`ದುಷ್ಟ ಶಿಕ್ಷಣ, ಶಿಷ್ಟ ರಕ್ಷಣ’ ಇದು `ಅಬ್ಬರ’ ಸಿನಿಮಾದ ಒನ್‌ಲೀನ್ ಸ್ಟೋರಿ. ಇದೊಂದು ಆಕಾಶದಂತಹ ಅಪ್ಪನಗಿಗಾಗಿ ತೆರೆದುಕೊಳ್ಳುವ ಸೇಡಿನ ಕಥೆ. ಎರಡೂವರೆ ದಶಕಗಳಿಂದ ಮನದಲ್ಲಿ ಕಾಪಿಟ್ಟುಕೊಂಡ ಯುವಕನೊಬ್ಬನ ನೋವಿನ ಕಥೆ. ಪ್ರಜ್ವಲ್ ದೇವರಾಜ್ ಹಲವು ಶೇಡ್‌ಗಳಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾವನ್ನು ಕೆ.ರಾಮ್ ನಾರಾಯಣ್ ನಿರ್ದೇಶನ ಮಾಡಿದ್ದು, ಪ್ರಜ್ವಲ್ ವೃತ್ತಿ ಬದುಕಿನಲ್ಲಿ ಮಹತ್ವದ ಚಿತ್ರವಾಗುವ ಎಲ್ಲಾ ಸಾಧ್ಯತೆಗಳೂ ಇದ್ದ ಚಿತ್ರ.
ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ ಡೈಲಾಗ್ ರೈಟರ್ ಪ್ರಶಾಂತ್ ರಾಜಪ್ಪ
`ಅಬ್ಬರ’ ಸಿನಿಮಾದಲ್ಲಿ ಅಬ್ಬರದ್ದೇ ಅಬ್ಬರ. ಇಲ್ಲಿ ಲಾಜಿಕ್ ಕೇಳದೆ ರಾಮ್ ನಾರಾಯಣ್ ನರೇಶನ್‌ನ ಮ್ಯಾಜಿಕ್ ಅನ್ನಷ್ಟೇ ನೋಡಬೇಕು. ಪ್ರಜ್ವಲ್ ಅವರನ್ನು ಎಷ್ಟು ಮಾಸ್ ಆಗಿ ತೋರಿಸಲು ಸಾಧ್ಯವೋ ಅಷ್ಟು ಮಾಸ್ ಆಗಿ ರಾಮ್ ನಾರಾಯಣ್ ತೋರಿಸಲು ನಿರ್ದೇಶಕರು ಹರ ಸಾಹಸ ಪಟ್ಟಿದ್ದಾರೆ. ಅಡಿಗಡಿಗೂ ಭರ್ಜರಿ ಫೈಟ್‌ಗ ಅಬ್ಬರ, ಜೊತೆಗೆ ಮಾಸ್ ಆಗಿ ಪ್ರಜ್ವಲ್ ಅಬ್ಬರದ ಡೈಲಾಗ್. ಶಿವ, ಶಂಕರ್, ಪ್ರಸಾದ್ ಹೀಗೆ ನಾನಾ ಅವತಾರಗಳಲ್ಲಿ ಎಂಟ್ರಿ ಕೊಡುವ ಹೀರೋಗೆ ಆರಡಿ ಉದ್ದದ ವೈರಮುಡಿಗೆ (ರವಿಶಂಕರ್) ಕೊನೆಗಾಣಿಸುವುದೇ ಗುರಿ. ಪ್ರಭಾವಿ ಆಗಿರುವ ವೈರಮುಡಿಯನ್ನು ಮಣ್ಣುಮುಕ್ಕಿಸಲು ಹೀರೋ ಏನೆಲ್ಲ ಮೈಂಡ್‌ಗೇಮ್ ಆಡುತ್ತಾನೆ ಅನ್ನೋದೇ `ಅಬ್ಬರ’ ಇಂಟ್ರೆಸ್ಟಿ0ಗ್ ಪಾಯಿಂಟ್.
