ಗೆಳೆತನದಲ್ಲಿ ದಿಗ್ಗಜ ಎನಿಸಿಕೊಂಡ ಸ್ಯಾಂಡಲ್ವುಡ್ ಕರ್ಣ ರೆಬೆಲ್ಸ್ಟಾರ್ ಅಂಬರೀಶ್ ಅವರಿಗೆ 72 ವರ್ಷ. ಅವರ ಅನುಪಸ್ಥಿತಿಯಲ್ಲಿಯೇ ಪ್ರತಿ ವರ್ಷ ಈ ದಿನವನ್ನು ಹಬ್ಬದಂತೆ ಆಚರಿಸುತ್ತಾರೆ ಅವರ ಅಭಿಮಾನಿಗಳು. ಸುಮಲತಾ ಅಂಬರೀಷ್ ಅವರು ಬೆಳಿಗ್ಗೆಯೇ ಮಗ ಅಭಿಷೇಕ್ ಹಾಗೂ ಸೊಸೆ ಅವಿವಾ ಜೊತೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದಾರೆ.
ಅಂಬಿ ಹುಟ್ಟುಹಬ್ಬಕ್ಕೆ ಸೋಷಿಯಲ್ ಮೀಡಿಯಾದ ಭಾವುಕ ಪೋಸ್ಟ್ ಹಾಕಿರುವ ಸುಮಲತಾ “ಸ್ವರ್ಗದಲ್ಲಿ ಜನ್ಮದಿನದ ಶುಭಾಶಯಗಳು.. ಈ ದಿನ ನಿಮ್ಮೊಟ್ಟಿಗೆ ಹಲವು ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿದ ಸಂತೋಷ, ಕಣ್ಣೀರಿನ ನೆನಪುಗಳಿಂದ ತುಂಬಿದೆ. ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ.
ಇದನ್ನೂ ಓದಿ :ARCHANA JOIS
ನೀವು ತಂದ ಅಂತ್ಯವಿಲ್ಲದ ಸಂತೋಷವು ನನ್ನ ಹೃದಯವನ್ನು ಕೃತಜ್ಞತೆಯಿಂದ ಬೆಚ್ಚಗಾಗಿಸುತ್ತದೆ ಮತ್ತು ನನ್ನ ಪ್ರತಿಯೊಂದು ಆಲೋಚನೆಯನ್ನು ಪೂರೈಸುತ್ತದೆ. ನೀವು ಎಲ್ಲಿ ವಿಶ್ರಾಂತಿ ಪಡೆಯುತ್ತೀರೋ ಅಲ್ಲಿ ನಿಮ್ಮ ಸ್ಮರಣೆಯು ನನಗೆ ಎಷ್ಟು ಅಮೂಲ್ಯ ಮತ್ತು ಉತ್ತಮ ಎಂಬುದನ್ನು ನೀವು ನೋಡಬಹುದು ಎಂದು ನಾನು ಭಾವಿಸುತ್ತೇನೆ”ನಾನು ಮಾಡುವ ಪ್ರತಿಯೊಂದು ಕೆಲಸದಲ್ಲೂ ನೀವು ನನ್ನೊಂದಿಗೆ ಇದ್ದೀರಿ ಎಂದು ನಾನು ಭಾವಿಸುತ್ತೇನೆ . ಹಾಗಾಗಿ ನಾನು ನಿಮ್ಮ ಜನ್ಮದಿನವನ್ನು ಆಚರಿಸುತ್ತೇನೆ. ಆದರೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ. ಲವ್ ಯು ಫಾರ್ ಎವರ್.. ನಿನ್ನ ನೆನಪಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಅಂಬರೀಶ್ ಬರ್ತ್ಡೇ ಕಾಮನ್ ಡಿಪಿಯನ್ನು ನಟ ದರ್ಶನ್ ರಿವೀಲ್ ಮಾಡಿ ಶುಭ ಕೋರಿದ್ದರು. ಆ ಫೋಟೊ ವೈರಲ್ ಆಗುತ್ತಿದೆ. ಇನ್ನು ಸಿನಿಮಾ ತಾರೆಯರು, ರಾಜಕೀಯ ಮುಖಂಡರು, ಅಭಿಮಾನಿಗಳು ವಿಶೇಷ ದಿನದಂದು ಅಂಬಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅಂಬಿ ಪತ್ನಿ ಸುಮಲತಾ ಅಂಬರೀಶ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.