Sandalwood Leading OnlineMedia

Abhay Veer

ಲೋಕಾಪುರದಿಂದ ಸಿನಿಮಾ ಲೋಕದಕಡೆಗೆ.
ಬಾಗಲಕೋಟೆಯ ಲೋಕಾಪುರದಿಂದ ಬಂದು ಕನ್ನಡ ಸಿನಿ ಲೋಕದಲ್ಲಿ ನೆಲೆÀಯೂರಿದ ಅಭಯ್ ವೀರ. ತಮ್ಮ ಸಿನಿ ಜೀವನದ ಏಳು ಬೀಳಿನಲಿ ಹತ್ತು ವರ್ಷ ಪೂರೈಸಿ ಒಂಬತ್ತು ಚಿತ್ರಗಳಲ್ಲಿ ಅಭಿನಯಿಸಿ ನಟನೆಯಲ್ಲಿ ಪರಿಪಕ್ವವಾದ ಕಲಾವಿದ. ಚಂದನವನದಲ್ಲಿ ಈಗಿರುವ ಫುಲ್ ಪ್ಯಾಕೇಜ್ಡ್ ಹೀರೋಗಳ ಸಾಲಿಗೆ ನಿಲ್ಲುವ ಕಲಾವಿದ. ನಟನೆ, ಆಕ್ಷನ್, ಡ್ಯಾನ್ಸ್, ಡೈಲಾಗ್ ಡೆಲಿವರಿ ಎಲ್ಲದರಲ್ಲೂ ಇವರದೇ ಒಂದು ಛಾಪಿದೆ. ಮೂಲತಃ ಕರ್ನಾಟಕದ ಉತ್ತರ ಭಾಗದಿಂದ ಬಂದಿದ್ದರೂ ಇವರು ರಾಜ್ಯದ ಎಲ್ಲಾ ಪ್ರಾಂತ್ಯದ ಪ್ರಾಂತೀಯ ಕನ್ನಡವನ್ನು (ಸ್ಲಾö್ಯಂಗ್) ಈತ ನಿರರ್ಗಳವಾಗಿ ಮಾತನಾಡಬಲ್ಲ. ಲವರ್‌ಬಾಯ್ ಲುಕ್‌ನಿಂದ ಹಿಡಿದು ರಗಡ್ ಲುಕ್, ಇನ್ನೋಸೆಂಟ್ ಲುಕ್ ಎಲ್ಲಾ ಲುಕ್‌ಗಳಿಗೂ ಸೂಟ್ ಆಗಬಲ್ಲ ಕಲಾವಿದ. ಸದಾ ಸಿಂಪಲ್ ಆಗಿರುವ, ಎಲ್ಲರ ಬಳಿ ತುಂಬಾ ಸಮಾಧಾನದಿಂದ ನಡೆದುಕೊಳ್ಳುವ ಕಲಾವಿದ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬAತೆ ಇವರು ಚಿತ್ರರಂಗದ ಮೇರು ನಟರ ಮೇರು ಗುಣಗಳನ್ನು ಅನುಸರಿಸಿಕೊಂಡು ಬದುಕುತ್ತಿರುವ ಶಿಸ್ತಿನ ಕಲಾವಿದ.

ಇನ್ನೂ ಓದಿ  *”ಉತ್ತರಕಾಂಡ” ಚಿತ್ರದಲ್ಲಿ ಧನಂಜಯ್ “ಗಬ್ರು ಸತ್ಯ” ಡಾಲಿ ಹುಟ್ಟುಹಬ್ಬಕ್ಕೆ ಬಿಡುಗಡೆಯಾಯಿತು ಪಾತ್ರ ಪರಿಚಯದ ಟೀಸರ್*

