Left Ad
ರೂಮರ್ಸ್ ಗೆ ಠಕ್ಕರ್ ಕೊಟ್ಟ ಅಭಿ-ಐಶ್: ಫ್ಯಾಮಿಲಿ ಸಮೇತ ಹಾಜರ್ - Chittara news
# Tags

ರೂಮರ್ಸ್ ಗೆ ಠಕ್ಕರ್ ಕೊಟ್ಟ ಅಭಿ-ಐಶ್: ಫ್ಯಾಮಿಲಿ ಸಮೇತ ಹಾಜರ್

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರೂ ಸದ್ಯದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿತ್ತು.ಆದರೆ ಇದೀಗ ಅಭಿಷೇಕ್, ಐಶ್ವರ್ಯಾ ತಮ್ಮ ಇಡೀ ಕುಟುಂಬದ ಜೊತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಅಮಿತಾಭ್ ಮಗಳು ಶ್ವೇತಾ ಪುತ್ರ ಅಗಸ್ತ್ಯಾ ನಂದ ಅಭಿನಯದ ದಿ ಆರ್ಚೀಸ್ ಸಿನಿಮಾ ಪ್ರದರ್ಶನಕ್ಕೆ ಐಶ್ವರ್ಯಾ ಮತ್ತು ಅಭಿಷೇಕ್ ಹಾಗೂ ಪುತ್ರಿ ಆರಾಧ‍್ಯ ಜೊತೆಯಾಗಿ ಬಂದಿದ್ದಾರೆ. ಅಮಿತಾಭ್ ಬಚ್ಚನ್, ಜಯಾ ಬಚ್ಚನ್ ಕೂಡಾ ಒಟ್ಟಿಗೇ ಬಂದಿದ್ದಾರೆ.

ಇಡೀ ಬಚ್ಚನ್ ಕುಟುಂಬ ಜೊತೆಯಾಗಿ ನಿಂತು ಕ್ಯಾಮರಾಗಳಿಗೆ ಪೋಸ್ ನೀಡಿದೆ. ಜೊತೆಗೆ ಐಶ್ವರ್ಯಾ ಒಳ್ಳೆಯ ಮೂಡ್ ನಲ್ಲಿದ್ದು, ಅಳಿಯ ಅಗಸ್ತ್ಯನನ್ನು ತಮಾಷೆ ಮಾಡುತ್ತಾ ಎಲ್ಲರೆದುರು ನಗು ನಗುತ್ತಾ ಪೋಸ್ ಕೊಟ್ಟಿದ್ದಾರೆ. ಈ ಮೂಲಕ ಕುಟುಂಬದಲ್ಲಿನ ಬಿರುಕಿನ ವದಂತಿಗಳಿಗೆ ತೆರೆ ಎಳೆದಿದ್ದಾರೆ.

Spread the love
Translate »
Right Ad