Sandalwood Leading OnlineMedia

“ಅಬ್ಬಬ್ಬ” ಟ್ರೇಲರ್ ಗೆ ಕಿಚ್ಚ ಸುದೀಪ ಮೆಚ್ಚುಗೆ

 

 

 ಸಂಪೂರ್ಣ ಮನೋರಂಜನೆಯ ಈ ಚಿತ್ರ ಜುಲೈ ಒಂದರಂದು ತೆರೆಗೆ‌.

 

ಕನ್ನಡ ಚಿತ್ರರಂಗದಲ್ಲಿ ಹೊಸಪ್ರಯತ್ನಗಳಿಗೆ ಕಿಚ್ಚ ಸುದೀಪ ಅವರ ಬೆಂಬಲ ಇದೇ ಇರುತ್ತದೆ. ಇಂತಹ ಉತ್ತಮ ಗುಣವುಳ್ಳ ಸುದೀಪ್ ಅವರು, ಉತ್ತಮ ಮನೋರಂಜನೆಯ “ಅಬ್ಬಬ್ಬ” ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಸುದೀಪ್ ಅವರ ಟ್ವಿಟರ್‌ ವಾಲ್ ನಲ್ಲೇ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರ ಜುಲೈ ಒಂದರಂದು ತೆರೆಗೆ ಬರಲಿದೆ.

“ತುಂಬ ದಿನಗಳ ನಂತರ ಒಂದು ಅದ್ಭುತವಾದ ಕಾಮಿಡಿ ಸಿನೆಮ. ಇದು ಸಾಮಾನ್ಯವಾಗಿ ಬಂದ ಕಾಮಿಡಿ ಚಿತ್ರ ಅಲ್ಲ, ಯೂತ್ ಫುಲ್ ಕಂಟೆಂಟ್ ಇರುವ, ಇತ್ತೀಚಿನ ದಿನಗಳಿಗೆ ಅಪರೂಪದ ಚಿತ್ರ” ಎಂದು ಅಬ್ಬಬ್ಬ ಟ್ರೇಲರ್ ನೋಡಿ ಸುದೀಪ್ ಹೇಳಿದ್ದಾರೆ.ಮೀರಾಮಾರ್ ಸಂಸ್ಥೆಯ ಮೂಲಕ ಆನ್ ಆಗಸ್ಟೇನ್ ಹಾಗೂ ವಿವೇಕ್ ಥಾಮಸ್ ನಿರ್ಮಿಸಿರುವ ಈ ವಿಭಿನ್ನ ಹಾಸ್ಯ ಕಥಾನಕವನ್ನು ಕೆ.ಎಂ.

 ನಿರ್ಮಾಣವಾಗಿರುವ ಈ ಚಿತ್ರವನ್ನು ಕೆ.ಎಂ.ಚೈತನ್ಯ ನಿರ್ದೇಶಿಸಿದ್ದಾರೆ. ಲಿಖಿತ್ ಶೆಟ್ಟಿ ಹಾಗೂ ಅಮೃತ ಅಯ್ಯಂಗಾರ್ ನಾಯಕ-ನಾಯಕಿಯಾಗಿ ನಟಿಸಿದ್ದಾರೆ.  ಖ್ಯಾತ ಕೆ.ಆರ್.ಜಿ ಸಂಸ್ಥೆಯ ಮೂಲಕ ಈ ಚಿತ್ರ ಬಿಡುಗಡೆಯಾಗುತ್ತಿದೆ.

 

Share this post:

Translate »