Sandalwood Leading OnlineMedia

ಮತ್ತೆ ಐತಿಹಾಸಿಕ ಪಾತ್ರದಲ್ಲಿ ನಟ ದರ್ಶನ್!

ದರ್ಶನ್ ಜಟಾಧಾರಿಯಾಗಿ ಕುರುಚಲು ಗಡ್ಡ ಬಿಟ್ಟು ಹಣೆಗೆ ವಿಭೂತಿ ಬಳಿದುಕೊಂಡು ಕಚ್ಚೆ, ಅಂಗಿ ಧರಿಸಿ ಫಾಲ್ಸ್ ಮುಂದೆ ಕಾಣಿಸಿಕೊಂಡಿರುವ ಫೋಟೊಗಳು ವೈರಲ್ ಆಗುತ್ತಿದೆ. ಇದು ‘ರಾಜಾವೀರಮದಕರಿ ನಾಯಕ’ ಸಿನಿಮಾ ಚಿತ್ರೀಕರಣದ ವೇಳೆ ಕ್ಲಿಕ್ಕಿಸಿರುವ ಫೋಟೊಗಳು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

ಒಂದು ವಾರ ಕೇರಳದ ಅತಿರಪಲ್ಲಿ ಫಾಲ್ಸ್‌ ಬಳಿ ‘ರಾಜಾವೀರಮದಕರಿ ನಾಯಕ’ ಶೂಟಿಂಗ್ ನಡೆದಿತ್ತು. ಒಂದು ವಾರ ಚಿತ್ರೀಕರಣ ನಡೆಸಿದರೂ ಯಾವುದೇ ಫೋಟೊ, ವೀಡಿಯೋ ಲೀಕ್ ಆಗದಂತೆ ಚಿತ್ರತಂಡ ಎಚ್ಚರಿಕೆ ವಹಿಸಿತ್ತು. ಆದರೆ ಬಹಳ ದಿನಗಳ ಬಳಿಕ ಈ ಫೋಟೊಗಳು ವೈರಲ್ ಆಗುತ್ತಿದೆ. ಅಭಿಮಾನಿಗಳಂತೂ ನೆಚ್ಚಿನ ನಟನನ್ನು ಐತಿಹಾಸಿಕ ಪಾತ್ರದ ಲುಕ್‌ನಲ್ಲಿ ನೋಡಿ ಖುಷಿಯಾಗಿದ್ದಾರೆ. ‘ರಾಜಾವೀರಮದಕರಿ ನಾಯಕ’ ಸಿನಿಮಾ ಮೂಡಿ ಬಂದರೆ ಚೆನ್ನಾಗಿರುತ್ತದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ ಮದಕರಿ ನಾಯಕರ ಜೀವನಾಧರಿತ ಚಿತ್ರದಲ್ಲಿ ನಟಿಸಲು ಸುದೀಪ್ ಹಾಗೂ ದರ್ಶನ್ ನಡುವೆ ಪೈಪೋಟಿ ನಡೆದಿತ್ತು. ಸುದೀಪ್ ಸಹ ಮದಕರಿ ನಾಯಕರ ಜೀವನಾಧರಿತ ಸಿನಿಮಾ ಮಾಡಲು ಮನಸ್ಸು ಮಾಡಿದ್ದರು. ಅದಕ್ಕಾಗಿ ತಯಾರಿ ನಡೆಸಿದ್ದರು. ಅಷ್ಟರಲ್ಲೇ ದರ್ಶನ್ ಹೀರೊ ಸಿನಿಮಾ ಘೋಷಣೆ ಆಗಿತ್ತು. ಸುದೀಪ್ ತಾವು ಕೂಡ ಸಿನಿಮಾ ಮಾಡುವ ಬಗ್ಗೆ ಮಾತನಾಡಿದ್ದರು. ಕೊನೆಗೆ ನೀವೇ ಮಾಡಿ ಎಂದು ಬಿಟ್ಟುಕೊಟ್ಟರು. ನಗರದ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ‘ರಾಜಾವೀರಮದಕರಿ ನಾಯಕ’ ಚಿತ್ರಕ್ಕೆ ಚಾಲನೆ ನೀಡಲಾಗಿತ್ತು. ರಾಜಮಾತೆಯ ಪಾತ್ರದಲ್ಲಿ ಸುಮಲತಾ ಅಂಬರೀಶ್ ನಟಿಸಬೇಕಿತ್ತು. ಹಂಸಲೇಖ ಸಂಗೀತ, ಸಾಹಿತ್ಯ ಒದಗಿಸಲು ಒಪ್ಪಿದ್ದರು. ಘಟಾನುಘಟಿ ಕಲಾವಿದರನ್ನು ಕಾಸ್ಟ್ ಮಾಡಲು ಚಿತ್ರತಂಡ ಮುಂದಾಗಿತ್ತು. ಆದರೆ ಅಷ್ಟರಲ್ಲೇ ಸಿನಿಮಾ ನಿಂತು ಹೋಯಿತು. ಒಂದು ವಾರ ಚಿತ್ರೀಕರಣದ ಬಳಿಕ ಯಾಕೋ ಹಿಡಿತ ಸಿಗಲಿಲ್ಲ. ಅದಕ್ಕೆ ಸಿನಿಮಾ ನಿಲ್ಲಿಸಿದೆವು ಎಂದು ದರ್ಶನ್ ಹೇಳಿದ್ದರು.

 

 

Share this post:

Translate »