Left Ad
’ಅಭಿರಾಮಚಂದ್ರ’ ಟೀಸರ್ ನೋಡಿದ ನಟ ಶಿವರಾಜ್‌ಕುಮಾರ್ ಏನಂದ್ರು ಗೊತ್ತಾ? - Chittara news
# Tags

’ಅಭಿರಾಮಚಂದ್ರ’ ಟೀಸರ್ ನೋಡಿದ ನಟ ಶಿವರಾಜ್‌ಕುಮಾರ್ ಏನಂದ್ರು ಗೊತ್ತಾ?

ಶಾಲಾ ದಿನಗಳ ಪ್ರೀತಿ, ತುಂಟಾಟ, ಮುಗ್ದ ಸ್ನೇಹ ಸುಂದರ ನೋಟ ಅಭಿರಾಮಚಂದ್ರ ಟೀಸರ್ ಗೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಕಿರಿಕ್ ಪಾರ್ಟಿ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ನಾಗೇಂದ್ರ ಗಾಣಿಗ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾ.ರಥ ಕಿರಣ  ಸಿದ್ದು ಮೂಲಿಮನಿ, ನಾಟ್ಯರಂಗ  ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ.  ಶಿವಾನಿ ರೈ ನಾಯಕಿ ಆಗಿ ಅಭಿನಯಿಸಿದ್ದಾರೆ.

 

ಬಿಡುಗಡೆಯಾಯ್ತು `ಬಾ ನಲ್ಲೆ ಮದುವೆಗೆ’ ಟೀಸರ್ ಮತ್ತು ಹಾಡುಗಳು 

ಕುಂದಾಪುರ, ಬೆಂಗಳೂರು, ಮೈಸೂರು ಭಾಗದಲ್ಲಿ ಶೂಟಿಂಗ್ ನಡೆಸಲಾಗಿದ್ದು, ರವಿ ಬಸ್ರೂರು ಸಂಗೀತ ನಿರ್ದೇಶನದಲ್ಲಿ ಸಿನಿಮಾಕ್ಕಿದೆ. ರವಿ ಬಸ್ರೂರು ಮೂವೀಸ್ ನಡಿ ಸಿನಿಮಾವನ್ನು ಪ್ರಸ್ತುತ ಪಡಿಸಲಾಗುತ್ತಿದೆ. ರವಿ ಬಸ್ರೂರು ಪುತ್ರ ಪವನ್ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದು, ವೀಣಾ ಸುಂದರ್, ಸುಂದರ್ ವೀಣಾ, ಎಸ್.ನಾರಾಯಣ್, ಪ್ರಕಾಶ್ ತೂಮಿನಾಡು ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

 

 

`ರಾಜಯೋಗ’ದ ಮೂಲಕ ಧರ್ಮಣ್ಣನಿಗೊಲಿದ ಸುಯೋಗ! 

ಎ.ಜಿ. ಎಸ್ ಎಂಟಟೈನ್ಮೆಂಟ್ ಹಾಗೂ ರವಿ ಬಸ್ರೂರು ಮ್ಯೂಸಿಕ್ ಮತ್ತು ಮೂವೀಸ್ ಬ್ಯಾನರ್ ನಡಿ ಎ.ಜಿ.ಸುರೇಶ್ ಹಾಗೂ ಮಲ್ಲೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಸುರೇಶ್ ಆರುಮುಗಂ ಸಂಕಲನ  ಚಿತ್ರಕ್ಕಿದೆ. ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ನಾ ಕೊನೆ  ಹಂತದಲ್ಲಿರುವ ಅಭಿರಾಮಚಂದ್ರ ಸಿನಿಮಾ ಮೇ ತಿಂಗಳಲ್ಲಿ ತೆರೆಗೆ ಬರಲಿದೆ.

 

https://www.youtube.com/watch?v=t_9RSgEefOg&ab_channel=RaviBasrurMusic 

 

Spread the love
Translate »
Right Ad