ಪಾಸ್ ಕೊಟ್ಟು ಪಾಸಾದರು ಶಿವಮಣಿ
ಅಭಯ್ ಮೂಲತಃ ಉತ್ತರ ಕರ್ನಾಟಕದ ಹುಡುಗ. ಬಿ.ಕಾಂ ಓದಿಕೊಂಡಿದ್ದಾರೆ. ಇವರದು ಒಂದು ವ್ಯಾಪಾರಿ ಕುಟುಂಬ, ದೊಡ್ಡ ಮನೆತನ. ಓದು ಮುಗಿದ ನಂತರ ಮನೆಯ ವ್ಯವಹಾರಗಳನ್ನು ನೋಡಿಕೊಂಡಿರಬೇಕು ಅನ್ನುವ ಆಲೋಚನೆಯಲ್ಲಿದ್ದವರು. ಅದು ಅವರ ಮನೆಯ ಹಿರಿಯರ ಅಭಿಪ್ರಾಯವೂ ಆಗಿತ್ತು. ಇವರಿಗಾಗಲೀ ಇವರ ಮನೆಯವರಿಗಾಗಲೀ ಸಿನಿಮಾ ಎಂದರೇ ಮನೇಲೋ ಟಿ.ವಿ,ಯಲ್ಲೋ, ಸಿನಿಮಾ ಹಾಲ್‌ನಲ್ಲೋ ನೋಡಿ ಮನರಂಜನೆ ಪಡೆದುಕೊಳ್ಳುವುದಷ್ಟೆ ಗೊತ್ತಿತ್ತು. ಈ ನಟನೆ ನಿರ್ದೇಶನ ನಿರ್ಮಾಣ ಇವ್ಯಾವುದು ಇವರಿಗೆ ಮತ್ತು ಇವರ ಕುಟುಂಬಕ್ಕೆ ತಿಳಿದಿರಲಿಲ್ಲಾ. ಆದರೇ ಅಭಯ್ ಮಾತ್ರ ಚಿಕ್ಕ ವಯಸ್ಸಿನಿಂದಲೂ ವಿಷ್ಣುವರ್ಧನ್ ರವರ ಹುಚ್ಚು ಅಭಿಮಾನಿ. ಅದಕ್ಕಿಂತ ಮೇಲಾಗಿ ಇವರಿಗೆ ಸಿನಿಮಾ ಮೇಲೆ ಬೇರಿನ್ಯಾವ ಸಂಬಧವೂ ಇರಲಿಲ್ಲಾ. ಹೀಗಿರುವಾಗ ಒಮ್ಮೆ ಅಭಯ್‌ರವರು ತಮ್ಮ ಕೆಲಸದ ಮೇಲೆ ಹುಬ್ಬಳ್ಳಿಗೆ ಹೋಗಿದ್ದರು. ಆಗ ಹುಬ್ಬಳ್ಳಿಯ ಒಂದು ಹೋಟೆಲ್‌ನಲ್ಲಿ ತಿಂಡಿ ತಿನ್ನುಲು ಹೋದ ಸಂಧರ್ಭದಲ್ಲಿ ಒಬ್ಬ ಕನ್ನಡ ಸಿನಿಮಾ ನಿರ್ದೇಶಕರನ್ನು ನೋಡ್ತಾರೆ. ನೋಡಿದವರೇ ಅವರನ್ನು ಹತ್ತಿರ ಹೋಗಿ ಮಾತನಾಡಿಸುತ್ತಾರೆ. ಆ ನಿರ್ದೇಶಕರು ಹುಬ್ಬಳ್ಳಿಗೆ ಬಂದ ವಿಷಯವನ್ನು ಅಭಯ್‌ಗೆ ತಿಳಿಸಿ, ತಾವು ಬಂದಿರುವ ಆ ಕಾರ್ಯಕ್ರಮಕ್ಕೆ ಒಂದು ಪಾಸ್ ಕೊಟ್ಟು ಅಭಯ್‌ರನ್ನೂ ಕರೆಯುತ್ತಾರೆ. ಆ ಕಾರ್ಯಕ್ರಮ ನೋಡಲು ಹೋದ ಅಭಯ್ ಆ ಕಾರ್ಯಕ್ರಮ ಮುಗಿಯುವವರೆಗೂ ಇದ್ದು ಆ ನಿರ್ದೇಶಕರನ್ನು ಹೊರಡುವ ಮುಂಚೆ ಮಾತಾಡಿಸಿಕೊಂಡು ಹೋಗುವ ಎಂದು ಆ ನಿರ್ದೇಶಕರ ಬಳಿಗೆ ಹೋಗ್ತಾರೆ. ಆ ಸಮಯದಲ್ಲಿ ಆ ನಿರ್ದೇಶಕರು ಅಭಯ್‌ಗೆ ಒಂದು ಮಾತು ಹೇಳ್ತಾರೆ. ನೀವು ಸಿನಿಮಾ ಇಂಡಸ್ಟಿçಗೆ ಬನ್ನೀ, ನಿಮಗೆ ಸಿನಿಮಾ ಕಳೆ ಇದೆ ಎಂದು ಅಲ್ಲಿಂದ ಅವರು ಪಾಸಾಗಿ ಹೋಗ್ತಾರೆ. ಹಾಗೆ ಪಾಸ್ ಕೊಟ್ಟು ಕರೆದು ಕನಸು ಕೊಟ್ಟು ತಮ್ಮ ಪಾಡಿಗೆ ತಾವು ಹೊರಟುಹೋದ ನಿರ್ದೇಶಕರೇ, ಆವತ್ತಿನ ಕಾಲದಲ್ಲಿ ಟ್ರೆಂಡ್ ಸೆಟ್ಟಿಂಗ್ ಸಿನಿಮಾಗಳನ್ನು ಕೊಟ್ಟಂತಹ ಶಿವಮಣಿಯವರು. ಅಂದು ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದ ಆ ಕಾರ್ಯಕ್ರಮ ಯಾವುದಪ್ಪಾ ಅಂದರೇ ಅದೇ ಶಿವಮಣಿ ನಿರ್ದೇಶನದ ಜೋಶ್ ಸಿನಿಮಾದ ಯಶಸ್ವಿ ೨೫ನೇ ದಿನದ ಕಾರ್ಯಕ್ರಮ.

