ಸಾಕಷ್ಟು ಕಾಂಪಿಟೇಷನ್ ನಡುವೆ ಪ್ರೇಕ್ಷಕರ ಮುಂದೆ ಬಂದಿದ್ದ ಅಭಿರಾಮಚಂದ್ರ ಸಿನಿಮಾ ಗೆಲುವಿನ ವಿಜಯಯಾತ್ರೆ ಮುಂದುವರೆಸಿದೆ. ಅಕ್ಟೋಬರ್ 6ರಂದು ರಾಜ್ಯಾದ್ಯಂತ ಬಿಡುಗಡೆಯಾದ ಚಿತ್ರ ಯಶಸ್ವಿಯಾಗಿ 25 ದಿನ ಪೂರೈಸಿದ್ದು, ಇಡೀ ಚಿತ್ರತಂಡದ ಮುಖದಲ್ಲಿ ಮಂದಹಾಸದ ನಗು ಮೂಡಿದೆ.
ಅಭಿರಾಮಚಂದ್ರನ ಸಪ್ತೋತ್ಸವ ಕರಾವಳಿಯ ಭಾಗದ ಕಲಾ ಪ್ರೇಮಿಗಳ ಸಹಕಾರದೊಂದಿಗೆ ಅಭಿರಾಮಚಂದ್ರ ಸಿನಿಮಾದ ಸಪ್ತೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಏಳು ದಿನ ನಡೆಯುವ ಈ ಉತ್ಸವದಲ್ಲಿ ದೀಪ ಬೆಳಗಿಸುವ ಮೂಲಕ ಪ್ರೇಕ್ಷಕರು ಸಿನಿಮಾ ವೀಕ್ಷಣೆ ಮಾಡುತ್ತಾರೆ. ಈಗಾಗಲೇ ಮೂರು ದಿನಗಳ ನಡೆದ ಅಭಿರಾಮಚಂದ್ರ ಸಪ್ತೋತ್ಸವಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದ್ದು, ಸಿನಿರಸಿಕರು ಚಿತ್ರ ಮೆಚ್ಚಿಕೊಂಡಿದ್ದಾರೆ.
ವಸ್ತು, ಪ್ರೀತಿ ಇರಲಿ, ಎಮೋಷನ್ ಅಥವಾ ಆಕ್ಷನ್ ಇರಲಿ ಆ ವಸ್ತುವನ್ನು ಗಟ್ಟಿಯಾಗಿ ಹಿಡಿದು ಅದರ ಸುತ್ತ ಮುತ್ತ ಒಂದಿಷ್ಟು ಕಲರ್ಫುಲ್ ಅಂಶಗಳನ್ನು ಹದವಾಗಿ ಬೆರೆಸಿ ಪ್ರೇಕ್ಷಕರ ಬಳಿ ತೆಗೆದುಕೊಂಡು ಹೋಗಿ ಯಶಸ್ವಿಯಾಗುವುದು ಸುಲಭವಲ್ಲ. ಈ ಪ್ರಯತ್ನದಲ್ಲಿ ನಿರ್ದೇಶಕ ನಾಗೇಂದ್ರ ಗಾಣಿಗ ಯಶಸ್ವಿಯಾಗಿದ್ದಾರೆ.
ರಥಕಿರಣ, ಸಿದ್ದು ಮೂಲಿಮನಿ ವತ್ತು ನಾಟ್ಯರಂಗ, ಶಿವಾನಿ ರೈ ಇಡೀ ಕತೆಯನ್ನು ಈ ನಾಲ್ವರು ಹೆಗಲ ಮೇಲೆ ಎತ್ತಿಕೊಂಡು ಹೋಗಿದ್ದು, ಇವರ ಅಭಿನಯಕ್ಕೂ ಮೆಚ್ಚುಗೆ ಸಿಕ್ಕಿದೆ. ವೀಣಾ ಸುಂದರ್, ಸುಂದರ್, ಎಸ್. ನಾರಾಯಣ್, ಪ್ರಕಾಶ್ ತುಮ್ಮಿನಾಡು ಕೂಡ ಅಭಿರಾಮಚಂದ್ರನಿಗೆ ನೆರವಾಗಿದ್ದಾರೆ. ರವಿ ಬಸ್ರೂರು ಮ್ಯೂಸಿಕ್ ಕುಂದಾಪುರದ ವಾತಾವರಣಕ್ಕೆ ರಂಗು ತುಂಬಿದ್ದು ಎ. ಜಿ. ಸುರೇಶ್ ಹಾಗೂ ಮಲ್ಲೇಶ್ ಈ ಚಿತ್ರ ಸೊಗಸಾಗಿ ಮೂಡಿ ಬರುವಂತೆ ನಿರ್ಮಾಣ ಮಾಡಿದ್ದಾರೆ.