Sandalwood Leading OnlineMedia

ನಟ ಅನೀಶ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ ಅಭಿಷೇಕ್ ಶೆಟ್ಟಿ

`ನಮ್ ಗಣಿ ಬಿಕಾಂ ಪಾಸ್, ‘ಗಜಾನನ ಅಂಡ್ ಗ್ಯಾಂಗ್ ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರವಸೆ ಮೂಡಿಸಿರುವ ಪ್ರತಿಭಾನ್ವಿತ ನಿರ್ದೇಶಕ ಅಭಿಷೇಕ್ ಶೆಟ್ಟಿ. ಗಜಾನನ ಅಂಡ್ ಗ್ಯಾಂಗ್ ನಂತರ ಸದ್ದಿಲ್ಲದೆ ಹೊಸ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದು ಅದರ ಲೇಟೆಸ್ಟ್ ಸುದ್ದಿ ಹೊರಬಿದ್ದಿದೆ.

 

 

 

ಅಕಿರಾ, ‘ವಾಸು ನಾನ್ ಪಕ್ಕಾ ಕಮರ್ಶಿಯಲ್, ಸಿನಿಮಾ ಖ್ಯಾತಿಯ ನಟ ಅನೀಶ್  ಮುಂದಿನ ಸಿನಿಮಾಗೆ ಅಭಿಷೇಕ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಮ್ ಗಣಿ ಬಿಕಾಂ ಪಾಸ್, ಗಜಾನನ ಅಂಡ್ ಗ್ಯಾಂಗ್ ಸಿನಿಮಾಗಳಲ್ಲಿ ನಿರ್ದೇಶಕ ಅಭಿಷೇಕ್ ಶೆಟ್ಟಿ ಕೆಲಸ ನೋಡಿ ಇಂಪ್ರೆಸ್ ಆಗಿರುವ ಅನೀಶ್ ಅಭಿಷೇಕ್ ಶೆಟ್ಟಿ ಜೊತೆ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಭಿಷೇಕ್ ಶೆಟ್ಟಿ ಕಥೆ, ಚಿತ್ರಕಥೆ, ಡೈಲಾಗ್ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನು ‘ಅಕಿರಾ’ ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, ‘ಗುಳ್ಟು’ ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ.

ಕರುಳುಬಳ್ಳಿಯ ಕಥೆ ಹೇಳಲಿದೆ “2nd ಲೈಫ್”

 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಅಭಿಷೇಕ್ ಶೆಟ್ಟಿ ರೋಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದಲ್ಲಿ ಅನೀಶ್ ಹೊಸ ಅವತಾರದಲ್ಲಿ ಕಾಣಸಿಗಲಿದ್ದಾರೆ. ಈವರೆಗೆ ಅನೀಶ್ ಮಾಡಿರುವ ಸಿನಿಮಾಗಳಿಗಿಂತ ಈ ಸಿನಿಮಾ ಖಂಡಿತ ಭಿನ್ನವಾಗಿರುತ್ತೆ. ಸದ್ಯ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ ಸದ್ಯದಲ್ಲೇ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳೋದಾಗಿ ತಿಳಿಸಿದ್ದಾರೆ.

Share this post:

Related Posts

To Subscribe to our News Letter.

Translate »