 

  ಇನ್ನೂ ಓದಿ    *ನಿಖಿಲ್ ಕುಮಾರ್ ಅಭಿನಯದ ನೂತನ ಚಿತ್ರ ಆರಂಭ.ದಕ್ಷಿಣ ಭಾರತದ ಪ್ರತಿಷ್ಠಿತ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ*

ಕಲಿತದ್ದು ಬಿಸಿನೆಸ್ ಅಲ್ಲಾ ನಟನೆ.
ಬಿಸಿನೆಸ್ ಕಲಿತುಕೊಳ್ಳಲು ಬೆಂಗಳೂರಿಗೆ ಬರುತಿದ್ದ ಅಭಯ್, ಬೆಂಗಳೂರಿಗೆ ಬಂದು ಬಿಸಿನೆಸ್ ಕಡೆ ಮುಖಮಾಡಿಯೂ ಮಲಗಲಿಲ್ಲಾ. ಬೆಂಗಳೂರಿಗೆ ಬಂದು ಕಲಿಯಲು ಶುರುಮಾಡಿದ್ದು ನಟನೆ. ಅದ್ಯಾವ ಮಗ್ಗುಲಲ್ಲಿ ಎದ್ದು ಅದ್ಯಾರ ಮುಖ ನೋಡಿದ್ರೋ ಏನೋ, ಅಲ್ಲಿವರೆವಿಗೂ ಸಿನಿಮಾ ಅಂದರೇ ಬರೀ ಸಿನಿಮಾ ಮಂದಿರದೊಳಗಿನ ಪ್ರಪಂಚ. ಅಲ್ಲಿಗೆ ನಾವು ಬರೀ ಪ್ರೇಕ್ಷಕರು ಎಂದು ಅಂದುಕೊAಡಿದ್ದ ಅಭಯ್‌ಗೆ ನಿಜವಾದ ಸಿನಿಮಾ ಪ್ರಪಂಚದೊಳಗೆ ಕಾಲಿಡುವಂತಾಯಿತು. ಪರಿಚಯವೇ ಇಲ್ಲದ ಒಬ್ಬ ಸಿನಿಮಾ ಮಂದಿಯ ಒಂದೇ ಒಂದು ಮಾತಿಗೆ ಅಭಯ್ ತನ್ನ ವ್ಯವಹಾರವನ್ನೆಲ್ಲಾ ಬಿಟ್ಟು ಚಿತ್ರರಂಗಕ್ಕೆ ಬರಲು ನಿರ್ಧರಿಸಿದರು. ಆಗ ಅಭಯ್‌ರವರಿಗೆ ಸಿನಿಮಾ ಪ್ರಪಂಚದಲ್ಲಿ ಶ್ರೀರಕ್ಷೆಯಾಗಿ ಅವರ ಜೊತೆ ನಿಂತಿದ್ದು ಸಾಹಸಸಿಂಹ ವಿಷ್ಣುವರ್ಧನ್‌ರವರು. ಹೌದು ಅಭಯ್ ವಿಷ್ಣುದಾದಾರವರ ಅಪ್ಪಟ ಅಭಿಮಾನಿ ಬೆಳಿಗ್ಗೆ ಎದ್ದರೆಂದರೇ ಕಣ್ತೆರೆದು ನೋಡುವುದೇ ವಿಷ್ಣುವರ್ಧನ್‌ರವರನ್ನು.

