ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇದೀಗ RCB ಗಾಗಿಯೇ ಜಿಂಗಲ ಜಿಂಗಲ ಜೈ ಹಾಡು ಹಾಡಿದ್ದಾರೆ. ಯೋಗರಾಜ್ ಭಟ್ ಬರೆದ ಈ ಹಾಡನ್ನ ಜಾನಪದ ಗಾಯಕ ಮಾಳು ನಿಪನಾಳ ಕೂಡ ಹಾಡಿದ್ದಾರೆ. ಇದರ ಇನ್ನಷ್ಟು ವಿಶೇಷ ಇಲ್ಲಿದೆ ಒಮ್ಮೆ ಓದಿ.
ಸ್ಯಾಂಡಲ್‌ವುಡ್ ಯೋಗರಾಜ್ ಭಟ್ರು (Yogaraj Bhat) ಇದೀಗ ಕ್ರಿಕೆಟ್ ಮೈದಾನಕ್ಕೂ ಪೆನ್ ಹಿಡಿದು ಇಳಿದ್ದಾರೆ. ತಮ್ಮ ವಿಶೇಷ ಶೈಲಿಯ ಬರವಣಿಗೆ ಮೂಲಕ ಜಿಂಗಲ ಜಿಂಗಲ ಜೈ ಅನ್ನೋ ಹಾಡು ಬರೆದಿದ್ದಾರೆ. ಈ ಹಾಡನ್ನ ಕೇವಲ ಹಡುಗರಿಗೆ ಮಾಡಿಲ್ಲ. ಬದಲಾಗಿ ಹುಡುಗಿಯರ RCB ತಂಡಕ್ಕೂ ಬರೆದಿದ್ದಾರೆ. ಹಾಗೆ RCB ಹುಡುಗರ ತಂಡದ ಹಾಡಿನಲ್ಲಿ ತುಂಬಾನೆ ವಿಶೇಷತೆಗಳಿವೆ. ಗಾಯಕ ಚೇತನ್ ಸೋಸ್ಕ ಸಂಗೀತ ಈ ಹಾಡಿನಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಇರೋದಲ್ಲದೇ ಹಾಡು ಕೂಡ ಹಾಡಿದ್ದಾರೆ. ಜಾನಪದ ಗಾಯಕ ಮಾಳು ನಿಪನಾಳ ಕೂಡ ಈ ಒಂದು ಹಾಡಿಗೆ ಧ್ವನಿ ಆಗಿದ್ದಾರೆ. RCB ಧ್ವಜ ಹಿಡಿದು ವಿಡಿಯೋದಲ್ಲೂ ಕಾಣಿಸಿಕೊಂಡಿದ್ದಾರೆ. ಇವರ ಈ ಒಂದು ವಿಶೇಷ ಹಾಡಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
RCB ಜಿಂಗಲ ಜಿಂಗಲ ಜೈ ಎಂದ ಧ್ರುವ ಸರ್ಜಾ
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜಿಂಗಲ ಜಿಂಗಲ ಜೈ ಅಂತ RCB ಅಂತ ಆರ್‌ಸಿಬಿ ತಂಡಕ್ಕೆ ಸಪೋರ್ಟ್ ಮಾಡಿದ್ದಾರೆ. ತಮ್ಮ ಈ ಒಂದು ವಿಶೇಷ ಕಂಠದಲ್ಲಿ ಎಲ್ಲಿರಿಗೂ ಸ್ಪೂರ್ತಿ ತುಂಬಿದ್ದಾರೆ. ಬಹುಶಃ ಈ ರೀತಿ ಮೊದಲ ಬಾರಿಗೆ ಧ್ರುವ ಕ್ರಿಕೆಟ್‌ಗಾಗಿಯೇ ಹಾಡಿದಂತನೂ ಇದೆ.
ಯೋಗರಾಜ್ ಭಟ್ರು ಬರೆದ ಈ ಹಾಡಿಗೆ ಸ್ವತಃ ಯೋಗರಾಜ್ ಭಟ್ರು ಧ್ವನಿ ಆಗಿದ್ದಾರೆ. ಹಿಂದಿ ಮಿಶ್ರಿತ ಕನ್ನಡದ ಈ RCB ಹಾಡಿನ ಹಿಂದಿ ಲೈನ್‌ಗಳನ್ನ ಭಟ್ರೆ ಇಲ್ಲಿ ಹೇಳಿದ್ದಾರೆ. ಇದನ್ನ ಕೇಳೋಕು ಮಜವಾಗಿಯೇ ಇದೆ.
RCB ಈ ಜಿಂಗಲ ಹಾಡಿನಲ್ಲಿ ಜಾನಪದ ಗಾಯಕ ಮಾಳು ನಿಪನಾಳ ಕೂಡ ಇದ್ದಾರೆ. ಯೋಗರಾಜ್ ಭಟ್ರ ಈ ಹಿಂದಿನ ಕರಟಕ ದಮನಕ ಚಿತ್ರದಲ್ಲಿ ಹಿತ್ಲಕ ಕರಿಬ್ಯಾಡ ಮಾವ ಹಾಡನ್ನ ಇದೇ ಮಾಳು ನಿಪನಾಳ ಹಾಡಿ ಮತ್ತಷ್ಟು ಫೇಮಸ್ ಆಗಿದ್ದಾರೆ.
RCBಯ ಈ ಜಿಂಗಲ ಹಾಡಿನಲ್ಲಿ ಸಂಗೀತ ನಿರ್ದೇಶಕ ಚೇತನ್ ಸೋಸ್ಕ ಕೂಡ ಇದ್ದಾರೆ. ಒಂದಷ್ಟು ಲೈನ್‌ಗಳನ್ನ ಇವರೂ ಹಾಡಿದ್ದಾರೆ. ಈ ಮೂಲಕ ಜಿಂಗಲ ಹಾಡು ಜೈ ಜೈ ಅಂತ ಎಲ್ಲರೂ ಗುಣುಗುವಂತೇನೆ ರೆಡಿ ಆಗಿದೆ.
RCB ಮಹಿಳಾ ತಂಡಕ್ಕೂ ಭಟ್ರು ಬರೆದ್ರು ಜಿಂಗಲ ಹಾಡು
RCB ಮಹಿಳಾ ತಂಡ ಮೊನ್ನೆ ಮೊನ್ನೆ ಕಪ್ ಗೆದ್ದುಕೊಂಡಿದೆ. ಇದರ ಬೆನ್ನಲ್ಲಿಯೇ ಇದೀಗ ಮಾರ್ಚ್-೨೨ ರಿಂದ ಐಪಿಎಲ್ ಪಂದ್ಯಗಳೂ ಶುರು ಆಗುತ್ತಿವೆ. ಇದೆಲ್ಲದರ ಜೊತೆಗೆ ಮಹಿಳಾ ತಂಡವೂ ಸಿಕ್ಕಾಪಟ್ಟೆ ಜನರ ಹೃದಯ ಗೆದ್ದಿದೆ.
ಹಾಗಾಗಿಯೇ ಇದೀಗ ಯೋಗರಾಜ್ ಭಟ್ರು ಜಿಂಗಲ ಹಾಡನ್ನ ಮಹಿಳೆ ತಂಡಕ್ಕೂ ಬರೆದಿದ್ದಾರೆ. ಈ ಹಾಡಿನ ಮೂಲಕ ಇದೀಗ ಮಹಿಳಾ RCB ತಂಡವೂ ಜಿಂಗಲ ಹಾಡಿಗೆ ಕುಣಿದು ಕುಪ್ಪಳಿಸಿದೆ ಅಂತಲೇ ಹೇಳಬಹುದು.