Sandalwood Leading OnlineMedia

ದರ್ಶನ್ ‘ ಕ್ರಾಂತಿ’ಗೆ ಫ್ಯಾನ್ಸ್ ಸಾಥ್!

ದರ್ಶನ್ ಕ್ರಾಂತಿಗೆ ಫ್ಯಾನ್ಸ್ ಸಾಥ್!

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಬರ್ತಿದೆ ಅಂದ್ರೆ ಸಾಕು, ಅವರ ಅಭಿಮಾನಿಗಳಿಗೆ ಅದು ಹಬ್ಬವೇ ಸರಿ. ಸಿನಿಮಾ ಹೇಗಿರುತ್ತೋ ಬಿಡುತ್ತೋ, ಒಟ್ಟಾರೆ ಅವರ ಸಿನಿಮಾ ಬಂದರೆ ಸಾಕು ಎನ್ನುವ ನಿಟ್ಟಿನಲ್ಲಿ ನಟ ದರ್ಶನ್ ಅಭಿಮಾನಿಗಳು ಅವರ ಚಿತ್ರಗಳಿಗಾಗಿ ಕಾಯುತ್ತಾ ಇರುತ್ತಾರೆ. ಅಂತೆಯೇ ಈಗ ‘ಕ್ರಾಂತಿ’ ಸಿನಿಮಾಗಾಗಿ ಕೂಡ ಕಾಯುತ್ತಿದ್ದಾರೆ. ಹಾಗಂತಾ ಕಾಯುತ್ತಾ ಸುಮ್ಮನೆ ಕೂತಿಲ್ಲ. ಚಿತ್ರತಂಡಕ್ಕಿಂತಲೂ ಹೆಚ್ಚಿನ ಕಾಳಜಿ ವಹಿಸಿ, ಸಿನಿಮಾ ಪ್ರಚಾರಕ್ಕೆ ಇಳಿದು ಬಿಟ್ಟಿದ್ದಾರೆ. ಅಷ್ಟಕ್ಕೂ ಹಲವು ದಿನಗಳಿಂದ ದರ್ಶನ್ ‘ಕ್ರಾಂತಿ’ ಸಿನಿಮಾದ ಸದ್ದು ನಿರಂತರವಾಗಿ ಕೇಳಲು ದರ್ಶನ್ ಅಭಿಮಾನಿಗಳೇ ಕಾರಣ.

ನಟ ದರ್ಶನ್‌ಗೆ ದೊಡ್ಡ ಅಭಿಮಾನಿ ಬಳಗ ಇದೆ. ಮಾಸ್ ಫ್ಯಾನ್ ಫಾಲೋಯಿಂಗ್ ಇರುವ ನಟ ಎನ್ನುವ ಖ್ಯಾತಿ ಇದೆ. ಇದು ಈಗ ಮತ್ತೊಮ್ಮೆ ಬಹಿರಂಗವಾಗಿ ಸಾಬೀತಾಗುತ್ತಿದೆ. ಅಷ್ಟರ ಮಟ್ಟಿಗೆ ದರ್ಶನ್ ಅಭಿಮಾನಿಗಳು ‘ಕ್ರಾಂತಿ’ ಚಿತ್ರವನ್ನು ಹೊತ್ತು ಮೆರೆಸುತ್ತಿದ್ದಾರೆ.

 

ಅಭಿಮಾನಿಗಳಿಗೆ ನಿವೇದಿತಾ ಗೌಡ ಗುಡ್ ನ್ಯೂಸ್

https://www.instagram.com/p/Cgv0H7ggrDl/

https://www.instagram.com/p/CgwIM9FvETB/

https://www.instagram.com/p/CgwMR5tjJBD/

https://www.instagram.com/p/CgrYAXYPMfh/

ಕಳೆದ ಕೆಲವು ತಿಂಗಳಿನಿಂದ ಕರುನಾಡಿನಾದ್ಯಂತ ಎಲ್ಲಿ ನೋಡಿದರೂ ‘ಕ್ರಾಂತಿ’ ಹವಾನೇ. ದಿನಕ್ಕೊಂದು ಕಡೆ ಅಭಿಮಾನಿಗಳು ‘ಕ್ರಾಂತಿ’ ಪಥ ಸಂಚಲನ ನಡೆಸಿದ್ದಾರೆ. ‘ಕ್ರಾಂತಿ’ ಚಿತ್ರದ ಪೋಸ್ಟರ್‌ಗಳನ್ನು ಹಿಡಿದು ದರ್ಶನ್ ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಯಲ್ಲಿ ‘ಕ್ರಾಂತಿ’ಯ ಕ್ರಾಂತಿಯನ್ನು ಪಸರಿಸುತ್ತಿದ್ದಾರೆ. ಒಬ್ಬ ನಟನ ಚಿತ್ರಕ್ಕೆ ಅಭಿಮಾನಿಗಳು ಇಷ್ಟು ದೊಡ್ಡ ಮಟ್ಟದಲ್ಲಿ ಪ್ರಚಾರಕ್ಕೆ ಇಳಿದಿರುವುದು ಇತ್ತೀಚಿನ ದಿನಗಳಲ್ಲಿ ಬಹುಶಃ ಇದೇ ಮೊದಲಿರಬಹುದು.

 

ಹೃದಯ ಎಲ್ಲರ ಬಳಿಯೂ ಇರುತ್ತೆ , ಹೃದಯವಂತಿಕೆ ಕೆಲವರಲ್ಲಿ ಮಾತ್ರ ಅಡಗಿರುತ್ತದೆ

ವಿ. ಹರಿಕೃಷ್ಣ ಚಿತ್ರಕ್ಕೆ ಆ್ಯಕ್ಷನ್ ಕಟ್​ಹೇಳೋದರ ಜೊತೆಗೆ ಮ್ಯೂಸಿಕ್​ಕಂಪೋಸ್​ಮಾಡ್ತಿದ್ದಾರೆ. ಇನ್ನು ಸಿನಿಮಾದ ಚಿತ್ರೀಕರಣ ನಂತರ, ಚಿತ್ರ ಡಬ್ಬಿಂಗ್ ಕೆಲಸಗಳು ಶುರುವಾಗಿವೆ. ಡಬ್ಬಿಂಗ್ ಮುಗಿಯುತ್ತಿದ್ದ ಹಾಗೆ ಸಿನಿಮಾ ರಿಲೀಸ್‌ಗೆ ರೆಡಿ ಅಂತಲೆ ಅರ್ಥ. ಚಿತ್ರದ ದರ್ಶನ್ ಅಭಿಮಾನಿಗಳೇ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ.

 

 

 

 

 

Share this post:

Related Posts

To Subscribe to our News Letter.

Translate »