ನವೆಂಬರ್ 25 ರಿಂದ ರಾಜ್ಯಾದ್ಯಂತ “ತ್ರಿಬಲ್ ರೈಡಿಂಗ್” ಹೊರಡಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್
ನಿರ್ದೇಶಕ ರಾಮ್ ನಾರಾಯಣ್ ಕಥೆ, ಚಿತ್ರಕಥೆಯ ಜೊತೆ ಮಾಸ್ ಅಂಶಗಳನ್ನು ಎಗ್ಗಿಲ್ಲದೆ ಸಿನಿಮಾದಲ್ಲಿ ಬಳಸಿ ಟೈಟಲ್‌ಗೆ ಸಮರ್ಥನೆ ಕೊಟ್ಟಿದ್ದಾರೆ. ಕುಬ್ಜ ಕಲಾವಿದರ ಕಾಡುವ ಪಾತ್ರಗಳ ಜೊತೆ ಭರ್ಜರಿ ಹಾಡುಗಳು ಮನ ಮುಟ್ಟುತ್ತವೆ. ಚಿತ್ರದಲ್ಲಿ ನಿರ್ದೇಶಕರು ಪ್ರಜ್ವಲ್‌ಗೆ `ತ್ರಿಬಲ್ ರೈಡಿಂಗ್’ ಮಾಡಿಸಿದ್ದಾರೆ. ಮೂವರು ನಾಯಕಿಯರ ಜೊತೆಗೂ ಹೀರೋಗೆ ಅದ್ಭುತ ಲೊಕೇಶನ್‌ಗಳಲ್ಲಿ ಮೂರು ಡ್ಯುಯೆಟ್ ಸಾಂಗ್ ಇದೆ. ಆದರೆ, ಪ್ರೇಯಸಿರು ಕೈಕೊಟ್ಟಾಗ ಎಣ್ಣೆ ಸಾಂಗ್ ಮಾತ್ರ ಒಂದೇ ಇದೆ. ಮಜಾ ಕೊಡುವ ಹಾಡುಗಳು, ಸಿನಿಮಾ ಮುಗಿದ ಕಾಡುವುದಿಲ್ಲ. ಈ ಸಿನಿಮಾಗೆ `ಕೆಜಿಎಫ್’ ಖ್ಯಾತಿಯ ರವಿ ಬಸ್ರೂರು ಸಂಗೀತ ನೀಡಿದ್ದಾರೆ, ಆದರೆ ಇಲ್ಲಿ ಬಸ್ರೂರು ಘಮ ಕಾಣುವುದಿಲ್ಲ. ಕಥೆಯಲ್ಲಿ ಕೆಲವು ಕಡೆ ಲಾಜಿಕ್ ಮಿಸ್ ಆಗಿರೋದಕ್ಕೆ ರಾಮ್ ನಾರಾಯಣ್ ಬಳಿ ಖಂಡಿತಾ ಉತ್ತರ ಇದ್ದೇ ಇರುತ್ತದೆ. ಕೆಲವು ಕಡೆ ಗಂಭೀರ ಸೀನ್‌ಗಳ ಮಧ್ಯೆ ಬರುವ ನಗು ಹುಟ್ಟಿಸದ ಕಾಮಿಡಿ ಚಿತ್ರದ ಓಘಕ್ಕೆ ಅಡಿಯಾಗುತ್ತದೆ. ಸಿನಿಮಾದಲ್ಲಿ ಸಾಕಷ್ಟು `ಕತ್ತರಿ ಪ್ರಯೋಗ’ಕ್ಕೆ ಅವಕಾಶವಿದ್ದರೂ ನಿರ್ದೇಶಕರು ಅದನ್ನು ಗಭೀರವಾಗಿ ಪರಿಗಣಿಸಲಿಲ್ಲ. ಛಾಯಾಗ್ರಹಣ ಉತ್ತಮವಾಗಿದ್ದು, ತಮ್ಮ ಸಂಭಾಷಣೆಯಿ0ದಲೇ ಈ ಹಿಂದೆ ಗುರುತಿಸಿಕೊಂಡಿರುವ ನಿರ್ದೇಶಕರು, ಇಲ್ಲಿಯೂ ಅಬ್ಬರದ ಡೈಲಾಗ್‌ಗಳಿಂದ ಮಾಸ್ ಪ್ರೇಕ್ಷಕರಿಗೆ ಹತ್ತಿರವಾಗುತ್ತಾರೆ.
