ಅಬ್ಬರ ಸಿನಿಮಾ ರಿಲೀಸ್‌ಗೆ ನಿರ್ಮಾಪಕರಾದ ಬಸವರಾಜ್ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ ಅಬ್ಬರ ಸಿನಿಮಾದ ಟ್ರೆöÊಲರ್ ಮತ್ತು ಹಾಡುಗಳು ಈಗಾಗಲೇ ನಿರೀಕ್ಷೆ ಹುಟ್ಟಿಸಿದ್ದು, ಮೂರು ಶೇಡ್ ನಲ್ಲಿಯೇ ಪ್ರಜ್ವಲ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮೂರಲ್ಲೂ ಪ್ರಜ್ವಲ್ ದೇವರಾಜ್ ವಿಭಿನ್ನವಾಗಿಯೇ ಕಾಣಿಸಿಕೊಳ್ಳಲಿದ್ದು ಅವರ ವೃತ್ತಿ ಬದುಕಿನಲ್ಲಿ ಇದೊಂದು ಮಹತ್ವದ ಚಿತ್ರವಾಗಲಿದೆ.
ಪ್ರಜ್ವಲ್ ದೇವರಾಜ್‌ಗೆ ಈ ಚಿತ್ರದಲ್ಲಿ ರಾಜಶ್ರೀ ಪೊನ್ನಪ್ಪ, ಲೇಖಾ ಚಂದ್ರ, ನಿಮಿಕಾ ರತ್ನಾಕರ್ ಜೋಡಿಯಾಗಿದ್ದಾರೆ. ಕೆಜಿಎಫ್ ಸಿನಿಮಾದ ಸಂಗೀತ ನಿರ್ದೇಶಕ ರವಿ ಬಸ್ರೂರ ಮಾಸ್ ಸಂಗೀತಕ್ಕೆ ಹೆಸರುವಾಸಿ ಆಗಿದ್ದಾರೆ. ಆದರೆ ಅಬ್ಬರ ಚಿತ್ರದಲ್ಲಿ ರವಿ ಬಸ್ರೂರ ಸುಮಧುರ ಸಂಗೀತವನ್ನೆ ಕೊಟ್ಟಿದ್ದಾರೆ. ಇಲ್ಲಿವರೆಗೂ ರವಿ ಬಸ್ರೂರು ಮಾಸ್ ಸಂಗೀತದ ಹಾಡುಗಳನ್ನ ಕೇಳಿದ್ದ ಪ್ರೇಕ್ಷಕರಿಗೆ ಅಬ್ಬರ ಬೇರೆ ಫೀಲ್ ಕೊಡಲಿದೆ ಎಂದು ಡೈರೆಕ್ಟರ್ ರಾಮನಾರಾಯಣ್ ಹೇಳುತ್ತಾರೆ.
ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿದರು “ಅರಸಯ್ಯನ ಪ್ರೇಮಪ್ರಸಂಗ” ಚಿತ್ರದ ಪೋಸ್ಟರ್
ಅಬ್ಬರ ಚಿತ್ರಕ್ಕೆ ರವಿ ಬಸ್ರೂರು ಹಿನ್ನೆಲೆ ಸಂಗೀತ ಕೂಡ ಇದೆ. ಇದನ್ನೂ ಕೂಡ ರವಿ ಬಸ್ರೂರು ಅದ್ಭುತವಾಗಿಯೇ ಕೊಟ್ಟಿದ್ದಾರೆ. ಇದು ಕೂಡ ಚಿತ್ರಕ್ಕೆ ದೊಡ್ಡ ಭರವಸೆಯಾಗಿದೆ. ಅಬ್ಬರದಲ್ಲಿ ಪಿರಿಯೋಡಿಕಲ್ ಎಪಿಸೋಡ್ ಕೂಡ ಇದೆ. ಇದು ಹಿನ್ನೆಲೆಯಲ್ಲಿ ಆಗಾಗ ಬರ್ತಾನೇ ಇರುತ್ತದೆ. ಇದು ನಾಯಕ ನಟ ಪ್ರಜ್ವಲ್ ದೇವರಾಜ್ ಅವರಿಗೆ ಕನೆಕ್ಟ್ ಕೂಡ ಆಗುತ್ತದೆ.