Sandalwood Leading OnlineMedia

ಅಭಿಷೇಕ್ ಬಚ್ಚನ್ ಸಿನಿಮಾಕ್ಕೆ ಗುಡ್ ಬೈ ಹೇಳ್ತಾರಾ!   ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ!?

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ಸದ್ಯ ಸಿನಿಮಾಗಳಿಂದ ಕೊಂಚ ದೂರ ಉಳಿದಿದ್ದಾರೆ. ಇತ್ತೀಚೆಗೆ ಅಭಿಷೇಕ್ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಹೇಳಿಕೊಳ್ಳುವ ಮಟ್ಟಿಗೆ ಸದ್ದು ಮಾಡುತ್ತಿಲ್ಲ. ಇದೇ ಕಾರಣದಿಂದಾಗಿ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಲು ಅಭಿಷೇಕ್ ಮುಂದಾಗಿದ್ದು ರಾಜಕೀಯಕ್ಕೆ ಎಂಟ್ರಿಕೊಡ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಸಂದರ್ಭ ಬಂದ್ರೇ ನಾನಲ್ಲ  ನನ್ನ ಸೊಸೆ ಐಶ್ವರ್ಯ ರೈ ಕೂಡ  ರಿಯಾಕ್ಟ್ ಮಾಡ್ತಾಳೆ, ಜಯಾ ಬಚ್ಚನ್  ಹೇಳಿದ ತನ್ನ ಸಂಸಾರದ ಸೂತ್ರಗಳು.

ಸಿನಿಮಾರಂಗಕ್ಕೂ ರಾಜಕೀಯಕ್ಕೂ ಅವಿನಾಭಾವ ಸಂಬಂಧ. ಈಗಾಗಲೇ ಬಿಗ್ ಸ್ಕ್ರೀನ್ ಸಾಕಷ್ಟು ನಟ, ನಟಿಯರು ರಾಜಕೀಯಕ್ಕೆ ಎಂಟ್ರಿಕೊಟ್ಟು ಸದ್ದು ಮಾಡಿದ್ದಾರೆ. ಇತ್ತೀಚಿಗೆ ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ದಳಪತಿ ರಾಜಕೀಯ ಎಂಟ್ರಿ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಬೆನ್ನಲ್ಲೇ ಅಭಿಷೇಕ್ ಬಚ್ಚನ್ ರಾಜಕೀಯಕ್ಕೆ ಎಂಟ್ರಿಯಾಗುವ ಬಗ್ಗೆ ಸುಳಿವು ಸಿಕ್ಕಿದೆ.

ದಳಪತಿ ವಿಜಯ್ ರಾಜಕೀಯ ಎಂಟ್ರಿ, ನಡುಕ ಹುಟ್ಟಿದ ಪಕ್ಷಗಳಾವ್ಯಾವು ಗೊತ್ತಾ?

 ಬಚ್ಚನ್ ಕುಟುಂಬಕ್ಕೆ ರಾಜಕೀಯ ಹೊಸದಲ್ಲ. ಅಭಿಷೇಕ್ ತಾಯಿ ಜಯಾ ಬಚ್ಚನ್ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಸಮಾಜವಾದಿ ಪಕ್ಷದ ಸದಸ್ಯೆ ಆಗಿದ್ದಾರೆ. ನಟ ಅಮಿತಾಭ್ ಬಚ್ಚನ್ ಕೂಡ ಹಿಂದೆ ರಾಜಕೀಯಕ್ಕೆ ಎಂಟ್ರಿಕೊಟ್ಟು ಬಂದಿದ್ದಾರೆ. ಈಗ ಅಭಿಷೇಕ್ ಬಚ್ಚನ್ ಕೂಡ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಹಾಸ್ಟೆಲ್ ಹುಡುಗರಿಗೆ  ನಟಿ ರಮ್ಯಾ ಲೀಗಲ್ ನೋಟೀಸ್, ಒಂದು ಕೋಟಿ ಪರಿಹಾರ ಬೇಡಿಕೆ 

ಬರುವ ಲೋಕಸಭಾ ಚುನಾವಣೆಗೆ ಅಭಿಷೇಕ್ ಬಚ್ಚನ್ ಅವರನ್ನು ಕಣಕ್ಕೆ ಇಳಿಸುವ ಪ್ಲ್ಯಾನ್‌ನಲ್ಲಿ ಸಮಾಜವಾದಿ ಪಕ್ಷದವರಿದ್ದಾರೆ ಎನ್ನಲಾಗುತ್ತಿದೆ. ಆದರೆ ಮೂಲಗಳ ಪ್ರಕಾರ, ಅಭಿಷೇಕ್‌ಗೆ ರಾಜಕೀಯಕ್ಕೆ ಎಂಟ್ರಿ ಕೊಡುವ ಯೋಚನೆ ಇಲ್ಲ. ಅವರ ಗಮನ ಏನೇ ಇದ್ದರೂ ಸಿನಿಮಾ ಎಂದು ಹೇಳಲಾಗುತ್ತಿದೆ. ಬಗ್ಗೆ ಬಚ್ಚನ್ ಕುಟುಂಬ ಅಧಿಕೃತ ಮಾಹಿತಿ ನೀಡುವವರೆಗೂ ಕಾದು ನೋಡಬೇಕಿದೆ.

Share this post:

Related Posts

To Subscribe to our News Letter.

Translate »