ಸೆನ್ಸಾರ್ ಮೆಚ್ಚಿದ “ಆವರ್ತ”
“ವಿಜೇತ ಚಿತ್ರ ” ನಿರ್ಮಿಸಿ ವೇಮಗಲ್ ಜಗನ್ನಾಥ ರಾವ್ ನಿರ್ದೇಶನ ಮಾಡಿರುವ ವಿಭಿನ್ನ ಥ್ರಿಲ್ಲರ್ ಚಿತ್ರ “ಆವರ್ತ “ವನ್ನ ಇತ್ತೀಚಿಗೆ ನೋಡಿದ ಸೆನ್ಸರ್ ಮಂಡಳಿಯವರು ಮೆಚ್ಚುಗೆ ವ್ಯಕ್ತಪಡಿಸಿ UA ಸರ್ಟಿಫಿಕೇಟ್ ಯಾವುದೇ ಕಟ್ಸ್ ಇಲ್ಲದೆ ನೀಡಿದ್ದಾರೆ, ಉತ್ತಮ ಸಂಭಾಷಣೆ, ಹೊಸತರಹದ ಸ್ಕ್ರೀನ್ ಪ್ಲೇ ಮತ್ತು ಕೊನೆಯ ವರೆಗೂ ತಳ್ಳಣಿಸುವಂತ ಸಸ್ಪೆನ್ಸ್ ಇದೆ ಎಂದು ಮೆಚ್ಚುಗೆ ತಿಳಿಸಿದ್ದಾರೆ. ಹೆಸರಾಂತ ಆಡಿಯೋ “jhankar audio” ಸಂಸ್ಥೆಯವರು ಆಡಿಯೋ ಹಕ್ಕುಗಳನ್ನು ಪಡೆದಿದ್ದು, ಹಿರಿಯ ಮಹಾನ್ ನಟರಾದ ಎಸ್ ಶಿವರಾಂ ನಟಿಸಿರುವ ಕಡೆಯ ಚಿತ್ರ,ಅದ್ಭುತವಾಗಿ ಅಭಿನಹಿಸಿದ್ದಾರೆ, ಹೊಸ ಪರಿಚಯ ನಾಯಕ ನಟನಾಗಿ ಜೈಚಂದ್ರ , ಹೊಸ ಪರಿಚಯ ಧನ್ವಿತ್, ಹಾಗೂ ನಾಯಕಿಯಾಗಿ ನಯನ, ಮೇಘನಾ ಗೌಡ, ಕಲ್ಲೇಶ್ ವರ್ಧನ್, ರಾಮರಾವ್ , ಶಶಿಧರ್ ಮುಂತಾದವರು ಅಭಿನಯಿಸಿದ್ದಾರೆ. ಛಾಯಾಗ್ರಹಣ :ಬಿಆರ್ ಮಲ್ಲಿಕಾರ್ಜುನ್, ಸಂಕಲನ: ಶಿವಕುಮಾರ್ ಯಾದವ್, ಸಂಗೀತ :ಅತಿಶಯ ಜೈನ್, ಸಾಹಸ: ಡಾಕ್ಟರ್ ಥ್ರಿಲ್ಲರ್ ಮಂಜು,ನಿರ್ಮಾಣ ನಿರ್ವಹಣೆ :ಕಿರಣ್ ರಾಜ್, ಬಿ.ಜಿ. ಜಗನ್ನಾಥರಾವ್ ಮತ್ತು ಗೆಳೆಯರು ನಿರ್ಮಿಸಿರುವ ಈ ಚಿತ್ರದಲ್ಲಿ ವಿಭಿನ್ನ ಕಥಾಹಂದರ ಇದ್ದು, ಇದೊಂದು ಮಿಸ್ಟರಿ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿರುತ್ತದೆ. ಹೊಸಬಗೆಯ ತಾಂತ್ರಿಕತೆ ಹೊಂದಿರುವ ಈ ಚಿತ್ರವನ್ನು ಬೆಂಗಳೂರು,ಮಡಕೇರಿ,ಉಡುಪಿ, ಕುಂದಾಪುರ,ಕಾರವಾರ,ಮುಂತಾದ ಕಡೆ ಚಿತ್ರಿಸಲಾಗಿದೆ.