ಒಬ್ಬ ನಟ ಅಭಿನಯದ ಮೇಲೆ ಮಾತ್ರ ಗಮನಹರಿಸಬೇಕು. ಆದರೆ ನಿರ್ದೇಶಕನಾದವನು ಎಲ್ಲಾ ಜವಾಬ್ದಾರಿಯನ್ನು ತಮ್ಮ ಹೆಗಲಿಗೇರಿಸಿಕೊಂಡು ಸಾಗಬೇಕು. ಹಾಗ್ ನೋಡಿದರೆ ಏಕಕಾಲಕ್ಕೆ ನಟನೆ ಹಾಗೂ ನಿರ್ದೇಶನ ಮಾಡುವುದು ಸುಲಭದ ಮಾತಲ್ಲ. ಅಂಥಹ ಪ್ರಯತ್ನದಲ್ಲಿ ಗೆದ್ದವರು ಕೆಲವೊಂದಿಷ್ಟು ಮಂದಿ. ಆ ಸಾಲಿನಲ್ಲಿ ಯುವ ನಿರ್ದೇಶಕ ಹಾಗೂ ಅಭಿಷೇಕ್ ಶೆಟ್ಟಿ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ ಗೌರಿ ಶಂಕರ್ ನಟನೆಯ ಭಾರಿ ನಿರೀಕ್ಷೆಯ ‘ಕೆರೆಬೇಟೆ’ ಟ್ರೈಲರ್ ರಿಲೀಸ್..
ಅಭಿಷೇಕ್ ಶೆಟ್ಟಿ ನಟನೆ ಜೊತೆಗೆ ನಿರ್ದೇಶಕನಾಗಿಯೂ ಗುರುತಿಸಿಕೊಂಡಿದ್ದಾರೆ. ನಮ್ ಗಣಿ ಬಿ.ಕಾಂ ಪಾಸ್ ಚಿತ್ರದ ಮೂಲಕ ನಟನಾಗಿ ಹಾಗೂ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಹೆಜ್ಜೆ ಇಟ್ಟವರು. ಮೊದಲ ಚಿತ್ರದಲ್ಲಿಯೇ ಗಮನಸೆಳೆದ ಅವರು ಆ ನಂತರ ಗಜಾನನ ಅಂಡ್ ಗ್ಯಾಂಗ್ ಚಿತ್ರ ನಿರ್ದೇಶಿಸಿ ಸೈ ಎನಿಸಿಕೊಂಡರು. ಅನೀಶ್ ಗೆ ಆರಾಮ್ ಅರವಿಂದ್ ಸ್ವಾಮಿ ಅಂತೇಳಿ ಕುಣಿಸಿರುವ ಅಭಿಷೇಕ್ ಶೆಟ್ಟಿ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಇದನ್ನೂ ಓದಿ ಮೋಷನ್ ಪೋಸ್ಟರ್ ನಲ್ಲಿ ‘ಲೈನ್ ಮ್ಯಾನ್’…ಮಾ.15ಕ್ಕೆ ರಘು-ತ್ರಿಗುಣ್ ಚಿತ್ರದ ದರ್ಶನ..
ಆರಾಮ್ ಅರವಿಂದ್ ಸ್ವಾಮಿ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರು ಅಭಿಷೇಕ್ ಶೆಟ್ಟಿ, ಈಗ ಹೊಸ ಚಿತ್ರ ಘೋಷಿಸಿದ್ದಾರೆ. ಅವರ ಜನ್ಮದಿನದ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ರಿವೀಲ್ ಮಾಡಲಾಗಿದೆ. ವಿಶೇಷ ಎಂದರೆ ಅಭಿಷೇಕ್ ಶೆಟ್ಟಿ ನಮ್ ಗಣಿ ಬಿ.ಕಾಂ ಪಾಸ್ ಸೀಕ್ವೆಲ್ ಗೆ ಮುನ್ನುಡಿ ಬರೆದಿದ್ದು, ಫಸ್ಟ್ ಲುಕ್ ಕೂಡ ರಿವೀಲ್ ಮಾಡಿದ್ದಾರೆ. ಸೂಟ್ ಬೂಟ್ ತೊಟ್ಟು, ಕೈಯಲ್ಲಿ ಕಾಫಿ ಕಪ್ ಬನ್ ಹಿಡಿದು ದುಬಾರಿ ಕಾರಿನ ಮುಂದೆ ಸ್ಟೈಲೀಶ್ ಆಗಿ ಅಭಿ ಪೋಸ್ ಕೊಟ್ಟಿದ್ದಾರೆ.
ನಮ್ ಗಣಿ ಬಿ.ಕಾಂ ಪಾಸ್ 2 ಚಿತ್ರದ ಮೂಲಕ ಅಭಿಷೇಕ್ ಶೆಟ್ಟಿ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟು ಹೀರೋ ಆಗಿ ದಿಬ್ಬಣ ಹೊರಡಲಿದ್ದಾರೆ. ಅವರ ಹೊಸ ಕನಸಿಗೆ ಬಿ ಎಸ್ ಪ್ರಶಾಂತ್ ಶೆಟ್ಟಿ ಶಕ್ತಿಯಾಗಿ ನಿಂತಿದ್ದಾರೆ. ಅದ್ವಿ ಕ್ರಿಯೇಷನ್ ನಡಿ ಪ್ರಶಾಂತ್ ಸೀಕ್ವೆಲ್ ಗೆ ಹಣ ಹಾಕುತ್ತಿದ್ದು, ಸುಮಂತ್ ಆಚಾರ್ಯ ಕ್ಯಾಮೆರಾ ಹಿಡಿಯಲಿದ್ದು, ಉಮೇಶ್ ಆರ್ ಬಿ ಕತ್ತರಿ ಕೆಲಸ, ಆನಂದ್ ರಾಜವಿಕ್ರಂ ಟ್ಯೂನ್ ಹಾಕಲಿದ್ದಾರೆ. ನಮ್ ಗಣಿ ಬಿ.ಕಾಂ ಪಾಸ್-2 ಸಿನಿಮಾದ ಕಥೆ ಬರವಣಿಗೆ ಹಂತದಲ್ಲಿದ್ದು, ಶೀಘ್ರದಲ್ಲೇ ಮತ್ತೊಂದು ಅಪ್ ಡೇಟ್ ನೊಂದಿಗೆ ಅಭಿಷೇಕ್ ಶೆಟ್ಟಿ ನಿಮ್ಮ ಮುಂದೆ ಹಾಜರಾಗಲಿದ್ದಾರೆ.