ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಕುರಿತು ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಅವರು ಇದೀಗ ತಮ್ಮ ಹೇಳಿಕೆ ಕುರಿತು ಕ್ಷಮೆಯಾಚಿಸಿದ್ದಾರೆ.
ಇದನ್ನೂ ಓದಿ ವಿಶ್ವಕಪ್ ಕ್ರಿಕೆಟ್: ಫೈನಲ್ ನಲ್ಲಿ ಭಾರತ ಗೆದ್ದರೆ ಬೀಚ್ ನಲ್ಲಿ ಬೆತ್ತಲೆಯಾಗಿ ಓಡುವೆ ಎಂದ ತೆಲುಗು ನಟಿ
ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಕುರಿತು ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಅವರು ಇದೀಗ ತಮ್ಮ ಹೇಳಿಕೆ ಕುರಿತು ಕ್ಷಮೆಯಾಚಿಸಿದ್ದಾರೆ.ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಟೀಕಿಸುವ ಭರದಲ್ಲಿ ಅನಗತ್ಯವಾಗಿ ಐಶ್ವರ್ಯ ರೈ ಅವರ ಹೆಸರು ಪ್ರಸ್ತಾಪ ಮಾಡಿದ ಅಬ್ದುಲ್ ರಜಾಕ್ ವಿರುದ್ಧ ವ್ಯಾಪಕವಾಗಿ ಟೀಕೆಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ, ವಿಡಿಯೊ ಪೋಸ್ಟ್ ಮಾಡಿ, ಕ್ಷಮೆಯಾಚಿಸಿದ್ದಾರೆ.
ಇದನ್ನೂ ಓದಿ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ ರಕ್ಷಿತ್ ಶೆಟ್ಟಿ
“ನಾನು ಅಬ್ದುಲ್ ರಜಾಕ್. ಸುದ್ದಿಗೋಷ್ಠಿ ವೇಳೆ ಪಾಕಿಸ್ತಾನ ಕ್ರಿಕೆಟ್ ತರಬೇತಿ ಹಾಗೂ ಉದ್ದೇಶದ ಕುರಿತು ಮಾತನಾಡುತ್ತಿದ್ದೆ. ಆಗ ನಾನು ಬಾಯಿತಪ್ಪಿನಿಂದಾಗಿ ಐಶ್ವರ್ಯಾ ರೈ ಅವರ ಹೆಸರು ಪ್ರಸ್ತಾಪಿಸಿದೆ. ನಾನು ವೈಯಕ್ತಿಕವಾಗಿ ಅವರ ಕ್ಷಮೆ ಕೇಳುತ್ತೇನೆ. ನಾನು ಯಾರ ಭಾವನೆಗಳಿಗೂ ಧಕ್ಕೆ ತರುವ, ನೋವುಂಟು ಮಾಡುವ ಉದ್ದೇಶ ಹೊಂದಿಲ್ಲ. ನಾನು ಬೇರೆ ಉದಾಹರಣೆ ಕೊಡಬೇಕಿತ್ತು. ಆದರೆ, ಅಚಾತುರ್ಯದಿಂದ ನಟಿಯ ಹೆಸರು ಪ್ರಸ್ತಾಪವಾಯಿತು” ಎಂದು 27 ಸೆಕೆಂಡ್‌ಗಳ ವೀಡಿಯೊವನ್ನು ಅಬ್ದುಲ್ ರಜಾಕ್ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ ʼಸಿಲ ನೋಡಿಗಳಿಲ್ʼ ತಮಿಳು ಚಿತ್ರಕ್ಕೆ ನಟಿ ಶರ್ಮಿಳಾ ಮಾಂಡ್ರೆ ಸಾರಥ್ಯ..!
ಪಿಸಿಬಿಯ ಆಡಳಿತ ಮಂಡಳಿಯನ್ನು ಟೀಕಿಸುವಾಗ, ಅಬ್ದುಲ್ ರಜಾಕ್ ಅವರು, ಐಶ್ವರ್ಯಾ ರೈ ಅವರನ್ನು ಉದಾಹರಣೆಯಾಗಿ ಬಳಸಿದ್ದರು.ನಾನು ಐಶ್ವರ್ಯಾ ರೈಯನ್ನು ಮದುವೆಯಾಗುವುದರಿಂದ ಉತ್ತಮ ನಡತೆ ಮತ್ತು ಸದ್ಗುಣಶೀಲ ಮಕ್ಕಳು ಹುಟ್ಟುತ್ತವೆ ಎಂಬ ನಿರೀಕ್ಷೆ ಸುಳ್ಳು ಎಂಬ ಅಧಿಕಪ್ರಸಂಗದ ಮಾತನ್ನು ಹೇಳಿದ್ದರು. ಪಾಕಿಸ್ತಾನ ಕ್ರಿಕೆಟ್ ಮಂಡಳಿಯೂ ಇದೇ ರೀತಿ ಒಳ್ಳೆಯ ಮಕ್ಕಳನ್ನು ಹುಟ್ಟಿಸುವ ಹುಸಿ ನಿರೀಕ್ಷೆಯಲ್ಲಿದೆ. ಆದರೆ ಅದು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ವಿರೋಧ ಹಾಗೂ ಟೀಕೆಗಳು ವ್ಯಕ್ತವಾಗಿದ್ದವು.