 

  ಇನ್ನೂ ಓದಿ    *ಬಿಡದಿ ಸಮೀಪ ಪ್ರಾರಂಭವಾಯಿತು “ಜಾಲಿವುಡ್”*

ಯಾವ ಗಾಡ್ ಫಾದರ್ ಇಲ್ಲದೆ ಚಿತ್ರರಂಗಕ್ಕೆ ಬಂದ ಅಭಯ್‌ಗೆ ವಿಷ್ಣು ದಾದಾರವರೆ ಶ್ರೀರಕ್ಷೆ. ಒಂದು ಮಾತಿನಿಂದ, ದಾದಾರವರ ಸ್ಪೂರ್ತಿಯಿಂದ ಮೂಟೆ ಕನಸುಗಳ ಹೊತ್ತುಕೊಂಡು ಬೆಂಗಳೂರಿಗೆ ಬಂದ ಅಭಯ್, ಸ್ಟಾರ್ ಕ್ರಿಯೇರ‍್ಸ್ ಅನ್ನುವಾ ನಟನಾ ಶಾಲೆಗೆ ಸೇರಿಕೊಂಡು ನಟನೆಯನ್ನು ಕಲಿಯುತ್ತಾರೆ. ಹೀಗೆ ಎರಡು ವರ್ಷ ನಟನೆಯನ್ನು ಕಲಿತ ಅಭಯ್‌ರನ್ನು ಅದೇ ನಟನಾ ಶಾಲೆಯಲ್ಲಿ ಕಲಿತ ಹಿರಿಯ ವಿದ್ಯಾರ್ಥಿಗಳು ತಾವು ನಿರ್ದೇಶಿಸುತ್ತಿರುವ ಚಿತ್ರಕ್ಕೆ ಅಭಯ್‌ನನ್ನೂ ಹೀರೋ ಆಗಿ ಸೆಲೆಕ್ಟ್ ಮಾಡಿಕೊಳ್ತಾರೆ. ಮೂಟೆ ಕನಸುಗಳಲಿನ ಒಂದು ಮರಿ ಮೊಟ್ಟೆ ಹೊಡೆದು ಆಚೆ ಬರಲು ಶುರುವಾಯ್ತು. ಆ ಮೊದಲ ಕನಸಿಗೆ ಸಾಕ್ಷಿಯಾಗಿ ಮೊಟ್ಟ ಮೊದಲಬಾರಿಗೆ ‘ಸನಿಹ’ ಚಿತ್ರಕ್ಕೆ ಅಭಯ್ ನಾಯಕ ನಟರಾಗಿ ತೆರೆಮೇಲೆ ಬರ್ತಾರೆ.

 

Share this post:

Related Posts

To Subscribe to our News Letter.

Translate »