್ತದೆ. ಹೀಗಾಗಿ ನಾನು ಯಾವತ್ತು ಕೂಡ ವರ್ಕೌಟ್ ಮಾಡುವುದನ್ನು ಬಿಡಲ್ಲ’ ಎಂದಿದ್ದಾರೆ.