Sandalwood Leading OnlineMedia

ಮಹಾಕುಂಭಮೇಳದಲ್ಲಿ ಅಲ್ಲು ಅರ್ಜುನ್ ಪತ್ನಿ!

ಪುಷ್ಪ 2 ಸಿನಿಮಾ ರಿಲೀಸ್ ಬಳಿಕ ಟಾಲಿವುಡ್ ನಟ ಅಲ್ಲು ಅರ್ಜುನ್ ಸಾಲು ಸಾಲು ಸಂಕಷ್ಟ ಎದುರಿಸಿದ್ರು. ಪತಿಗಾಗಿ ಪುಷ್ಪರಾಜ್ ರಿಯಲ್ ಪತ್ನಿ ಸ್ನೇಹಾರೆಡ್ಡಿ ಪ್ರಯಾಗ್ರಾಜ್ ತಲುಪಿದ್ದಾರೆ. ಮಹಾಕುಂಭಮೇಳದಲ್ಲಿ ಮಿಂದೆದ್ದು, ಪತಿಗಾಗಿ ಪ್ರಾರ್ಥನೆ ಮಾಡಿದ್ದಾರೆ. ಪುಣ್ಯಸ್ನಾನದ ಬಳಿಕ ಸ್ನೇಹಾ ರೆಡ್ಡಿ ದೇಗುಲಗಳಿಗೆ ಭೇಟಿ ನೀಡಿದ್ದಾರೆ. ಪುಷ್ಪ 2 ಸಿನಿಮಾ ಪ್ರೀಮಿಯರ್ ಶೋ ವೇಳೆ ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ್ರು. ಈ ಕೇಸ್ ಅಲ್ಲು ಅರ್ಜುನ್ ಅವರಿಗೆ ಜೈಲು ದರ್ಶನ ಮಾಡಿಸಿತ್ತು.

ಅಲ್ಲು ಅರ್ಜುನ್ ಅರೆಸ್ಟ್ ಸುದ್ದಿ ದೊಡ್ಡ ಶಾಕಿಂಗ್ ಆಗಿತ್ತು. ಬನ್ನಿ ಮನೆಯವರನ್ನು ದುಃಖಕ್ಕೆ ದೂಡಿತ್ತು. ಅರೆಸ್ಟ್​ ಆದ ಒಂದೇ ದಿನಕ್ಕೆ ಬೇಲ್​ ಪಡೆದು ಅಲ್ಲು ಅರ್ಜುನ್ ಹೊರಗೆ ಬಂದ್ರು. ಹೊರಗೆ ಬಂದ್ಮೇಲು ಕೆಲ ವಿವಾದಗಳು ಬೆನ್ನು ಹತ್ತಿತ್ತು. ನಟ ಮೇಲೆ ಕೇಸ್ ಮೇಲೆ ಕೇಸ್ ಬಿತ್ತು. ಪತಿ ಬಂಧನವಾಗಿ ಬಿಡುಗಡೆಯಾಗಿ ಮನೆಗೆ ಬರ್ತಿದ್ದಂತೆ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಕಣ್ಣೀರು ಹಾಕಿದ್ರು. ಪತಿಗೆ ಎದುರಾದ ಸಂಕಷ್ಟ ನಿವಾರಣೆಗೆ ಪ್ರಾರ್ಥನೆ ಮಾಡಿದ್ರು. ಇದೀಗ ಸ್ನೇಹಾ ರೆಡ್ಡಿ ಮಹಾಕುಂಭಮೇಳಾದಲ್ಲಿ ಭಾಗಿಯಾಗಿದ್ದಾರೆ.

Share this post:

Translate »