ಮೂರ್ನಾಲ್ಕು ಶೇಡ್‌ಗಳ ಪಾತ್ರವನ್ನು ಪ್ರಜ್ವಲ್ ಇನ್ನಷ್ಟು ಚೆನ್ನಾಗಿ ನಿರ್ವಹಿಸಬಹುದಿತ್ತೇನೋ. ಅವರು ಪಾತ್ರಕ್ಕೆ ಇನ್ನಷ್ಟು ತಯಾರಿ ಮಾಡಿಕೊಂಡಿದ್ದರೆ ಇನ್ನಷ್ಟು ತೂಕ ಇರುತಿತ್ತು. ಫೈಟ್, ಡ್ಯಾನ್ಸ್, ಮಾಸ್ ಡೈಲಾಗ್‌ಗಳನ್ನು ಹೇಳುವಲ್ಲಿ ಸೀಟಿ ಪಡೆದುಕೊಳ್ಳುವ ಪ್ರಜ್ವಲ್ ಅಭಿನಯದ ವಿಚಾರದಲ್ಲಿ ಇನ್ನಷ್ಟು ಮಾಗಬೇಕಿದೆ. ಮೂವರು ನಾಯಕಿಯರು ಅಲ್ಲಲಿ ನಿರ್ದೇಶಕರು ಕೆರದಾಗ ತೆರೆಮೇಲೆ ಬಂದು ವಿಧೇಯ ವಿಧ್ಯಾರ್ಥಿಗಳಂತೆ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮೂಡಿಸಿ ಹೋಗುತ್ತಾರೆ. ಖಳನಾಗಿ ರವಿಶಂಕರ್ `ಎಂದಿನAತೆ’ ಬೊಬ್ಬಿರಿದು ಅಬ್ಬರಿಸಿದ್ದಾರೆ. ಇನ್ನುಳಿದಂತೆ, ಕೋಟೆ ಪ್ರಭಾಕರ್, ಅರಸು ಮಹಾರಾಜ್ ಕಾಮಿಡಿ `ಫ್ರೊಫೆಶನಲ್’ ಖಳರಾಗಿ ಕಾಣಿಸಿಕೊಂಡಿದ್ದು, ಶೋಭರಾಜ್, ಶಂಕರ್ ಅಶ್ವತ್ಥ್, ವಿಕ್ಟರಿ ವಾಸು, ಸಲ್ಮಾನ್ ತಮ್ಮ ಪಾತ್ರಗಳನ್ನು ನಿಭಾಯಿಸಿದ್ದಾರೆ. ಅಸಮಾನ್ಯ ಪ್ರತಿಭೆ ಇರುವ ವಿಜಯ್ ಚೆಂಡೂರು ನಗಿಸಲು ಹರ ಸಾಹಸ ಮಾಡುತ್ತಾರೆ. ಇನ್ನು ಕುಬ್ಜ ಪಾತ್ರಗಳ ಮೂಲಕ ಕಥೆ ಹೇಳಿರುವ ರಾಮ್ ನಾರಾಯಣ್ ಅವರ ಹೊಸ ರೀತಿಯ ಯೋಚನೆ ಮೆಚ್ಚಲೇಬೇಕು. ಆ ಪಾತ್ರಗಳ ಕುಬ್ಜ ಮೂಲಕ ಅವರು ಹೇಳ ಹೊರಟಿರುವ ಸಂದೇಶ ನಿಜಕ್ಕೂ ಈ ಕಾಲದ ಅಗತ್ಯ.
300 ಕೇಂದ್ರಗಳಲ್ಲಿ 50 ದಿನಗಳನ್ನು ಮುಗಿಸಿ ಮುನ್ನುಗ್ಗುತ್ತಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ `ಕಾಂತಾರ’
ಒಟ್ಟಿನಲ್ಲಿ, ಬೆರಳ ತುದಿಯಲ್ಲಿಯೇ ಪ್ರಪಂಚದ ಎಲ್ಲಾ ರೀತಿಯ ಸಿನಿಮಾಗಳನ್ನು ನೋಡುವ ಅವಕಾಶ ಇರುವ ಪ್ರೇಕ್ಷಕ `ಅಬ್ಬರ’ದಂತಹ ಸಿನಿಮಾವನ್ನು ಎಷ್ಟರಮಟ್ಟಿಗೆ ಮೆಚ್ಚುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.